ಹೆಚ್.ಜಿ. ರಶ್ಮಿ ಹಾಲೇಶ್ ಹೊನ್ನಾಳಿ ತಾಲ್ಲೂಕಿನ ನೂತನ ದಂಡಾಧಿಕಾರಿಯಾಗಿ ನೇಮಕ.

ದಾವಣಗೆರೆ : ಹೊನ್ನಾಳಿ ತಾಲೂಕಿಗೆ ನೂತನ ತಾಲ್ಲೂಕು ದಂಡಾಧಿಕಾರಿಯಾಗಿ ಆಗಮಿಸಿರುವ ಹೆಚ್. ಜೆ. ರಶ್ಮಿ ಹಾಲೇಶ್ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ ಹೊನ್ನಾಳಿ ತಾಲ್ಲೂಕು ಘಟಕದಿಂದ ವತಿಯಿಂದ ಸ್ವಾಗತಿಸಲಾಯಿತು.
ದೇವನಾಯಕನಹಳ್ಳಿ ಮತ್ತು ಹಿರೇಕಲ್ಮಠ ನೂತನವಾಗಿ ಪುರಸಭೆಗೆ ಸೇರ್ಪಡೆಯಾಗಿದ್ದು ಈ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಪುರಸಭೆಯಾಗಿ 1 ವರ್ಷ ಕಳೆದರೂ ಈ ಗ್ರಾಮಗಳಲ್ಲಿ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ಬೀದಿ ದೀಪಗಳ ವ್ಯವಸ್ಥೆ ಇಲ್ಲ. ಈ ಗ್ರಾಮಗಳಲ್ಲಿ ಈ ರೀತಿಯ ನೂರಾರು ಸಮಸ್ಯೆಗಳು ಇದ್ದು ತಾಲ್ಲೂಕು ದಂಡಾಧಿಕಾರಿಗಳು ಹೆಚ್ಚಿನ ಗಮನಹರಿಸಿ ಈ ಸಮಸ್ಯೆಗಳನ್ನು ಸರಿಪಡಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದ ಮುಖಂಡರಾದ ರವಿಕುಮಾರ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಪ್ರವೀಣ್, ಬೀರಣ್ಣ, ತಾಲ್ಲೂಕು ಉಪಾಧ್ಯಕ್ಷ ರಾಕೇಶ್, ಸಂತೋಷ್ ಕುಮಾರ್, ಬಾಡಿ ಬಿಲ್ಡರ್ ನಾಗರಾಜ್, ಮುನ್ನಾ ಪೈಲ್ವಾನ್, ಗ್ರಾಮ ಘಟಕದ ಅಧ್ಯಕ್ಷ ದಯಾನಂದ್, ಚೇತನ್, ಮಾದನಬಾವಿ ಸಿದ್ದೇಶ್ ಸೇರಿದಂತೆ ಅನೇಕ ಕರವೇ ಮುಖಂಡರು ಭಾಗಿಯಾಗಿದ್ದರು.