Helmet: ಪೂರ್ಣ ಪ್ರಮಾಣದ ಹೆಲ್ಮೆಟ್ ಧಾರಣೆ ಕಡ್ಡಾಯವಾಗಲು ಮನವಿ

IMG-20250227-WA0057

ದಾವಣಗೆರೆ: (Helmet) ರಾಷ್ಟ್ರೀಯ ರಸ್ತೆ ಸುರಕ್ಷಿತ ಮಾಸಾಚರಣೆ ಅಂಗವಾಗಿ ಪೂರ್ಣ ಪ್ರಮಾಣದ ಮತ್ತು ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿರುವ ಜಿಲ್ಲಾ ಪೊಲೀಸ್ ಇಲಾಖೆಗೆ ದಾವಣಗೆರೆ ಜಿಲ್ಲಾ ವಾಹನ ಚಾಲನ ತರಬೇತಿ ಶಾಲೆಯ ಮಾಲೀಕರ ಸಂಘ ಅಭಿನಂದಿಸಿದೆ.

ಹೆಲ್ಮೆಟ್ ವೈಯಕ್ತಿಕ ಸುರಕ್ಷಿತತೆಗೆ ಅತ್ಯಂತ ಮುಖ್ಯವಾಗಿದ್ದು, ಹಿಂಬದಿ ಸವಾರರ ಪ್ರಾಣ ರಕ್ಷಣೆಗೂ ಅಗತ್ಯವಾಗಿದೆ. ಆದರೆ, ಕೆಲವರು ಚಳಿಗಾಲ, ಬೇಸಿಗೆಕಾಲ ಎಂಬಿತ್ಯಾದಿ ಸಬೂಬು ಹೇಳಿಕೊಂಡು, ಕೂದಲುದುರುತ್ತವೆ, ಮೆದುಳಿಗೆ ಒತ್ತಡವಾಗುತ್ತದೆ ಎಂದು ನೆಪ ಹೇಳುತ್ತಾರೆ. ಹೆಲ್ಮೆಟ್ ಧರಿಸುವುದನ್ನು ನಿರಾಕರಿಸುತ್ತಿದ್ದಾರೆ. ಅಂತವರು ತಮ್ಮ ಸುರಕ್ಷತೆಗಾಗಿ ಆಟೋ ಅಥವಾ ನಗರಸಾರಿಗೆ ಬಸ್ ಗಳಲ್ಲಿ ಪ್ರಯಾಣ ಬೆಳಸಿದರೆ ಗ್ಯಾರಂಟಿ ಯೋಜನೆಗಳಿಂದ ಕಂಗಾಲಾಗಿರುವ ಆಟೋದವರಿಗೂ ದುಡಿಮೆ ಆಗುತ್ತದೆ ಎಂದು ಸಂಘದ ಅಧ್ಯಕ್ಷ ಫಯಾಜ್ ಅಹ್ಮದ್, ಪದಾಧಿಕಾರಿಗಳಾದ ಈಶ್ವರ್, ಕೊಟ್ರಗೌಡ ಯಮನೂರ್, ಮನ್ಸೂರ್, ಮಾಲತೇಶ್ ಮನವಿ ಮಾಡಿದ್ದಾರೆ.

ದ್ವಿಚಕ್ರ ವಾಹನ ಸವಾರರು ಉತ್ತಮ ಗುಣಮಟ್ಟದ ಶಿರಸ್ತ್ರಾಣವನ್ನು ಹಾಗೂ ತಮ್ಮ ವಾಹನಕ್ಕೆ ಎರಡು ಬದಿಯ ಕನ್ನಡಿಯನ್ನು ಅಳವಡಿಸುವುದು ದಾವಣಗೆರೆ ನಗರದಲ್ಲಿ ಮಾತ್ರವಲ್ಲದೆ ತಾಲ್ಲೂಕಿನ ಎಲ್ಲಾ ಕೇಂದ್ರಗಳಲ್ಲಿ ಅನ್ವಯವಾಗಬೇಕು ಎಂದು ಅಭಿಪ್ರಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!