ಕೊಟ್ಟೂರು ಕಾಳಾಪುರದಲ್ಲಿ ನಡೆದ ಘಟನೆಗೆ ಹಾಲುಮತ ಸಮಾಜ ಖಂಡನೆ

ಕೊಟ್ಟೂರು ಕಾಳಾಪುರ

ವಿಜಯನಗರ: ಕೊಟ್ಟೂರು ತಾಲ್ಲೂಕು,ಕಾಳಾಪುರ ಗ್ರಾಮದಲ್ಲಿ ಅಮಾಯಕ ಹಾಲುಮತ ಸಮಾಜದವರ ಹಾಗೂ ಭೋವಿ ಸಮಾಜದವರ ಮೇಲೆ ನಡೆದ ಹಲ್ಲೆ ಮತ್ತು ದೌರ್ಜನ್ಯವನ್ನು ದಾವಣಗೆರೆ ಜಿಲ್ಲಾ ಹಾಗೂ ಹರಿಹರ, ಚನ್ನಗಿರಿ, ಜಗಳೂರು, ನ್ಯಾಮತಿ, ಹೊನ್ನಾಳಿ ಹಾಗೂ ದಾವಣಗೆರೆ ತಾಲ್ಲೂಕು ಹಾಲುಮತ ಮಹಾಸಭಾ ತೀವ್ರವಾಗಿ ಖಂಡಿಸುತ್ತದೆ. ಕುರುಬ  ಸಮುದಾಯದ  ಶ್ರೇಯೋಭಿವೃದ್ಧಿಗಾಗಿ  ಶ್ರಮಿಸುತ್ತಿರುವ  ಪರಮಪೂಜ್ಯ ಜಗದ್ಗುರು   ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳ  ಸಂಕಲ್ಪದಂತೆ  ಭಕ್ತರ  ಶ್ರದ್ಧಾ  ಭಕ್ತಿಯ  ಸೇವೆಯಿಂದ
ಶ್ರೀ ಏಳುಕೋಟಿ ಭಕ್ತರ ಕುಟೀರ ಎಂಬ ಮಠವನ್ನು  ನಿರ್ಮಾಣ ಮಾಡಿ ಲೋಕಾರ್ಪಣೆಯ ನಂತರ ಶ್ರೀಮಠವು ಈ ಭಾಗದಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಹಿಂದುಳಿದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ  ನೀಡುವ ಸದುದ್ದೇಶದಿಂದ ಶಿಕ್ಷಣ  ಸಂಸ್ಥೆಯನ್ನು ನಿರ್ಮಾಣ ಮಾಡಲು ಕರ್ನಾಟಕ  ಘನ ಸರ್ಕಾರ  ಮತ್ತು  ಭಕ್ತರ ಸಂಪೂರ್ಣ ಸಹಕಾರದಿಂದ “ಶ್ರೀ ಏಳುಕೋಟಿ ವಸತಿ ಶಾಲೆ”ಯನ್ನು ನಿರ್ಮಿಸಲಾಗಿದೆ  ಹಾಗೂ   ಶ್ರೀಕ್ಷೇತ್ರ  ಮೈಲಾರದಲ್ಲಿ    ಧಾರ್ಮಿಕ   ಕೈಂಕರ್ಯಗಳನ್ನು  ಕೈಗೊಳ್ಳಲು  ಆಗಮಿಸುವಶ್ರೀಮಠದ ಭಕ್ತಾಧಿಗಳಿಗೆ ತಂಗುವುದಕ್ಕೆ ಸುಸಜ್ಜಿತವಾದ “ಶ್ರೀ ಗಂಗಮಾಳಮ್ಮದೇವಿ ಯಾತ್ರಿ ನಿವಾಸ”ವನ್ನು ಶ್ರೀ ಕನಕಗುರುಪೀಠದ ಭಕ್ತರ ಪರಿಶ್ರಮದ ದೇಣಿಗೆಯಿಂದ ಪೂರ್ವಜರ ಹೆಸರಿನಲ್ಲಿ ನಿರ್ಮಿಸಲಾಗಿದೆ.ದಿನಾಂಕ 04-02-2023ನೇಶನಿವಾರದಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರು “ಶ್ರೀ ಏಳುಕೋಟಿ ವಸತಿ ಶಾಲೆ”ಯನ್ನು ಉದ್ಘಾಟಿಸಲಿದ್ದಾರೆ.

ಸನ್ಮಾನಿತರಾಗಿಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪನವರು ಭಾಗವಹಿಸಲಿದ್ದಾರೆ  ಹಾಗೂಸಚಿವರುಗಳು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ದಿನಾಂಕ 5-2-2023ನೇ ಭಾನುವಾರದಂದು “ಶ್ರೀ ಗಂಗಮಾಳಮ್ಮದೇವಿ ಯಾತ್ರಿ ನಿವಾಸ”ವನ್ನುಮಾಜಿ ಮುಖ್ಯಮಂತ್ರಿ, ವಿರೋಧಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯನವರು  ಉದ್ಘಾಟಿಸಲಿದ್ದಾರೆ
ಹಾಗೂ ಈ ಎರಡು ದಿನಗಳ ಕಾರ್ಯಕ್ರಮಗಳಲ್ಲಿ ಮಠಾಧೀಶರುಗಳು, ಜನಪ್ರತಿನಿಧಿಗಳು ಸಮಾಜದ ಮುಖಂಡರುಗಳು ಭಾಗವಹಿಸುತ್ತಿದ್ದಾರೆ.
ಸಮಾಜದ ಎರಡು  ಪ್ರಮುಖ  ಕಾರ್ಯಕ್ರಮಗಳಲ್ಲಿ ಜಿಲ್ಲೆಯ  ಸಮಾಜದ ಬಂಧುಗಳು ಹೆಚ್ಚಿನಸಂಖ್ಯೆಯಲ್ಲಿ   ಭಾಗವಹಿಸಬೇಕಾಗಿ   ದಾವಣಗೆರೆ   ಜಿಲ್ಲಾ  ಹಾಲುಮತ  ಮಹಾಸಭಾ  ಮನವಿ
ಮಾಡಿಕೊಳ್ಳುತ್ತಿದೆ.

ಜಿಲ್ಲಾಧ್ಯಕ್ಷರಾದ ಸಿ. ವೀರಣ್ಣ, ಕಾರ್ಯಾಧ್ಯಕ್ಷರಾದ ಚಂದ್ರು ದೀಟೂರ್, ಉಪಾಧ್ಯಕ್ಷರಾದ ಸಲ್ಲಳ್ಳಿ ಹನುಮಂತಪ್ಪ,  ಪ್ರಧಾನ ಕಾರ್ಯದರ್ಶಿ ಬಿ. ಜಿ. ಘನರಾಜ್, ಕಾರ್ಯದರ್ಶಿ ಎಸ್. ಎಂ. ಸಿದ್ದಲಿಂಗಪ್ಪ, ಖಜಾಂಚಿ ಆರ್. ಬಿ. ಪರಮೇಶ್ ರವರು ಹಾಗೂ ಜಿಲ್ಲಾ ಪದಾಧಿಕಾರಿಗಳು, ದಾವಣಗೆರೆ ತಾಲ್ಲೂಕು ಅಧ್ಯಕ್ಷರಾದ ಮಹೇಂದ್ರಕುಮಾರ್, ಪ್ರದಾನ ಕಾರ್ಯದರ್ಶಿ ಅಂಜಿನಪ್ಪನವರು ಹಾಜರಿದ್ದರು

Leave a Reply

Your email address will not be published. Required fields are marked *

error: Content is protected !!