ಪಂಚಮಸಾಲಿ ಸಮಾಜಕ್ಕೆ 24 ಗಂಟೆಯಲ್ಲಿ 2ಎ ಮೀಸಲಾತಿ ಸಿಹಿ ಸುದ್ದಿ ನೀಡಿದ್ರೆ ಡೈಮೆಂಡ್ ಕಲ್ಲು ಸಕ್ಕರೆಯಲ್ಲಿ ತುಲಾಭಾರ – ಜಯಮೃತ್ಯುಂಜಯ ಸ್ವಾಮೀಜಿ

ದಾವಣಗೆರೆ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಯನ್ನು 24 ಗಂಟೆ ಒಳಗೆ ಮುಖ್ಯಮಂತ್ರಿಗಳು ಅಥವಾ ಸರ್ಕಾರದ ಪ್ರತಿನಿಧಿ ಬಂದು ಸಿಹಿ ಸುದ್ದಿ ನೀಡಿದರೆ ಅವರಿಗೆ ಡೈಮೆಂಡ್ ಕಲ್ಲುಸಕ್ಕರೆಯಲ್ಲಿ ತುಲಾಭಾರ ನಡೆಸುತ್ತೇವೆ ಎಂದು ಕೂಡಲಸಂಗಮ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ತ್ರಿಶೂಲ್ ಕಲಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಿದ್ದ ವೇಳೆ ಕೊಟ್ಟಿದ್ದ ಅವಧಿ ಸೆ.15 ಕ್ಕೆ ಮುಗಿದಿದೆ. ಅದಕ್ಕಾಗಿ ಅಧಿನಿಂದ ಸಮಾಜದ ಬಾಂಧವರಿಗೆ ಮೀಸಲಾತಿ ಬಗ್ಗೆ ಜಾಗೃತಿ ಮೂಡಿಸಲು ಪ್ರತಿಜ್ಞಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಈಗ ಆ ಸಮಾವೇಶ ದಾವಣಗೆರೆಗೆ ಆಗಮಿಸಿದ್ದು ಇಲ್ಲಿ ಇಂದು ನಡೆಯುವ ಬೃಹತ್ ಸಮಾವೇಶದಲ್ಲಿ ಸರ್ಕಾರದ ಗಮನ ಹರಿಸುತ್ತೇವೆ. ನಾಳೆ ಬೆಂಗಳೂರಿನಲ್ಲಿ ಸಮಾವೇಶ ನಡೆಸಿ, ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದರು.
ಈಗಾಗಲೇ ಶೇ.99 ರಷ್ಟು ಮೀಸಲಾತಿ ಜಾರಿ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಹಿಂದುಳಿದ ವರ್ಗದಿಂದ ಆ ಬಿಲ್ ಪಾಸ್ ಮಾಡುವುದೊಂದೆ ಬಾಕಿ ಉಳಿದಿದೆ. ನಮ್ಮ ಹೋರಾಟದಿಂದ ಎಲ್ಲಾ ಒಳಪಂಗಡಗಳಿಗೂ ಮೀಸಲಾತಿಯ ಅರಿವು ಮಾಡಿದ್ದು, ಎಂ.ಎಸ್ ಪಾಟೀಲ್ ಅವರು ಸಹ ನೊಳಂಬ ಸಮಾಜಕ್ಕೆ ಮೀಸಲಾತಿ ನೀಡುವಂತೆ ಪ್ರಸ್ತಾವನೆ ಕಳಿಸಿದ್ದಾರೆ ಎಂದರು.
ಮಾಜಿ ಸಚಿವ ವಿಜಯಾನಂದ ಕಾಶಪ್ಪನವರ್ ಅಧ್ಯಕ್ಷತೆಯಲ್ಲಿ ಇಲ್ಲಿ ನಡೆಯುವ ಸಮಾವೇಶದಲ್ಲಿ
ಪ್ರತಿಜ್ಞಾ ಪಂಚಾಯತ್‌ನ ಸಮಾರೋಪ ಸಮಾರಂಭ ಜರುಗಲಿದ್ದು, ಸಮಾರಂಭ ಮುಗಿಯುವುದರೊಳಗೆ ಸರ್ಕಾರ ನಿರ್ಧಾರ ಪ್ರಕಟಿಸಬೇಕು. ಈ ಸಮಾವೇಶದಲ್ಲಿ ಸಮಾಜದ ಎಲ್ಲಾ ಶಾಸಕರು ಕೂಡ ಒಮ್ಮತ ನಿರ್ಣಯ ಕೈಗೊಳ್ಳಲಿದ್ದಾರೆ ಎಂದರು.
ಕಾರ್ಯಕ್ರಮಕ್ಕೆ ಶಾಸಕರಾದ ಯತ್ನಾಳ್, ಬೆಲ್ಲದ್, ಸಚಿವ ಸಿಸಿ ಪಾಟೀಲ್, ಲಕ್ಷಿ÷್ಮÃ ಹೆಬ್ಬಾಳ್ಕರ್, ಸೇರಿದಂತೆ ಹಲವಾರು ಭಾಗಿಯಾಗಲಿದ್ದಾರೆ. ಸರ್ಕಾರ ಆದಷ್ಟು ಬೇಗ ನಿರ್ಧಾರವನ್ನು ಪ್ರಕಟಿಸಬೇಕು ಏಕೆಮದರೆ ಸರ್ಕಾರ ಕೊಟ್ಟಿದ್ದ ಗಡುವು ಮುಗಿದಿದೆ. ಇನ್ನೇದಿದ್ದರೂ ನಾವು ಬೃಹತ್ ಹೋರಾಟ ಹಮ್ಮಿಕೊಳ್ಳುವುದೊಂದು ಬಾಕಿ ಇದೆ ಎಂದು ಎಚ್ಚರಿಕೆ ನೀಡಿದರು.
ಪಂಚಮಸಾಲಿ ಸಮಾಜದ ರಾಷ್ಟಿçÃಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮತ್ತು ಹೆಚ್.ಎಸ್. ಶಿವಶಂಕರ್ ಮಾತನಾಡಿ, 712 ಕಿಲೋಮೀಟರ್ ಪಾದಯಾತ್ರೆ ನಡೆಸಿ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಆರು ತಿಂಗಳ ಕಾಲ ಕಾಲಾವಕಾಶ ಕೊಡಲು ಸರ್ಕಾರ ಗಡುವು ಕೇಳಿತ್ತು. ಆ ಗಡುವು ಈಗ ಮುಕ್ತಾಯ ವಾಗಿದೆ. ಆದ್ದರಿಂದ ಪ್ರತಿಜ್ಞಾ ಪಂಚಾಯತ್ ಯಶಸ್ವಿಯಾಗಿ ದಾವಣಗೆರೆಗೆ ತಲುಪಿದ್ದೇವೆ. ಸಿಎಂ ಬೊಮ್ಮಯಿ ಕೂಡ ಶ್ರೀಗ ಆಶೀರ್ವದ ಪಡೆದು ಈ ಸಮಾಜದ ಋಣ ಇದೆ ಎಂದಿದ್ದರು. ಸಿಸಿ ಪಾಟೀಲ್ ಅವರು ಕೂಡ ರಾಣಿ ಚನ್ನಮ್ಮನ ಮೇಲೆ ಅಣೆ ಮಾಡಿದ್ದರು. ಈಗ ಸರ್ಕಾರ ಗಡುವು ಕೇಳಿದರೆ ತಾತ್ಕಾಲಿಕವಾಗಿ ಹೋರಾಟ ನಿಲ್ಲಿಸುತ್ತೇವೆ. ಆದರೆ ಹೋರಾಟ ಮಾತ್ರ ನಿರಂತರವಾಗಿ ಇರುತ್ತದೆ ಎಂದರು.
