ಹರಿಹರ ಮಠಾದೀಶರಿಂದ ವೈಧ್ಯಕೀಯ ಕಾಲೇಜನ್ನ ಹರಿಹರದಲ್ಲಿ ನಿರ್ಮಿಸುವಂತೆ ಸಚಿವರಲ್ಲಿ ಮನವಿ

ದಾವಣಗೆರೆ: ದಾವಣಗೆರೆ ಜಿಲ್ಲೆಗೆ ಮಂಜೂರಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಹರಿಹರ ನಗರದಲ್ಲಿ ನಿರ್ಮಾಣ ಮಾಡಬೇಕೆಂದು ಹರಿಹರ ತಾಲ್ಲೂಕಿನ ಎಲ್ಲಾ ಸಮುದಾಯದ ಮಠಾಧೀಶ್ವರರು ಒತ್ತಾಯಿಸಿದ್ದಾರೆ.
ಇಂದು ಕನಕಗುರು ಪೀಠದ ಬೆಳ್ಳೊಡಿ ಶಾಖಾಮಠದಲ್ಲಿ ಎಲ್ಲಾ ಮಠಾಧೀಶ್ವರರು ತಾಲ್ಲೂಕಿನ ಎಲ್ಲಾ ಸಮಾನ ಮನಸ್ಕರರ ಜೊತೆ ಸಚಿವ ಭೈರತಿ ಬಸವರಾಜ್ ಮತ್ತು ಸಂಸದ ಜಿ.ಎಂ. ಸಿದ್ದೇಶ್ವರ್ ಅವರಿಗೆ ಮನವಿ ಸಲ್ಲಿಸಿದರು.