ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಸರ್ಕಾರಿ ಶಾಲೆಗೆ ಸುಣ್ಣ ಬಣ್ಣ.! ಮಕ್ಕಳ ಜೊತೆ ಆಟ ಪಾಠ.!

ದಾವಣಗೆರೆ: ದಾವಣಗೆರೆ ವ್ಯಾಪ್ತಿಯ ಶಿರಮಗೊಂಡನಹಳ್ಳಿಯ ಆರನೇ ಮೈಲಿ ಕಲ್ ಗ್ರಾಮದಲ್ಲಿ ಇರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ದಾವಣಗೆರೆಯ ಬಿಡಿಟಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಸುಣ್ಣ ಬಣ್ಣ ಬಳೆದು, ಶಾಲಾ ಮಕ್ಕಳೊಂದಿಗೆ ವಿವಿಧ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಲಾಯಿತು.
ಯುಬಿಡಿಟಿ ಇಂಜಿನಿಯರಿoಗ್ ಕಾಲೇಜಿನ ವಿದ್ಯಾರ್ಥಿ ಸಂಘದ ವತಿಯಿಂದ, ಯುವ ಸಂಕಲ್ಪ ಪ್ರತಿಷ್ಠಾನದ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಸಲಾಯಿತು, ದಾವಣಗೆರೆ ವ್ಯಾಪ್ತಿಯ ಶಿರಮಗೊಂಡನಹಳ್ಳಿಯ ಆರನೇ ಮೈಲಿಕಲ್ಲು ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಸಂಘದವತಿಯಿoದ, ಎರಡು ದಿನದ ಸೇವಾಕಾರ್ಯದ ಚಟುವಟಿಕೆಯನ್ನು ನಡೆಸಲಾಯಿತು, ಈ ಸೇವಾಕಾರ್ಯದಲ್ಲಿ ಶಾಲೆಯ ಗೋಡೆಗಳಿಗೆ ವಿದ್ಯಾರ್ಥಿಗಳು ಸುಣ್ಣ ಬಣ್ಣ ಹೊಡೆದರು, ನಂತರ ಮಕ್ಕಳಿಗಾಗಿ ವನ್ಯಜೀವಿ ಸಂರಕ್ಷಣೆಯ ಕುರಿತು, ಪ್ರಾಜೆಕ್ಟರ್ ಮುಖಾಂತರ ಸಿನೆಮಾ ಪ್ರದರ್ಶವನ್ನೂ ಆಯೋಜಿಸಲಾಗಿತ್ತು, ಮತ್ತು ವಿವಿಧಿ ಚಟುವಟಿಕೆಗಳನ್ನು ನಡೆಸಲಾಯಿತು, ಶಾಲಾ ಮಕ್ಕಳೊಂದಿಗೆ ವಿವಿಧ ಚಟುವಟಿಕೆಯಲ್ಲಿ ಯುಬಿಡಿಟಿ ಇಂಜಿನಿಯರಿoಗ್ ಕಾಲೇಜಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಭಾಗವಹಿಸಿದರು.
ಈಗಾಗಲೆ ಈ ರೀತಿ 3 ಶಾಲೆಗಳಲ್ಲಿ ಕಾರ್ಯಕ್ರಮ ಹಮ್ಮಿಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು..
ಈ ನಮ್ಮ ಸೇವಾ ಕಾರ್ಯಕ್ಕೆ ಸ್ಮಾರ್ಟ್ ಸಿಟಿ ಎಂ.ಡಿ ರವೀಂದ್ರ ಮಲ್ಲಾಪುರ್, ಕಾರ್ಪರೇಟರ್ ಪ್ರಸನ್ನ ಕುಮಾರ್, ಶಿವಾನಂದ್ , ವಿನಯ್ ಗೀತಾ ದಿಳ್ಯಪ್ಪ ಆರ್ಥಿಕ ನೆರವು ನೀಡಿದ್ದಾರೆ, ಹಾಗೂ ವಿದ್ಯಾರ್ಥಿಗಳೂ ತಾಮ್ಮ ವೈಯಕ್ತಿಕವಾಗಿ ಹಣ ಜೋಡಿಸಿದ್ದಾರೆ.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದ ದಿವ್ಯಾ, ಸ್ವಾತಿ, ಸೋಹನ್, ಅಭಿಷೇಕ್, ವೃಷಬ್, ಭರತ್, ಗಗನ್, ಶಾಲೆಯ ಮುಖ್ಯೋಪಾಧ್ಯಾಯ ಪ್ರೇಮಾ, ಸುಧಾ, ತಾರಾ ಮತ್ತು ಇತರೆ ಸಿಬ್ಬಂದಿ ಇದ್ದರು.