ಹಿಜಾಬ್ – ಕೇಸರಿ ಶಾಲು ಪ್ರಕರಣ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ! ಹಿಂಸೆಗೆ ತಿರುಗಿದ ಪ್ರತಿಭಟನೆ.!ಪೊಲೀಸ್ ರಿಂದ ಲಾಟಿ ಚಾರ್ಜ್

ದಾವಣಗೆರೆ: ಹಿಜಾಬ್ ಹಾಗೂ ಕೇಸರಿ ಸಂಘರ್ಷ
ಹರಿಹರದ ಪ್ರಥಮ ದರ್ಜೆ ಕಾಲೇಜಿನ ಬಳಿ ಗಲಾಟೆ ಹಿಂಸಾ ಸ್ವರೂಪ ತಾಳಿದ ಹಿನ್ನೆಲೆ ಲಘು ಲಾಠಿ ಪ್ರಹಾರ ನಡೆಸಿ ಅಶ್ರುವಾಯು ಸಿಡಿಸಿದ ಪ್ರಕರಣ ನಡೆದಿದೆ.
ವಿದ್ಯಾರ್ಥಿಗಳು ಹಾಗೂ ಕಿಡಿಗೇಡಿಗಳು ಪೊಲೀಸ್ ಹಾಗೂ ಸಾರ್ವಜನಿಕರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ರು, ಇದರಿಂದ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬಂದಿದ್ದ ಸಮುದಾಯದ ಜನರನ್ನ ಚದುರಿಸಲು ಪೊಲೀಸ್ ಲಾಟಿ ಬೀಸಿದ್ದಾರೆ.
ಗಲಾಟೆ ನಿಯಂತ್ರಣಕ್ಕೆ ಹೋದ ಪೊಲೀಸರ ಮೇಲೆ ಕಿಡಿಗೇಡಿಗಳ ಕಲ್ಲು ತೂರಾಟ ನಡೆಸಿದ್ರು ಬಳಿಕ ಕಾಲೇಜು ಬಳಿ ಗಲಾಟೆ ಶುರುವಾಯ್ತು ಇದರಿಂದ ಪೊಲೀಸರು ಲಾಠಿ ಚಾರ್ಜ್ ಮಾಡಬೆಕಾಯಿತು
ರಸ್ತೆಗಳಲ್ಲಿ ನಿಂತುಕೊಂಡು ಕಲ್ಲು ತೂರುತ್ತಿರುವ ಕಿಡಿಗೇಡಿಗಳು ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಹಾನಿ ಮಾಡಲಾಗಿದೆ. ಸ್ಥಳಕ್ಕೆ ಶಾಸಕ ಎಸ್ ರಾಮಪ್ಪ ಭೇಟಿ, ಪರಿಸ್ಥಿತಿ ಪರಿಶೀಲನೆ ನಿಯಂತ್ರಿಸುವಲ್ಲಿ ಪ್ರಯತ್ನಿಸುತ್ತಿದ್ದಾರೆ, ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದ್ದು ದಾವಣಗೆರೆ ಎಸ್ ಪಿ ರಿಷ್ಯಂತ್ ರಿಂದ ಹರಿಹರ ಕಾಲೇಜಿನ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.

 
                         
                       
                       
                       
                       
                      