ಕೇಂದ್ರ ಬಜೆಟ್ 2023 ರ ಮುಖ್ಯಾಂಶಗಳು

ಕೇಂದ್ರ ಬಜೆಟ್
ನವದೆಹಲಿ: ಸೂಕ್ಷ್ಮ ನೀರಾವರಿ ಪ್ರೋತ್ಸಾಹಿಸಲು ಭದ್ರಾ ಮೇಲ್ದಂಡೆಗೆ 5,300 ಕೋಟಿ ರೂ.
ಬರಪೀಡಿತ ಪ್ರದೇಶಗಳಲ್ಲಿ ಸುಸ್ಥಿರ ಸೂಕ್ಷ್ಮ ನೀರಾವರಿ ಒದಗಿಸುವ ಗುರಿಯನ್ನು ಹೊಂದಿರುವ ಭದ್ರಾ ಮೇಲ್ಡಂಡೆ ಯೋಜನೆಗೆ 5,300 ಕೋಟಿ ರೂಪಾಯಿಗಳ ಕೇಂದ್ರ ನೆರವು
157 ಹೊಸ ನರ್ಸಿಂಗ್ ಕಾಲೇಜು
2014ರ ನಂತರ ಆರಂಭವಾಗಿರುವ 157 ವೈದ್ಯಕೀಯ ಕಾಲೇಜುಗಳಲ್ಲಿ 157 ಹೊಸ ನರ್ಸಿಂಗ್ ಕಾಲೇಜು ಆರಂಭ
ಪ್ರಧಾನ ಮಂತ್ರಿ ಆವಾಸ್ ಯೋಜನೆ ಶೇಕಡ 66ರಷ್ಟು ವಿಸ್ತರಿಸಲಾಗಿದ್ದು, ಅನುದಾನ 79,000 ಕೋಟಿರೂ. ಗೆ ಹೆಚ್ಚಳ
ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ 38,800 ಶಿಕ್ಷಕರ ನೇಮಕ
3.5 ಲಕ್ಷ ಬುಡಕಟ್ಟು ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸುತ್ತಿರುವ 740 ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ ಕೇಂದ್ರ ಸರ್ಕಾರವು ಮುಂದಿನ ಮೂರು ವರ್ಷಗಳಲ್ಲಿ 38,800 ಶಿಕ್ಷಕರು ಮತ್ತು ಸಹಾಯಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಿದೆ.
ಶೇ 7.5 ಬಡ್ಡಿಯೊಂದಿಗೆ ಗರಿಷ್ಠ 2 ಲಕ್ಷ ರೂ.ವರೆಗೆ ಠೇವಣಿ ಮಾಡಲು ಮಹಿಳಾ ಸಮ್ಮಾನ್ ಅಡಿ ಅವಕಾಶ
ಶೇ 7.5 ಬಡ್ಡಿಯೊಂದಿಗೆ ಗರಿಷ್ಠ 2 ಲಕ್ಷ ರೂ.ವರೆಗೆ ಠೇವಣಿ ಇಡಲು ‘ಮಹಿಳಾ ಸಮ್ಮಾನ್’ ಉಳಿತಾಯ ಪ್ರಮಾಣಪತ್ರದ ಅಡಿಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಇದನ್ನು 2025ರ ವರೆಗೆ ವಿಸ್ತರಿಸಲಾಗುತ್ತದೆ.
ಒಂದು ಜಿಲ್ಲೆ, ಒಂದು ಉತ್ಪನ್ನಕ್ಕೆ ಪ್ರೋತ್ಸಾಹ
‘ಒಂದು ಜಿಲ್ಲೆ ಒಂದು ಉತ್ಪನ್ನ’ ವಸ್ತುಗಳು ಮತ್ತು ಜಿಐ ಉತ್ಪನ್ನಗಳ ಪ್ರಚಾರ ಮತ್ತು ಮಾರಾಟಕ್ಕಾಗಿ ಯೂನಿಟಿ ಮಾಲ್ ಸ್ಥಾಪಿಸಲು ರಾಜ್ಯ ಸರ್ಕಾರಗಳಿಗೆ ಉತ್ತೇಜನ
ಯುವಕರ ಕೌಶಲ್ಯ ತರಬೇತಿಗಾಗಿ ‘ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ 4.0’ ಅನ್ನು ಪ್ರಾರಂಭಿಸಲಾಗುವುದು
ಪ್ರವಾಸೋದ್ಯಮವನ್ನು ಉತ್ತೇಜಿಸಲು ‘ಚಾಲೆಂಜ್ ಮೋಡ್’ ಮೂಲಕ 50 ಸ್ಥಳಗಳನ್ನು ಆಯ್ಕೆ ಮಾಡಲು ಸರ್ಕಾರ ನಿರ್ಧಾರ
