ಹಾಲಕೆರೆ ಶ್ರೀ ಅನ್ನದಾನೇಶ್ವರ ಮಠದ ಡಾ. ಸಂಗನಬಸವ ಮಹಾಸ್ವಾಮಿಗಳು ಲಿಂಗೈಕ್ಯ: ಪಂಚಾಚಾರ್ಯ ವಿಶ್ವಧರ್ಮ ವಿದ್ಯಾಪೀಠ ಶ್ರದ್ಧಾಂಜಲಿ

ದಾವಣಗೆರೆ: ಹಾಲಕೆರೆ ಶ್ರೀ ಅನ್ನದಾನೇಶ್ವರ ಮಠದ ಹಿರಿಯ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳು, (ಡಾ. ಅಭಿನವ ಅನ್ನದಾನ ಮಹಾಸ್ವಾಮೀಜಿ) ಅವರು ಸೋಮವಾರ ಮುಂಜಾನೆ ಲಿಂಗೈಕ್ಯರಾಗಿರುವುದಕ್ಕೆ ಪಂಚಾಚಾರ್ಯ ವಿಶ್ವಧರ್ಮ ವಿದ್ಯಾಪೀಠ ಶ್ರದ್ಧಾಂಜಲಿ ಸಲ್ಲಿಸಿತು.
ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬೆಳಗಿನ ಜಾವ 5.35ಕ್ಕೆ ಸ್ವಾಮೀಜಿ ಲಿಂಗೈಕ್ಯರಾಗಿದ್ದು, ಸ್ವಾಮೀಜಿಗೆ 85 ವರ್ಷ ವಯಸ್ಸಾಗಿತ್ತು ದಾವಣಗೆರೆ ಜಿಲ್ಲೆ, ಗದಗ ಜಿಲ್ಲೆ, ವಿಜಯನಗರ ಜಿಲ್ಲೆ ಬಳ್ಳಾರಿ ಜಿಲ್ಲೆಯಲ್ಲಿ ಅಸಂಖ್ಯಾತ ಭಕ್ತರನ್ನು ಹೊಂದಿದ್ದರು.
ಶ್ರೀಗಳ ಲಿಂಗೈಕ್ಯರಾಗಿದ್ದಕ್ಕೆ ದಾವಣಗೆರೆ ಹಾಲಕೆರೆ ಅನ್ನದಾನೀಶ್ವರ ಮಠದ ಸಾರ್ವಜನಿಕ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಅಥಣಿ ಎಸ್ ವೀರಣ್ಣ, ಪ್ರಧಾನ ಕಾರ್ಯದರ್ಶಿ ಎನ್. ಅಡಿವೆಪ್ಪ ಉಪಾಧ್ಯಕ್ಷ ಅಮರಯ್ಯ ಗುರುವಿನಮಠ, ಖಜಾಂಚಿ ಎನ್ ಎ ಗಿರೀಶ್ , ಟ್ರಸ್ಟಿಗಳಾದ ದಾವಣಗೆರೆ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ವೀರಪ್ಪ ಬಾವಿ, ನಾಗರಾಜ್ ಯರಗಲ್ ಟಿ ಮಹಾಲಿಂಗೇಶ್ ಮತ್ತಿತರರು ಕಂಬನಿ ಮಿಡಿದಿದ್ದಾರೆ.