APMC Secretary: ಮುಖ್ಯ ಮಾರುಕಟ್ಟೆ ಪ್ರಾಂಗಣದ ‘ಇ’ ಬ್ಲಾಕಿಗೆ ಸಗಟು ಸೊಪ್ಪಿನ ವ್ಯಾಪಾರ ಸ್ಥಳಾಂತರ

ದಾವಣಗೆರೆ: ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕೆ.ಆರ್. ಮಾರುಕಟ್ಟೆಯಲ್ಲಿ ಜನದಟ್ಟಣೆ ಹೆಚ್ಚಾಗಿರುವುದರಿಂದ ಕೋವಿಡ್-19 ಸಾಂಕ್ರಾಮಿಕ ರೋಗ ಹೆಚ್ಚಾಗಿ ಹರಡುವ ಭೀತಿ ಇದ್ದು, ಇದನ್ನು ನಿಯಂತ್ರಿಸಲು ಮುಖ್ಯ ಮಾರುಕಟ್ಟೆ ಪ್ರಾಂಗಣದ ವಿಸ್ತಾರವಾದ ಸ್ಥಳವಾದ ‘ಇ’ ಬ್ಲಾಕಿಗೆ ಸಗಟು ಸೊಪ್ಪಿನ ವ್ಯಾಪಾರವನ್ನು ಸ್ಥಳಾಂತರಿಸಲಾಗಿದೆ.
‘ಇ’ ಬ್ಲಾಕಿನಲ್ಲಿ ನಲ್ಲಿ ಆರ್‌ಕೆವಿವೈ ಯೋಜನೆಯಲ್ಲಿ ನಿರ್ಮಾಣ ಮಾಡಿರುವ ಮಳಿಗೆಗಳನ್ನು, ಕೆ.ಆರ್. ಮಾರುಕಟ್ಟೆಯಲ್ಲಿ ಸಗಟು ಸೊಪ್ಪಿನ ವ್ಯಾಪಾರ ವಹಿವಾಟು ನಡೆಸುತ್ತಿದ್ದ ವ್ಯಾಪಾರಸ್ಥರಿಗೆ ಹಂಚಿಕೆ ಮಾಡಲಾಗಿದ್ದು, ಈ ಮಳಿಗೆಗಳಲ್ಲಿಯೇ ಸಗಟು ಸೊಪ್ಪಿನ ವ್ಯಾಪಾರ ವಹಿವಾಟನ್ನು ಸ್ಥಳಾಂತರಿಸಲಾಗಿದೆ.
ಸಾರ್ವಜನಿಕರು, ರೈತರು, ಚಿಲ್ಲರೆ ವರ್ತಕರು ಸಗಟು ಸೊಪ್ಪಿನ ವ್ಯಾಪಾರಕ್ಕಾಗಿ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದ ‘ಇ’ ಬ್ಲಾಕಿನಲ್ಲಿ ನಡೆಯುವ ಸಗಟು ಸೊಪ್ಪಿನ ವ್ಯಾಪಾರ ಮಳಿಗೆಗಳಲ್ಲಿ ವ್ಯವಹರಿಸಬಹುದು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ತಿಳಿಸಿದ್ದಾರೆ.