ಹರಿಹರ ಪಾಕಿಸ್ತಾನದಲ್ಲಿ ಇದೆಯಾ ಎಂದ ಜೆಡಿಎಸ್ ಮುಖಂಡ

ದಾವಣಗೆರೆ. ಜು.೧೨; ನಗರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಬೇಕು ಆದರೆ ಸಹಭಾಗಿತ್ವದ ಬದಲು ಸರ್ಕಾರವೇ ಅನುದಾನ ನೀಡಿ ಸ್ಥಾಪನೆ ಮಾಡಿದಾಗ ಬಡವರಿಗೆ ಅನುಕೂಲವಾಗಲು ಸಾಧ್ಯ ಎಂದು ಜೆಡಿಎಸ್ ಮುಖಂಡ ಕೆ.ಬಿ ಕಲ್ಲೇರುದ್ರೇಶ್ ಅಭಿಪ್ರಾಯ ಸೂಚಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆರೋಗ್ಯ ಸಚಿವರಾದ ಡಾ.ಸುಧಾಕರ್ ಇತ್ತೀಚೆಗೆ ದಾವಣಗೆರೆಗೆ ಭೇಟಿ ನೀಡಿದ್ದ ವೇಳೆ ದಾವಣಗೆರೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಶಂಕುಸ್ಥಾಪನೆ ಶೀಘ್ರವಾಗಿ ನೆರವೇರಿಸಲಾಗುವುದು ಎಂದಿದ್ದಾರೆ ಇದು ಸ್ವಾಗತಾರ್ಹ.ಆದರೆ ಇಲ್ಲಿಯವರೆಗೆ ಯಾವುದೆರ ಪ್ರಕ್ರಿಯೆ ನಡೆಯದಿರುವುದು ವಿಷಾಧಕರ.ಕಾರಣ ಸಚಿವರು ಬರದಿ ತರಿಸಿಕೊಳ್ಳುವ ಹಂತದಲ್ಲೇ ಇದ್ದಾರೆ.ಶೀಘ್ರವಾಗಿ ಪರಿಶೀಲನೆ ನಡೆಸಬೇಕು ಹಾಗೂ ಪ್ರಕ್ರಿಯೆಗಳು ಚುರುಕಾಗಿ ನಡೆಯಬೇಕು.
ಚಿಗಟೇರಿ ಆಸ್ಪತ್ರೆಯು ಹಳೆಯ ಆಸ್ಪತ್ರೆ ಅಲ್ಲದೇ ೨೯ ಎಕರೆ ವಿಸ್ತೀರ್ಣ ದಲ್ಲಿದೆ. ಕಾಲೇಜು ಸ್ಥಾಪನೆಗೆ ಬೇಕಾದ ಎಲ್ಲಾ ಅರ್ಹತೆಹೊಂದಿದೆ ಆದ್ದರಿಂದ ಶಂಕುಸ್ಥಾಪನೆ ಬದಲು ಉದ್ಘಾಟನೆಗೆ ಸಂಸದರು ಕಾರ್ಯಪ್ರವೃತ್ತರಾಗಬೇಕು.ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯ ಪ್ರಕ್ರಿಯೆ ನಡೆಯುವುದಾಗಿ ತಿಳಿದುಬಂದಿದೆ ಆದರೆ ಯಾವುದೇ ಕಾರಣಕ್ಕೂ ಸಹಭಾಗಿತ್ವದಲ್ಲಿ ಕಾಲೇಜು ನಿರ್ಮಾಣ ಮಾಡಬಾರದು ಎಂದು ಒತ್ತಾಯಿಸಿದರು. ಸಹಭಾಗಿತ್ವ ಬಿಟ್ಟು ಸರ್ಕಾರ ಮಟ್ಟದಲ್ಲಿ ಪ್ರಾರಂಭಿಸಬೇಕು.ಜನಪ್ರತಿನಿಧಿಗಳಿಗೆ ಇಚ್ಚಾಶಕ್ತಿ ಇದ್ದರೆ ಶೀಘ್ರವಾಗಿ ನಿರ್ಮಾಣ ಮಾಡಲು ಸಾಧ್ಯ ಇದರಲ್ಲಿ ರಾಜಕಾರಣ ಮಾಡಬಾರದು ಎಂದು ಸಲಹೆ ನೀಡಿದರು.
ಹರಿಹರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಹರಿಹರ ಪಾಕಿಸ್ತಾನದಲ್ಲಿ ಇಲ್ಲ.ಅಲ್ಲಿ ಸ್ಥಾಪನೆಯಾದರೆ ಜಿಲ್ಲೆಯಲ್ಲಿ ಸ್ಥಾಪನೆಯಾದಂತೆಯೇ ಮೆಡಿಕಲ್ ಕಾಲೇಜು ಸ್ಥಾಪನೆಗೆ ಎಲ್ಲಾ ಅರ್ಹತೆ ಇದ್ದರೆ ಕಾಲೇಜು ಪ್ರಾರಂಭಿಸಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಧನ್ಯಕುಮಾರ್, ಅಜ್ಜಯ್ಯ ಇದ್ದರು.