Heavy Rain Tree Falls: ವರುಣನ ಆರ್ಭಟಕ್ಕೆ ದರೆಗುರುಳಿದ ಮರ: ನಾಲ್ಕು ವಾಹನ ಜಖಂ
ಹರಿಹರ: ನಗರದ ಇಂದಿರಾ ಕ್ಯಾಂಟೀನ್ ಬಳಿ ವರುಣಾರ್ಭಟಕ್ಕೆ ಮರ ಧರೆಗುರುಳಿರುವ ಹಿನ್ನೆಲೆಯಲ್ಲಿ ನಾಲ್ಕು ವಾಹನಗಳು ಜಖಂಗೊಂಡಿರುವ ಘಟನೆ ಇಂದು ಸಂಜೆ ನಡೆದಿದೆ. ಹರಿಹರದಲ್ಲಿ ಸಂಜೆ ಸುರಿದ ಭಾರೀ ಮಳೆಗೆ ಧೈತ್ಯಾಕಾತದ ಮರವೊಂದು ಟ್ಯಾಕ್ಸಿಗಳ ಮೇಲೆ ಬಿದ್ದಿರುವ ಪರಿಣಾಮ ಅವು ನಜ್ಜುಗುಜ್ಜಾಗಿವೆ.
ಟ್ಯಾಕ್ಸಿ ಮಾಲೀಕರುಗಳು ಇದೇ ವೇಳೆ ಮಾತನಾಡಿ, ಕರೋನಾ ಹಿನ್ನೆಲೆಯ ಲಾಕ್ಡೌನ್ ನಿಂದ ಆರ್ಥಿಕ ಸ್ಥಿತಿ ಕಂಗೆಟ್ಟಿದ್ದು, ಇದೀಗ ತಾನೆ ಲಾಕ್ಡೌನ್ ಮುಗಿದು ಸಹಜ ಜೀವನಕ್ಕೆ ಮರಳುವ ವೇಳೆ ಮಳೆಯ ಅವಕೃಪೆಯಿಂದ ಹೊಟ್ಟೆ ಹೊರೆದುಕೊಳ್ಳಲಿದ್ದ ವಾಹನಗಳು ಸಂಪೂರ್ಣ ಜಖಂ ಆಗಿವೆ ಎಂದು ಅಳಲು ತೋಡಿಕೊಂಡರು. ನಾವೆಲ್ಲಾ ಬಡವರಾಗಿದ್ದು, ದುಡಿದುಣ್ಣಲು ಇದ್ದ ಏಕೈಕ ವಾಹನವೂ ಈಗ ಜಖಂಗೊಂಡಿದೆ. ಆದ್ದರಿಂದ ಸರ್ಕಾರ ನಮಗೆ ಪರಿಹಾರ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.