Governor: ರಾಜ್ಯಪಾಲರಿಂದ ನಾಮನಿರ್ದೇಶಿತ ಸದಸತ್ವ ಕೊಡಿಸುವುದಾಗಿ ಹೇಳಿ ವಂಚನೆ, ಆರೋಪಿತನ ಬಂಧಿಸಿದ ದಾವಣಗೆರೆ ಪೋಲಿಸ್

Governor_ Davanagere police arrested the accused for fraud by saying that he would give nominated member by the governor.

ದಾವಣಗೆರೆ: (Governor) ದಿನಾಂಕ:20.02.2025 ರಂದು ಸದ್ರುಲ್ಲಾ ಖಾನ್ ಎಂಬುವವರು ನಾನು ಕರ್ನಾಟಕ ರಾಜ್ಯಪಾಲರ ರಾಜ್ಯಪಾಲರ ಸೆಕ್ರೆಟರಿಯೆಟ್ ಆಗಿ ರಾಜ್ಯಪಾಲರ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದು. ಯುನಿರ್ವಸಿಟಿಗಳಿಗೆ ರಾಜ್ಯಪಾಲರ ನಾಮನಿರ್ದೇಶಿತ ಸದಸ್ವತಗಳ ಹೆಸರನ್ನು ನಾನೇ ನಾಮಿನೇಟ್ ಮಾಡುತ್ತೇನೆಂದು ಹೇಳಿ ವಂಚಿಸುತ್ತಿದ್ದ ವ್ಯಕ್ತಿಯನ್ನು ದಾವಣಗೆರೆಯCEN ಪೋಲಿಸ್ ಬಂದಿಸಿದ್ದಾರೆ.

ದಾವಣಗೆರೆ ನಗರದ ವೈದ್ಯರಿಗೆ ಪೋನ್ ಕರೆ ಮಾಡಿ, ವೈದ್ಯರಿಗೆ ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೇಲ್ತ್ ಸೈನ್ಸ್ ಬೆಂಗಳೂರು ಮತ್ತು ವೈದ್ಯರ ಪತ್ನಿಗೆ ವಿ.ಟಿ.ಯು ಬೆಳಗಾವಿಯಲ್ಲಿ ರಾಜ್ಯಪಾಲರ ನಾಮನಿರ್ದೇಶಿತ ಸದಸತ್ವ ಕೊಡಿಸುವುದಾಗಿ ಹೇಳಿ ಒಟ್ಟು 2,78,720/-ರೂಗಳನ್ನು ಆನ್ ಲೈನ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿದ್ದು. ಪಿರ್ಯಾದಿಗೆ ವಂಚನೆಗೆ ಒಳಗಾಗಿರುವ ಬಗ್ಗೆ ತಿಳಿದು ಆರೋಪಿಗೆ ಹಣ ವಾಪಸ್ ಕೇಳಲಾಗಿ ಆರೋಪಿ ನಿಮ್ಮ ವಿರುದ್ದ ಸುಳ್ಳು ದೂರನ್ನು ದಾಖಲು ಮಾಡಿ ನಿಮ್ಮ ಕೆ.ಎಂ.ಸಿ ರೆಜಿಸ್ಟರ್ ಅನ್ನು ಬ್ಲಾಕ್ ಮಾಡಿಸುವುದಾಗಿ ಬೆದರಿಸಿರುತ್ತಾರೆಂದು ದೂರನ್ನು ನೀಡಿದ್ದರು.

ಈ ಬಗ್ಗೆ ದಾವಣಗೆರೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರನ್ನು ಸ್ವೀಕರಿಸಿ ಠಾಣಾ ಗುನ್ನೆ ನಂ. 31/2025 ಕಲಂ 66(ಸಿ) 66(ಡಿ) ಐಟಿ ಆಕ್ಟ್ 2000 & 308(2) 318 (3), 319(2) ಬಿ.ಎನ್.ಎಸ್ ಕಾಯ್ದೆ 2023 ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

ಪ್ರಕರಣದಲ್ಲಿ ಆರೋಪಿ ಪತ್ತೆಗಾಗಿ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ ಐ.ಪಿ.ಎಸ್ ದಾವಣಗೆರೆ ಜಿಲ್ಲೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ವಿಜಯಕುಮಾರ್ ಎಂ ಸಂತೋಷ್, ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಜಿ. ಮಂಜುನಾಥ ದಾವಣಗೆರೆ ಜಿಲ್ಲೆ, ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಶ್ರೀಮತಿ. ಪದ್ಮಶ್ರೀ ಗುಂಜೀಕರ್ ರವರ ಮಾರ್ಗದರ್ಶನದಲ್ಲಿ ಸಿ.ಇ.ಎನ್ ಠಾಣೆಯ ಪ್ರಭಾರ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀಮತಿ. ಶಿಲ್ಪ ವೈ, ಶ್ರೀ ಸುನೀಲ್ ತೇಲಿ, ಪಿ.ಎಸ್.ಐ ಸಿ.ಇ.ಎನ್ ಪೊಲೀಸ್ ಠಾಣೆ ಶ್ರೀಮತಿ ರೂಪ ತೆಂಬದ್ ಪಿ.ಎಸ್.ಐ ಸಿ.ಇ.ಎನ್ ಪೊಲೀಸ್ ಠಾಣೆ ಹಾಗೂ ಮತ್ತು ಸಿಬ್ಬಂದಿಗಳಾದ ಅಶೋಕ, ಗೋವಿಂದರಾಜ್, ಸೋಮಶೇಖರ್, ಲೋಹಿತ್, ಯೋಗೀಶ್ ನಾಯ್ಕ ರವರನ್ನೊಳಗೊಂಡ ತಂಡ ರಚಿಸಲಾಗಿತ್ತು.

ಸದರಿ ತಂಡವು ಪ್ರಕರಣದ ಆರೋಪಿ ಹೆಚ್.ಟಿ ಸದ್ರುಲ್ಲಾ ಖಾನ್ ತಂದೆ ಎಂ ಟಿಪ್ಪುಸಾಬ್ 40 ವರ್ಷ, ಮುಸ್ಲಿಂ ಜನ, ವ್ಯವಸಾಯ ವೃತ್ತಿ, ವಾಸ- ಹಲ್ಲೇಹಾಲ್ ಗ್ರಾಮ, ಚಿತ್ರದುರ್ಗ ತಾಲ್ಲೂಕ್ ಮತ್ತು ಜಿಲ್ಲೆ ರವರನ್ನು ಪತ್ತೆ ಮಾಡಿ ಆರೋಪಿಯನ್ನು ದಸ್ತಗಿರಿ ಮಾಡಿ ಆರೋಪಿತನಿಂದ 40,000/-ರೂ ಬೆಲೆ ಬಾಳುವ ಕೃತ್ಯಕ್ಕೆ ಬಳಿಸಿದ 02 ಮೊಬೈಗಳನ್ನು ವಶಪಡಿಸಿಕೊಂಡಿದ್ದು. ಪ್ರಕರಣದಲ್ಲಿ ವಂಚನೆಯಾದ ಹಣದಲ್ಲಿ ರೂ.219058/-ಗಳನ್ನು ಆರೋಪಿಯ ಮತ್ತು ಆರೋಪಿಯ ಪರಿಚಯಸ್ಥರ ಬ್ಯಾಂಕ್ ಖಾತೆಯಲ್ಲಿ ಫ್ರೀಜ್ ಮಾಡಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಆರೋಪಿಯ ಈ ಹಿಂದೆ ಇದೇ ರೀತಿ ಯುನಿರ್ವಸಿಟಿಗಳಲ್ಲಿ ರಾಜ್ಯಪಾಲರ ನಾಮನಿರ್ದೇಶಿದ ಸದಸತ್ವ ಕೊಡಿಸುವುದಾಗಿ ಮತ್ತು ಸರ್ಕಾರಿ ಕೆಲಸ ಕೊಡಿಸುವುದಾಗಿ ಸರ್ವಜನಿಕರಿಗೆ ವಂಚನೆ ಮಾಡಿದ್ದು. ಆರೋಪಿ ವಿರುದ್ದ ಬೆಂಗಳೂರು ನಗರದ ವಿಧಾನಸೌಧ, ಗೋವಿಂದರಾಜನಗರ ಪೊಲೀಸ್ ಠಾಣೆ, ಬೆಂಗಳೂರು ಜಿಲ್ಲೆಯ ಹೆಬ್ಬಗೋಡಿ ಪೊಲೀಸ್ ಠಾಣೆ, ಚಿತ್ರದುರ್ಗ ಜಿಲ್ಲೆಯ ಕೋಟೆ ಪೊಲೀಸ್ ಠಾಣೆ, ಕೋಲಾರ ಜಿಲ್ಲೆ, ಗೌಣಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣದಲ್ಲಿ ಆರೋಪಿ ಪತ್ತೆ ಮಾಡುವಲ್ಲಿ ಯಶಸ್ವಿಯಾದ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ವಿಜಯಕುಮಾರ್ ಎಂ ಸಂತೋಷ್, ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಜಿ. ಮಂಜುನಾಥ ದಾವಣಗೆರೆ ಜಿಲ್ಲೆ, ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಶ್ರೀಮತಿ. ಪದ್ಮಶ್ರೀ ಗುಂಜೀಕರ್ ರವರ ಮಾರ್ಗದರ್ಶನದಲ್ಲಿ ಸಿ.ಇ.ಎನ್ ಠಾಣೆಯ ಪ್ರಭಾರ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀಮತಿ. ಶಿಲ್ಪ ವೈ, ಶ್ರೀ ಸುನೀಲ್ ತೇಲಿ, ಪಿ.ಎಸ್.ಐ ಸಿ.ಇ.ಎನ್ ಪೊಲೀಸ್ ಠಾಣೆ ಶ್ರೀಮತಿ ರೂಪ ತೆಂಬದ್ ಪಿ.ಎಸ್.ಐ ಸಿ.ಇ.ಎನ್ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳಾದ ಅಶೋಕ, ಗೋವಿಂದರಾಜ್, ಸೋಮಶೇಖರ್, ಲೋಹಿತ್, ಯೋಗೀಶ್ ನಾಯ್ಕ ರವರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್, ಐಪಿಎಸ್ ರವರು ಶ್ಲಾಘಿಸಿರುತ್ತಾರೆ

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!