ರಾಜ್ಯೋತ್ಸವ ಮುನ್ನವೇ ಕನ್ನಡದ ಜಾಥಾ, ಕನ್ನಡದ ಕಹಳೆ ಮೊಳಗಿಸಿದ ಸರ್ಕಾರಿ ಶಾಲೆ

ದಾವಣಗೆರೆ: ನಗರದ ಶ್ರೀ ರಾಮ ಬಡಾವಣೆಯಲ್ಲಿರುವ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ಮುಂಗಡವಾಗಿ ಕನ್ನಡದ ಜಾಥಾ, ಕನ್ನಡದ ಕಹಳೆ ಮೊಳಗಿತು.
ಶಿಕ್ಷಕರು, ಮಕ್ಕಳು, ಪೋಷಕರು, ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು, ವಿದ್ಯಾರ್ಥಿಗಳೊಂದಿಗೆ ಸೇರಿ ಕುವೆಂಪು ರಚಿಸಿರುವ ’ಬಾರಿಸು ಕನ್ನಡ ಡಿಂ ಡಿಮವ’, ಹಂಸಲೇಖ ಅವರ ’ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು’, ನಿಸ್ಸಾರ್ ಅಹ್ಮದ್ ಅವರ ನಿತ್ಯೋತ್ಸವ ಗೀತೆ ಹಾಡುಗಳನ್ನು ಹಾಡಿದರು.
ಕನ್ನಡ ಜಾಥಾ ಕಂಠಗೀತಗಾಯನ ಕಾರ್ಯಕ್ರಮವನ್ನು ಬಿಆರ್‌ಸಿ ಕಚೇರಿಯ ಬಿ.ಐ.ಇ.ಆರ್.ಟಿ ಗುರುಶಾಂತಪ್ಪ, ಸಿಆರ್‌ಪಿ ಭರತ್ ಆರ್‌ಎಂ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಪರಸಪ್ಪ, ಮುಖ್ಯಶಿಕ್ಷಕ ಕೆ.ಎಂ ಭೋಗೇಶ್, ಎ.ಎಲ್ ನಾಗವೇಣಿ ರವರು, ಶಿಕ್ಷಕರಾದ ಶಾಂತಮ್ಮ, ಕೌಶಲ್ಯ, ಮಂಜುಳಾ, ಪ್ರಭಾವತಿ ಮತ್ತು ಬಣಕಾರ್ ಹಾಜರಿದ್ದರು.