ಹಾವೇರಿ ಜಿಲ್ಲೆಯ ವಿವಿದ 53 ಪ್ರಮುಖ ಪ್ರಕರಣಗಳ ಒಟ್ಟು 1 ಕೋಟಿಗೂ ಹೆಚ್ಚು ಮೌಲ್ಯದ ಪಾಪರ್ಟಿ ರಿಟರ್ನ್ ಪರೇಡ್
ಹಾವೇರಿ: ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 53 ಪ್ರಕರಣಗಳನ್ನು ಭೇಧಿಸಿರುವ ಹಾವೇರಿ ಜಿಲ್ಲೆಯ ಪೊಲೀಸರು ಒಟ್ಟು 1 ಕೋಟಿಗೂ ಅಧಿಕ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದು, ಇಂದು ವಾರಸುದಾರರಿಗೆ ಸ್ವತ್ತು ಹಿಂದಿರುಗಿಸುವ ಪಾಪರ್ಟಿ ರಿಟರ್ನ್ ಪರೇಡ್ ಕಾರ್ಯಕ್ರಮವನ್ನು ಪೊಲೀಸ್ ಕಾರ್ಯಾದಲ್ಲಿ ನಡೆಸಲಾಯಿತು.
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಸ್ವತ್ತು ಕಳವು ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸ್ವತ್ತನ್ನು ಸಂಬಂಧಿಸಿದ ವಾರಸುದಾರರಿಗೆ ಹಿಂದಿರುಗಿಸಲಾಯಿತು.
ಹಾವೇರಿ ಉಪ – ವಿಭಾಗದ 15 ಪ್ರಕರಣಗಳಲ್ಲಿ 71,93,833 ರು., ಮೌಲ್ಯ ಸ್ವತ್ತುಗಳು, ಶಿಗ್ಗಾಂವ್ ಉಪ – ವಿಭಾಗದ 12 ಪ್ರಕರಣ, ರಾಣೆಬೆನ್ನೂರ ಉಪ – ವಿಭಾಗದ 26 ಪ್ರಕರಣಗಳಲ್ಲಿ 26,04 ಸಾವಿರ ರೂ ಮೌಲ್ಯ ಹೀಗೆ ಒಟ್ಟು 53 ಪ್ರಮುಖ ಪ್ರಕರಣಗಳಲ್ಲಿ ಒಟ್ಟು 1,08,76,763 ರು., ಮೌಲ್ಯದ ನಗದು, ಬೆಳ್ಳಿ, ಬಂಗಾರದ ಆಭರಣಗಳು, ದ್ವಿ-ಚಕ್ರ ವಾಹನಗಳು ಸೇರಿದಂತೆ ಇನ್ನಿತರ ಸ್ವತ್ತನ್ನು ಸಂಬಂಧಿಸಿದ ವಾರಸುದಾರರಿಗೆ ನಿಯಮಾನುಸಾರ ಹಿಂದಿರುಗಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹನುಮಂತರಾಯ, ಜಿಲ್ಲೆಯ ಎಲ್ಲ ಡಿಎಸ್‌ಪಿ, ಸಿಪಿಐ ಹಾಗೂ ಪಿಎಸ್‌ಐ ಹಾಜರಿದ್ದರು.