ಗೂಗಲ್ ಪೇ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ – ನಿಮಗಿದೋ ಸಿಗಲಿದೆ 1 ಲಕ್ಷದವರೆಗೆ ಪರ್ಸನಲ್ ಲೋನ್

Great news for Google Pay customers – you will get a personal loan of up to 1 lakh

Great news for Google Pay customers – you will get a personal loan of up to 1 lakh

ಭಾರತ ದೇಶ ಡಿಜಿಟಲಿಕರಣದ ಉತ್ತುಂಗದಲ್ಲಿದೆ. ಈಗೆಲ್ಲ ಯಾರೂ ಕೂಡ ಜೇಬಿನಲ್ಲಿ‌ ಹಣ ಇಟ್ಟುಕೊಳ್ಳುವುದಿಲ್ಲ. ಏನೇ ಹಣದ ವ್ಯವಹಾರಗಳಿದ್ದರೂ ಕೂಡ ಮೊಬೈಲ್ ಪೇಮೆಂಟ್ ಮಾಡುತ್ತಾರೆ. ಇನ್ನು ಈ ಯುಪಿಐ ಪೇಮೆಂಟ್ ಗಾಗಿ ಕೆಲವು ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳಿದ್ದು, ಅವುಗಳಲ್ಲಿ ಗೂಗಲ್ ಪೇ ಕೂಡ ಒಂದು. ಕ್ಷಣಮಾತ್ರದಲ್ಲಿ ಯಾವುದೇ ರೀತಿಯ ಪೇಮೆಂಟ್ ಮಾಡಿಕೊಳ್ಳಲು ಸಹಾಯಕವಾಗುವಂತಹ ಗೂಗಲ್ ಪೇ ಇದೀಗ ಗ್ರಾಹಕರಿಗೆ ಅನುಕೂಲವಾಗುವಂತಹ ಮತ್ತೊಂದು ಸೌಲಭ್ಯ ನೀಡಲು ನಿರ್ಧರಿಸಿದೆ.

ಗೂಗಲ್ ಪೇ ನೀಡಲಿದೆ 1ಲಕ್ಷ ರೂ.ಸಾಲ!

ಸಾಲ ಪಡೆಯಬೇಕಿದ್ದರೆ ಬ್ಯಾಂಕಿನಿಂದ ಬ್ಯಾಂಕ್ ಗೆ ಅಲೆಯುವ ಜಂಜಾಟ ಹೊಸದೇನಲ್ಲ. ಆದರೆ ಇದೀಗ ಗೂಗಲ್ ಪೇ ಆ ಅಲೆದಾಟಕ್ಕೆ ಬ್ರೇಕ್ ಹಾಕಲು ನಿರ್ಧರಿಸಿದೆ. ನೀವು ಇನ್ನು ಮುಂದೆ ಕುಳಿತಲ್ಲಿಂದಲೇ ಸಾಲ ಪಡೆಯಬಹುದು. ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಪೇ ಅಥವಾ Gpay ಅಪ್ಲಿಕೇಶನ್ ಇದ್ರೆ ಸಾಕು, ಸುಲಭವಾಗಿ ಒಂದು ಲಕ್ಷ ರೂಪಾಯಿಗಳ ವರೆಗೆ ವೈಯಕ್ತಿಕ ಸಾಲ ಪಡೆಯಬಹುದು. ಇದು ಹೆಚ್ಚು ಅನುಕೂಲವಾಗಲಿದ್ದು ಬಹಳ ತುರ್ತು ಪರಿಸ್ಥಿತಿಯಲ್ಲಿಯೂ ಕೂಡ ಸಾಲ ಸೌಲಭ್ಯ ಪಡೆಯಬಹುದು.

ದಾಖಲೆಗಳು ಅಗತ್ಯವಿಲ್ಲ!

ಬ್ಯಾಂಕ್ ಗಳಿಂದ ಅಥವಾ ಇನ್ಯಾವುದೇ ಸಂಘಸಂಸ್ಥೆಗಳಿಂದ ಸಾಲ ಪಡೆಯಬೇಕಿದ್ದರೆ ದಾಖಲೆಗಳ ಅನಿವಾರ್ಯತೆ ಇದ್ದೇ ಇರುತ್ತದೆ. ಆದರೆ ಗೂಗಲ್ ಪೇ ಮೂಲಕ ಸಾಲ ಪಡೆಯಲು ಆ ತಲೆನೋವೇ ಇಲ್ಲ. ಹೌದು ಗೂಗಲ್ ಪೇ ಮೂಲಕ 1ಲಕ್ಷದವರೆಗೆ ಯಾವುದೇ ದಾಖಲೆಗಳಿಲ್ಲದೆ ಸಾಲ ಸೌಲಭ್ಯ ಪಡೆಯಬಹುದು. ಆಕ್ಸಿಸ್ ಬ್ಯಾಂಕ್, ಐಡಿಎಫ್‌ಸಿ ಬ್ಯಾಂಕ್ ಮೊದಲಾದ ಬ್ಯಾಂಕ್ ಗಳ ಜೊತೆಗೆ ಕಾರ್ಯನಿರ್ವಹಿಸುತ್ತಿರುವ Google pay ಈ ಬ್ಯಾಂಕ್ ಗಳ ಮೂಲಕ ಗ್ರಾಹಕರಿಗೆ ಸಾಲ ಸೌಲಭ್ಯ ಒದಗಿಸುತ್ತದೆ.

ಗೂಗಲ್ ಪೇ ಸಾಲಕ್ಕೆ ಅರ್ಜಿ ಸಲ್ಲಿಕೆ ಹೇಗೆ?

ನೀವು ಗೂಗಲ್ ಪೇ ಗ್ರಾಹಕರಾಗಿದ್ದರೆ 15,000 ಗಳಿಂದ ಒಂದು ಲಕ್ಷ ರೂಪಾಯಿಗಳ ವರೆಗೂ ಕೂಡ ಸಾಲ ಪಡೆಯಬಹುದು. ಇದಕ್ಕಾಗಿ ನೀವು ಮೊದಲು ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಅಪ್ಲಿಕೇಶನ್ ಓಪನ್‌ ಮಾಡಿ.
ಬಳಿಕ ನೀವು ಸ್ವಲ್ಪ ಸ್ಕ್ರಾಲ್ ಡೌನ್ ಮಾಡಿದರೆ ಲೋನ್ ಎನ್ನುವ ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಇನ್ನೊಂದು ಪೇಜ್ ಓಪನ್ ಆಗುತ್ತದೆ, ಅದರಲ್ಲಿ ಪಡೆಯಬಹುದಾದ ಸಾಲದ ಮೊತ್ತ, EMI ಇನ್ನಿತರ ಮಾಹಿತಿಗಳು ಇರುತ್ತವೆ.

ನಂತರ ನೀವು ಕಂಟಿನ್ಯೂ ಎಂದು ಪ್ರೆಸ್ ಮಾಡಿ. ಈಗ ನೀವು ಸಾಲ ಪಡೆದುಕೊಳ್ಳಲು ಅರ್ಹರಾಗಿದ್ದರೆ ಅದರ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ನಂತರ ನೀವು ನಿಮ್ಮ ವಿವರಗಳನ್ನು ನಮೂದಿಸಿ ಸಾಲಕ್ಕೆ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಕ್ಷಣಮಾತ್ರದಲ್ಲಿ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗುತ್ತದೆ.

 

Leave a Reply

Your email address will not be published. Required fields are marked *

error: Content is protected !!