Helmet: ಸೋಮವಾರ ದಿಂದ ISI ಮಾರ್ಕ್ ಇಲ್ಲದ ಕಳಪೆ, ಹಾಫ್ ಮತ್ತು ಪ್ಲಾಸ್ಟಿಕ್ ಹೆಲ್ಮೆಟ್ ಬಳಸುವ ವಾಹನ ಚಾಲಕರಿಗೆ ಕಡ್ಡಾಯವಾಗಿ ದಂಡ – ಎಸ್ ಪಿ

IMG-20250222-WA0029

ದಾವಣಗೆರೆ: (Helmet) ದಾವಣಗೆರೆ ಪೊಲೀಸ್ ಅಧೀಕ್ಷಕರಾದ  ಉಮಾ ಪ್ರಶಾಂತ್ ಐಪಿಎಸ್ ರವರ ಸೂಚನೆಯಂತೆ
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ವಿಜಯಕುಮಾರ ಎಂ ಸಂತೋಷ್ ರವರು & ಶ್ರೀ ಜಿ ಮಂಜುನಾಥ ರವರ ಹಾಗೂ ನಗರ ಡಿವೈಎಸ್ಪಿ ಶ್ರೀ ಶರಣ ಬಸವೇಶ್ವರ ರವರ ಮಾರ್ಗದರ್ಶನದಲ್ಲಿ ಹೆಲ್ಮೆಟ್ ಅಭಿಯಾನ ಆಯೋಜಿಸಲಾಗಿತ್ತು.


ದಾವಣಗೆರೆ ನಗರ ಸಂಚಾರ ಪೊಲೀಸ್ ಸಿಪಿಐ ನಲವಾಗಲು ಮಂಜುನಾಥ್ ರವರ ನೇತೃತ್ವದಲ್ಲಿ ದಿನಾಂಕ 21/2/25 & 22/2/25 ರಂದು 2 ದಿನ ದಾವಣಗೆರೆ ನಗರದಲ್ಲಿ ಸಂಚರಿಸುವ ಮೋಟಾರ್ ಸೈಕಲ್ ಚಾಲಕರಿಗೆ ನಗರದ ಪ್ರಮುಖ ಸರ್ಕಲ್ ಗಳಾದ ಅರುಣಾ, ಸಂಗೊಳ್ಳಿ ರಾಯಣ್ಣ, ಎಸಿ ವೃತ್ತ, ಎಂ ಜಿ ವೃತ್ತ, ಗಡಿಯಾರ ಕಂಬ ವೃತ್ತಗಳಲ್ಲಿ half ಹೆಲ್ಮೆಟ್, ಕಳಪೆ ಗುಣಮಟ್ಟದ ಹೆಲ್ಮೆಟ್ ಮತ್ತು ಪ್ಲಾಸ್ಟಿಕ್ ಹೆಲ್ಮೆಟ್ ಹಾಕಿಕೊಂಡು ಸಂಚರಿಸುವ ಮೋಟಾರ್ ಸೈಕಲ್ ಚಾಲಕರಿಗೆ ಸುರಕ್ಷಿತಾ ದೃಷ್ಟಿಯಿಂದ ಅವುಗಳನ್ನು ಧರಿಸದಂತೆ ಮತ್ತು ಪ್ಲಾಸ್ಟಿಕ್ ಹೆಲ್ಮೆಟ್ / half ಹೆಲ್ಮೆಟ್ ಬದಲಾಗಿ ISI ಗುಣಮಟ್ಟದ ಸುರಕ್ಷಿತಾ ಹೆಲ್ಮೆಟ್ ಗಳನ್ನು ಧರಿಸಿ ಮೋಟಾರ್ ಸೈಕಲ್ ಚಲಾಯಿಸಿ ಅಪಘಾತದಂತ ಸಂದರ್ಭದಲ್ಲಿ ತಮ್ಮ ಜೀವನ ಹಾನಿಯನ್ನು ತಡೆಯಬೇಕು ಅಂತಾ ಅರಿವನ್ನು ಮೂಡಿಸಲಾಯಿತು.

ಕಳೆದೆರಡು ದಿನಗಳಲ್ಲಿ ಸುಮಾರು 2000 ಪ್ಲಾಸ್ಟಿಕ್ / half ಹೆಲ್ಮೆಟ್ ಗಳನ್ನು ನಾಶಪಡಿಸುವ ಸಲುವಾಗಿ ವಶಕ್ಕೆ ಪಡೆಯಲಾಯಿತು ಮತ್ತು ಕೇವಲ ಈ ಬಾರಿ ISI ಮಾರ್ಕ್ ಇರುವ ಗುಣಮಟ್ಟದ ಹೆಲ್ಮೆಟ್ ತಂದು ಹಾಕಿಕೊಂಡವರಿಗೆ ಹಾಗೂ ಪ್ಲಾಸ್ಟಿಕ್ ಹೆಲ್ಮೆಟ್ / half ಹೆಲ್ಮೆಟ್ ಅನ್ನು ಅರಿತುಕೊಂಡು ವಶಕ್ಕೆ ನೀಡಿದವರಿಗೆ ಮಾತ್ರ ದಂಡ ವಿಧಿಸದೆ ತಿಳುವಳಿಕೆ ನೀಡಿ ಹಾಗೆ ಕಳುಹಿಸಲಾಯಿತು.ಈ ವಿಶೇಷ ಕಾರ್ಯಚರಣೆಯು ದಿನಾಂಕ 23/2/25 ರವರೆಗೆ ಮಾತ್ರ ನಡೆಯಲಿದೆ.

ದಿನಾಂಕ 24/2/25 ರ ಸೋಮವಾರ ದಿಂದ ISI ಮಾರ್ಕ್ ಇಲ್ಲದ ಕಳಪೆ, ಹಾಫ್ ಮತ್ತು ಪ್ಲಾಸ್ಟಿಕ್ ಹೆಲ್ಮೆಟ್ ಹಾಕಿಕೊಂಡು ಮೋಟಾರ್ ಸೈಕಲ್ ಓಡಿಸುವ ಚಾಲಕರಿಗೆ ಕಡ್ಡಾಯವಾಗಿ ದಂಡ ವಿಧಿಸಲಾಗುವುದು ಎಂದು ಪೊಲೀಸ್ ಅಧಿಕ್ಷರಾದ ಉಮಾ ಪ್ರಶಾಂತ್ ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!