ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆ; ಎಸ್ ಪಿ ನೇತೃತ್ವದಲ್ಲಿ ಪೊಲೀಸ್ ಪಥಸಂಚಲನ

IMG-20241004-WA0044

ದಾವಣಗೆರೆ: ದಾವಣಗೆರೆ ನಗರದಲ್ಲಿ ದಿನಾಂಕ : 05-10-2024 ರಂದು ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ನಗರದಲ್ಲಿ ಕಾನೂನು & ಸುವ್ಯವಸ್ಥೆ ಕಾಪಾಡುವ ಹಾಗೂ ಸಾರ್ವಜನಿಕರಲ್ಲಿ ಭಯಮುಕ್ತ ವಾತಾವರಣ ನಿರ್ಮಾಣ ದೃಷ್ಠಿಯಿಂದ ಇಂದು ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರ ನೇತೃತ್ವದಲ್ಲಿ ‘ಪೊಲೀಸ್ ಪಥ ಸಂಚಲನ’ ಹಮ್ಮಿಕೊಳ್ಳಲಾಗಿತ್ತು.

ಪೊಲೀಸ್ ಪಥ ಸಂಚಲನವು ಡಿಎಆರ್ ಪರೇಡ್ ಮೈದಾನದಿಂದ ಆರಂಭವಾಗಿ ರಾಮ್ ಅಂಡ್ ಕೋ ವೃತ್ತ, ಎವಿಕೆ ರಸ್ತೆ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಲಾಯರ್ ರೋಡ್, ಹಳೆ ಪಿ ಬಿ ರಸ್ತೆ ಮೂಲಕ ಸಾಗಿ ಗಾಂಧಿ ವೃತ್ತ, ಅರುಣಾ ವೃತ್ತ ನಂತರ ಸಂಗೊಳ್ಳಿ ರಾಯಣ್ಣ ವೃತ್ತ ಮುಖಾಂತರ ಸಾಗಿ ಜಿಲ್ಲಾ ಪೊಲೀಸ್ ಕಚೇರಿಗೆ ಮುಕ್ತಾಯವಾಗಿತು.

ಈ ಸಂಧರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ವಿಜಯಕುಮಾರ ಎಂ ಸಂತೋಷ ರವರು ಮತ್ತು ಶ್ರೀ ಜಿ ಮಂಜುನಾಥ ರವರು, ಸಹಾಯಕ ಪೊಲೀಸ್ ಅಧೀಕ್ಷಕರಾದ ಶ್ರೀ ಸ್ಯಾಮ್ ವರ್ಗೀಸ್ ಐಪಿಎಸ್ ರವರು, ನಗರ ಡಿವೈಎಸ್ಪಿ ಶ್ರೀ ಮಲ್ಲೇಶ್ ದೊಡ್ಮನಿ ರವರು, ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಶ್ರೀ ಬಸವರಾಜ ಬಿ ಎಸ್ ರವರು, ಡಿಎಆರ್ ಡಿವೈಎಸ್ಪಿ ಶ್ರೀ ಪಿಬಿ ಪ್ರಕಾಶ್, ಪೊಲೀಸ್ ನಿರೀಕ್ಷಕರುಗಳಾದ ಶ್ರಿ ಗುರುಬಸವರಾಜ, ಶ್ರೀ ನೆಲವಾಗಲು ಮಂಜುನಾಥ, ಶ್ರೀ ಅಶ್ವಿನ್ ಕುಮಾರ, ಶ್ರೀ ಸುನೀಲ್ ಕುಮಾರ್, ಶ್ರೀ ನೂರ್ ಅಹಮ್ಮದ್, ಶ್ರೀಮತಿ ಪ್ರಭಾವತಿ, ಶ್ರೀಮತಿ ಮಲ್ಲಮ್ಮ, ಅಶ್ವಿನ್ ಕುಮಾರ್ , ಶ್ರೀಮತಿ ಚೌಬೆ ರವರು ಸೇರಿದಂತೆ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!