ದಾವಣಗೆರೆ ಹಳೇ ಭಾಗಕ್ಕೆ ಭಾರೀ ವಾಹನ ನಿಷೇಧ ಬಗ್ಗೆ ಎಸ್ ಪಿ ರಿಷ್ಯಂತ್ ಸಭೆ

ದಾವಣಗೆರೆ: ನಗರದ ಹಳೇ ಭಾಗದ ವಾಣಿಜ್ಯ ಸಂಕೀರ್ಣಗಳನ್ನು ಹೊಂದಿರುವ ಪ್ರಮುಖ 06 ರಸ್ತೆಗಳಲ್ಲಿ ಭಾರಿ ಸರಕು ವಾಹನಗಳ ಪ್ರವೇಶ ವನ್ನು ನಿಷೇಧಿತ ರಸ್ತೆಗಳನ್ನಾಗಿ ಮಾಡಲು ಇಂದು ಎಸ್ಪಿ ರಿಷ್ಯಂತ್ ಅಧ್ಯಕ್ಷತೆಯಲ್ಲಿ ಪೂರ್ವ ಭಾವಿ ಸಭೆ ನಡೆಯಿತು.
ನಗರದ ಬಕ್ಕೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಸಭೆಗೆ ಆಗಮಿಸಿದ್ದವರಿಂದ ಸಮಸ್ಯೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸಲಾಯಿತು.
ಸಭೆಯಲ್ಲಿ ಹೆಚ್ಚುವರಿ ಎಸ್ಪಿ ರಾಜೀವ್ ಎಂ., ಸ್ಮಾರ್ಟ್ ಸಿಟಿ ಎಂ.ಡಿ. ರವೀಂದ್ರ ಮಲ್ಲಾಪುರ, ಆರ್.ಟಿ.ಓ ಅಧಿಕಾರಿಗಳಾದ ಶ್ರೀಧರ್, ಪಾಲಿಕೆ ಇಂಜಿನಿಯರ್ ನಳಿನಿ, ಡಿವೈಎಸ್ಪಿ ನಾಗೇಶ್ ಐತಾಳ್ ಹಾಗೂ ಲಾರಿ ಅಸೋಸಿಯೇಷನ್, ಚೆಂಬರ್ ಆಫ್ ಕಾಮರ್ಸ್, ಮಹಾನಗರ ಪಾಲಿಕೆ ಸದಸ್ಯರು, ಹಮಾಲರ ಸಂಘ, ಜ್ಯುಯಲರ್ಸ್ ಅಸೋಸಿಯೇಷನ್, ದಾವಣಗೆರೆ ನಗರದ ನಾಗರಿಕರು ಹಾಗೂ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.