ಸರಕಾರದಿಂದ ನಿನ್ನೆ ರಾತ್ರಿ ಲಾಕ್ ಡೌನ್ ಮಾದರಿ ಪರಿಷ್ಕೃತ ಮಾರ್ಗಸೂಚಿ ಪ್ರಕಟ. ರಾಜ್ಯಾದ್ಯಂತ ಅಗತ್ಯ ಸೇವೆ ಬಿಟ್ಟು ಎಲ್ಲಾ ಅಂಗಡಿ ಬಂದ್

ದಾವಣಗೆರೆ: ತೀರಾ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುವ ಹೊಸ ಮಾರ್ಗಸೂಚಿ ಸರಕಾರದಿಂದ ಬಿಡುಗಡೆಯಾಗಿದೆ.
ನಿನ್ನೆ ರಾತ್ರಿ ಸೋಮವಾರ ದಿಂದ ಸುಕ್ರವಾದವರೆಗೆ ಬೆಳಗೆ 6 ರಿಂದ ರಾತ್ರಿ 9 ರವರೆಗೆ ಏನಿರುತ್ತೆ ಏನಿರಲ್ಲ ಬಗ್ಗೆ ಈ ಮಾರ್ಗಸೂಚಿ ಪ್ರಕಟವಾಗಿದ್ದು, ಬಹುತೇಕ ಲಾಕ್ ಡೌನ್ ಮಾದರಿಯಲ್ಲೇ ಇದೆ.ದಿನನಿತ್ಯದ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಎಲ್ಲವನ್ನೂ ಬಂದ್ ಮಾಡಿಸಲಾಗುತ್ತಿದೆ.
ವಿಚಿತ್ರವೆಂದರೆ ಸೆಲೂನ್, ಬ್ಯೂಟಿ ಪಾರ್ಲರ್, ವೈನ್ ಶಾಪ್ ಗಳಿಗೆ ಅನುಮತಿ ನೀಡಲಾಗಿದೆ.
ರಾಜ್ಯದ ಎಲ್ಲೆಡೆ ಪೊಲೀಸರು ಇದ್ದಕ್ಕಿದ್ದಂತೆ ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದಾರೆ.ಮೇ 4ರ ವರೆಗೂ ರಾಜ್ಯದಲ್ಲಿ ಇದೇ ಪರಿಸ್ಥಿತಿ ಮುಂದುವರಿಯಲಿದೆ.ಏಕಾ ಏಕಿ ಅಂಗಡಿಗಳು ಕ್ಲೋಸ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ದಿಕ್ಕು ತೊಚದಂತಾಗಿದೆ.