ಹರಿಹರ ಸರ್ಕಾರಿ ಪದವಿ ಕಾಲೇಜು ಸ್ನಾತಕ ಪದವಿ ಪ್ರವೇಶಾತಿ ಆರಂಭ
ದಾವಣಗೆರೆ : ಹರಿಹರ ಸರ್ಕಾರಿ ಪದವಿ ಕಾಲೇಜಿನಲ್ಲಿ 2022-23 ನೇ ಶೈಕ್ಷಣಿಕ ಸಾಲಿನ ಸ್ನಾತಕ ಪದವಿ ಕೋರ್ಸ್‍ಗಳಾದ ಬಿ.ಎ, ಬಿ.ಎಸ್ಸಿ, ಬಿ.ಕಾಂ ಹಾಗೂ ಬಿ.ಬಿ.ಎ ಪ್ರವೇಶಾತಿಗಾಗಿ ಪಿ.ಯು.ಸಿ ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪದವಿ ಕೋರ್ಸ್‍ಗಳು: ಬಿ.ಎ ಕೋರ್ಸಗಳಾದ (ಐಚ್ಚಿಕ ಕನ್ನಡ, ಪತ್ರಿಕೋದ್ಯಮ), (ಇತಿಹಾಸ, ಆರ್ಥಶಾಸ್ತ್ರ), (ಇತಿಹಾಸ, ರಾಜ್ಯಶಾಸ್ತ್ರ), (ಇತಿಹಾಸ, ಸಮಾಜಶಾಸ್ತ್ರ), (ಆರ್ಥಶಾಸ್ತ್ರ, ಐಚ್ಚಿಕ ಕನ್ನಡ), (ಆರ್ಥಶಾಸ್ತ್ರ, ಐಚ್ಚಿಕ ಇಂಗ್ಲೀಷ್) ಹಾಗೂ (ಸಮಾಜಶಾಸ್ತ್ರ, ಅರ್ಥಶಾಸ್ತ್ರ) ಬಿ.ಎಸ್ಸಿ ಕೋರ್ಸಗಳಾದ (ಭೌತಶಾಸ್ತ್ರ, ರಸಾಯನಶಾಸ್ತ್ರ), (ಭೌತಶಾಸ್ತ್ರ, ಗಣಿತಶಾಸ್ತ್ರ), (ಗಣಕ ವಿಜ್ಞಾನ, ಭೌತಶಾಸ್ತ್ರ), (ಗಣಿತಶಾಸ್ತ್ರ, ಗಣಕ ವಿಜ್ಞಾನ) ಹಾಗೂ (ಗಣಿತಶಾಸ್ತ್ರ, ರಸಾಯನಶಾಸ್ತ್ರ). ಬಿ.ಕಾಂ ಮತ್ತು ಬಿ.ಬಿ.ಎ (ಕಡ್ಡಾಯ ವಿಷಯ) ಸ್ನಾತಕ ಪದವಿಗಳಿಗೆ ಪ್ರವೇಶ ಬಯಸುವ ಪಿ.ಯು.ಸಿ ಪೂರ್ಣಗೊಳಿಸಿದ ಅರ್ಹ ವಿದ್ಯಾರ್ಥಿಗಳು UUCMS ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ವಿವರಗಳಿಗೆ ಕಾಲೇಜಿನ ಕಛೇರಿಗೆ ಭೇಟಿ ನೀಡಿ ವಿಚಾರಿಸಬಹುದು ಅಥವಾ ದೂರವಾಣಿ ಸಂಖ್ಯೆ: 7892418329, 948208877, 9844425125 ಹಾಗೂ 9686341400 ಇಲ್ಲಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. ಹಾಗೂ ಪ್ರವೇಶಾತಿಗೆ https//uucms.karnataka.gov.in ನಲ್ಲಿ ಆನ್‍ಲೈನ್ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಹೆಚ್.ವಿರುಪಾಕ್ಷಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.