ಅಬಕಾರಿ ಅಕ್ರಮ ತಡೆಗೆ ಹೆಲ್ಪ್ಲೈನ್ ಆರಂಭ

ದಾವಣಗೆರೆ : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ಹಿನ್ನಲೆಯಲ್ಲಿ ಚುನಾವಣೆ ಸಮಯದಲ್ಲಿ ನಡೆಯುವ ಅಬಕಾರಿ ಅಕ್ರಮಗಳ ಮಾಹಿತಿ ನೀಡಲು ಅನುಕೂಲವಾಗಲು ಜಿಲ್ಲೆಯ ಅಬಕಾರಿ ಇಲಾಖೆಯ ಟೋಲ್ ಫ್ರೀ ನಂ -18004250379 ಹೆಲ್ಪ್ಲೈನ್ ಸ್ಥಾಪಿಸಲಾಗಿದೆ. ಸಾರ್ವಜನಿಕರು ಕರೆ ಮಾಡಿ ದೂರು, ಮಾಹಿತಿ ನೀಡಬಹುದು.
ಮತದಾರರನ್ನು ಸೆಳೆಯುವ ಸಲುವಾಗಿ ಕಳಪೆ ಗುಣಮಟ್ಟದ ನಕಲಿ ಮದ್ಯ, ಸಾರಾಯಿಗಳ ತಯಾರಿಕೆ, ಸಾಗಾಣಿಕೆ, ಶೇಕರಣೆ ಮಾಡಿ ಸಾರ್ವಜನಿಕರಿಗೆ ವಿತರಿಸುವುದು ಅಬಕಾರಿ ಕಾಯ್ದೆ ಪ್ರಕಾರ ಅಪರಾಧವಾಗಿದೆ ಹಾಗೂ ಸಾರ್ವಜನಿಕರು ಇದನ್ನು ಸೇವಿಸುವುದರಿಂದ ಜೀವ ಕಳೆದುಕೊಳ್ಳುವ ಸಂಭವವಿರುತ್ತದೆ.
ಇಂತಹ ಅಕ್ರಮಗಳ ಮಾಹಿತಿ ನೀಡಲು ಅನುಕೂಲವಾಗುವಂತೆ ಜಿಲ್ಲೆಯಾದ್ಯಂತ ಹೆಲ್ಪ್ಲೈನ್‌ಗಳನ್ನು ಸ್ಥಾಪಿಸಲಾಗಿದೆ.
ಜಿಲ್ಲಾ ಅಬಕಾರಿ ಉಪ ಆಯುಕ್ತರ ಕಚೇರಿ ಕಂಟ್ರೋಲ್ ರೂಂ ಸಂ – 08192-230921ಹಾಗೂ ಅಬಕಾರಿ ಉಪ ಆಯುಕ್ತರ ಮೊ. ಸಂ -9449597061/9449597063, ದಾವಣಗೆರೆ ಉಪ ವಿಭಾಗ ಕಂಟ್ರೋಲ್ ರೂಂ ಸಂ -08192-225042, ಹಾಗೂ ಅಬಕಾರಿ ಉಪ ಅಧೀಕ್ಷಕರ ಮೊ.ಸಂ -9449597064/9449597065, ಹೊನ್ನಾಳಿ ಉಪ ವಿಭಾಗದ ಕಂಟ್ರೋಲ್ ರೂಂ ಸಂ -08188-295202 ಹಾಗೂ ಅಬಕಾರಿ ಉಪ ಅಧೀಕ್ಷಕರ ಮೊ.ಸಂ -9449597066/9449597067, ದಾವಣಗೆರೆ ವಲಯ ನಂ-1 ಕಂಟ್ರೋಲ್ ರೂಂ ಸಂ – 08192-224177, ದಾವಣಗೆರೆ ವಲಯ ನಂ-2 ಕಂಟ್ರೋಲ್ ರೂಂ ಸಂ-08192-221150, ಹರಿಹರ ವಲಯದ ಕಂಟ್ರೋಲ್ ರೂಂ ಸಂ – 08192-242166, ಚನ್ನಗಿರಿ ವಲಯದ ಕಂಟ್ರೋಲ್ ರೂಂ ಸಂ- 08192-295445, ಹೊನ್ನಾಳಿ ವಲಯದ ಕಂಟ್ರೋಲ್ ರೂಂ ಸಂ- 08192-295315 ಸಂಖ್ಯೆಗಳಿಗೆ ಕರೆ ಮಾಡಿ ದೂರು/ ಮಾಹಿತಿ ನೀಡಬಹುದು. ಮತ್ತು ಮಾಹಿತಿದಾರರ ಹೆಸರು ಇತ್ಯಾದಿ ವಿವರಗಳನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ಜಿಲ್ಲಾ ಡೆಪ್ಯೂಟಿ ಕಮಿಷನರ್ ಎಕ್ಸೈಜ್ ತಿಳಿಸಿದ್ದಾರೆ.