ಹರಿಹರ ಶಾಸಕ ಬಿಪಿ ಹರೀಶ್ ಗೆ ಜೀವ ಬೇದರಿಕೆ.! ರಕ್ಷಣೆ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು
ದಾವಣಗೆರೆ : ಹರಿಹರ ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರುಳುಗಾರಿಕೆಗೆ ಸಂಬಂಧಿಸಿದಂತೆ ಹರಿಹರ ತಾಲ್ಲೂಕಿನ ಚಿಕ್ಕಬಿದರಿ ಗ್ರಾಮ ಮತ್ತು ಹರಪನಹಳ್ಳಿ ತಾಲ್ಲೂಕಿನ ವಟ್ಲಹಳ್ಳಿ ಗ್ರಾಮಗಳ ನಡುವೆ ಅಕ್ರಮ ಮರುಳುಗಾರಿಕೆಯ ವಿಚಾರವನ್ನು ಮಾಧ್ಯಮದ ಮೂಲಕ ಸರ್ಕಾರಕ್ಕೆ ಮತ್ತು ಸಂಬಂಧಪಟ್ಟಂತಹ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಗಮನಕ್ಕೆ ತಂದಿದ್ದ ಹರಿಹರ ಶಾಸಕ ಬಿ.ಪಿ. ಹರೀಶ್ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಎಸ್ಪಿಗೆ ಶಾಸಕರು ದೂರು ಸಲ್ಲಿಸಿದ್ದಾರೆ.
ಹರಿಹರದ ಬೈಪಾಸ್ ನಲ್ಲಿ ಇರುವ ಅಕ್ರಮ ಗಣಿಗಾರಿಕೆ ಮಾಡುವವರ ಒಡೆತನದಲ್ಲಿರುವ ಕ್ರಷರ್‌ನ ಒಳಗಡೆ ಇರುವ ಮರುಳು ಮತ್ತು ನದಿಯಲ್ಲಿ ಇರುವ ಪೆಡಲ್ಸ್ ಗಳನ್ನು ಅಕ್ರಮವಾಗಿ ಶೇಖರಿಸುವ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ ಕಾರಣ ಅದರ ಮಾಲೀಕರ ಸಹೋದರರಾದ ಅಮರಾವತಿ ಮಂಜುನಾಥ್ ರವರು ತಂದೆ ಎ ಬಿ ಮಲ್ಲೇಶಪ್ಪ ನವರು ನಿನ್ನೆ ಮುಂಜಾನೆ ಪ್ರತಿ ದಿನ ವಾಯುವಿಹಾರ ಮುಗಿಸಿ ಸಿ ಜಿ ಆಸ್ಪಿಟಲ್ ಮುಂಭಾಗದಲ್ಲಿರುವಂತಹ ಇಂಡಿಯನ್ ಕಾಫಿ ಬಾರ್ ಬಳಿ ಬಂದು ಈ ಎಲ್ಲಾ ವಿಚಾರಗಳನ್ನ ಯಾವ ಅಧಿಕಾರಿಗಳಿಗೂ ತಿಳಿಸದೆ ನಮ್ಮ ವಿಚಾರಕ್ಕೆ ಬಂದಿದ್ದೆ? ಆಅದು ಯಾವ ಧೈರ್ಯದಿಂದ ಹರಿಹರಕ್ಕೆ ಬರುತ್ತಿಯಾ? ಯಾವುದೇ ಕಾರಣಕ್ಕೂ ನಿನ್ನನ್ನ ಉಳಿಸಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ ಹಾಗೂ .ರಕ್ಷಣೆ ನೀಡುವಂತೆ ಶಾಸಕ ಹರೀಶ್ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದಾರೆ.