Hindu MahaGanapathi: ಸೆಪ್ಟೆಂಬರ್ 20 ರಂದು ಹಿಂದೂ ಮಹಾಗಣಪತಿಯ ಗಣೇಶ ವಿಸರ್ಜನಾ ಮೆರವಣೆಗೆ, ಸಂಚಾರ ಮಾರ್ಗದಲ್ಲಿ ಬದಲಾವಣೆ

Hindu MahaGanapathi: On September 20, for the Ganesha Visarjana procession of the Hindu Mahaganapati, Change in traffic route
ದಾವಣಗೆರೆ :Hindu MahaGanapathi : ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನಾ ಮೆರವಣಿಗೆ ಇರುವುದರಿಂದ ಸಾರ್ವನಿಕರಿಗೆ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಸೆ.20  ರಂದು ಬೆಳಿಗೆ, 10 ರಿಂದ  ರಾತ್ರಿ 11 ಗಂಟೆಯವರೆಗೆ ಸಂಚಾರ ಮಾರ್ಗ ಬದಲಾಯಿಸಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಆದೇಶಿಸಿದ್ದಾರೆ.
ಹರಿಹರ ಕಡೆಯಿಂದ ಬಾತಿ ಮೂಲಕ ಹಳೆ ಪಿ.ಬಿ. ರಸ್ತೆ ಮುಖಾಂತರ ಬರುವ ಎಲ್ಲಾ ಭಾರಿ ವಾಹನಗಳು. ಅಂದರೆ ಸರುಕು ಲಾರಿಗಳು ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್‌ಗಳು ಹರಿಹರ ನಗರದಿಂದಲೇ ದಾವಣಗೆರೆ ಕಡೆಗೆ ಬರುವ ಹಳೇ ಪಿ.ಬಿ ರಸ್ತೆಗೆ ಬಾರದೆ ಹರಿಹರದಿಂದ ನೇರವಾಗಿ ಶಿವಮೊಗ್ಗ, ಬೈಪಾಸ್ ಮುಖಾಂತರ ಹೊಸ ಎನ್.ಹೆಚ್-48 ರಸ್ತೆ ಮೂಲಕ ಬಾಡಾ ಕ್ರಾಸ್ ಮುಖಾಂತರ ಅವರಗೆರೆ ಮಾರ್ಗವಾಗಿ ಬಂದು ಸರಕು ಲಾರಿಗಳು ಡಿಸಿಎಂ ಅಂಡರ್ ಪಾಸ್ ಹತ್ತಿರದ ದನದ ಮಾರ್ಕೇಟ್ ಕ್ರಾಸ್ ಮುಖಾಂತರ ಎಪಿಎಂಸಿಗೆ ಹೋಗುವುದು.
ಕೆ.ಎಸ್.ಆರ್.ಟಿ.ಸಿ ಬಸ್‌ಗಳು ಮೇಲ್ಕಂಡ ಮಾರ್ಗದಲ್ಲಿ ಬಾಡಾ ಕ್ರಾಸ್ ಮುಖಾಂತರ ಅವರಗೆರೆ ಮಾರ್ಗವಾಗಿ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ನಂತರ ಅದೇ ಮಾರ್ಗವಾಗಿ ವಾಪಸ್ಸು ಬೆಂಗಳೂರು, ಬೆಳಗಾವಿ ಕಡೆಗೆ ಹೋಗುವುದು. ನಂತರ ಖಾಸಗಿ ಬಸ್‌ಗಳು ಮೇಲ್ಕಂಡ ಮಾರ್ಗದಲ್ಲಿ ಬಂದು ಎ.ಪಿ.ಎಂ.ಸಿ ಮಾರ್ಕೇಟ್‌ನಲ್ಲಿ ಬಂದು ಪಾರ್ಕಿಂಗ್ ಮಾಡುವುದು.
ಚಿತ್ರದುರ್ಗದ ಕಡೆಯಿಂದ ಬರುವ ಸರಕು ಲಾರಿಗಳು ಡಿ.ಸಿಎಂ ಅಂಡರ್ ಪಾಸ್ ಹತ್ತಿರದ ದನದ ಮಾರ್ಕೆಟ್ ಕ್ರಾಸ್ ಮುಖಾಂತರ ಎಪಿಎಂಸಿಗೆ ಹೋಗುವುದು ಕೆ.ಎಸ್.ಆರ್.ಟಿ.ಸಿ ಬಸ್ ಗಳು ಮೇಲ್ಕಂಡ ಮಾರ್ಗದಲ್ಲಿ ಎಪಿಎಂಸಿ ಹೋಗುವುದು. ಕೆಎಸ್‌ಆರ್‌ಟಿಸಿ ಬಸ್‌ಗಳು ಮೇಲ್ಕಂಡ ಮಾರ್ಗವಾಗಿ ನೂತನ ಬಸ್ ನಿಲ್ದಾಣಕ್ಕೆ ಬಂದು ನಂತರ ಅದೇ ಮಾರ್ಗವಾಗಿ ವಾಪಸ್ಸು ಬೆಂಗಳೂರು, ಬೆಳಗಾವಿ ಕಡೆಗೆ ಹೋಗುವುದು. ನಂತರ ಖಾಸಗಿ ಬಸ್ ಗಳು ಮೇಲ್ಕಂಡ ಮಾರ್ಗದಲ್ಲಿ ಬಂದು ಎ.ಪಿ.ಎಂ.ಸಿ ಮಾರ್ಕೆಟ್‌ನಲ್ಲಿ ಬಂದು ಪಾರ್ಕಿಂಗ್ ಮಾಡುವುದು.
ಜಿಎಂಐಟಿ ಕಾಲೇಜ್ ಹತ್ತಿರ ತಾತ್ಕಾಲಿಕ ರಸ್ತೆ ಬದಿಯಲ್ಲಿ ನಿಲ್ಲಿಸುವಂತಹ ಗೂಡ್ಸ್ ಲಾರಿಗಳು ರಸ್ತೆಯ ಬದಿಯಲ್ಲಿ ನಿಲ್ಲಿಸದೇ ಖಾಸಗಿ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳುವುದು. ಚನ್ನಗಿರಿ ಕಡೆಯಿಂದ ಹದಡಿ ಬ್ರಿಡ್ಜ್ ಮೂಲಕ ಬರುವ ಕೆ.ಎಸ್.ಆರ್.ಟಿ.ಸಿ ಬಸ್ ಗಳು ಬಾಡಾ ಕ್ರಾಸ್ ಮೂಲಕ ಆವರಗೆರೆ ಮಾರ್ಗವಾಗಿ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ನಂತರ ಅದೇ ಮಾರ್ಗವಾಗಿ ವಾಪಸ್ಸು ಹೋಗುವುದು ನಂತರ ಖಾಸಗಿ ಬಸ್ ಗಳು ಮಾಗನೂರು ಬಸಪ್ಪ ಪೆಟ್ರೋಲ್ ಬಂಕ್ ಹತ್ತಿರದ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು.
ಚನ್ನಗಿರಿ ಕಡೆಯಿಂದ ಸರಕು ಲಾರಿಗಳು ಮೇಲ್ಕಂಡ ಮಾರ್ಗದಲ್ಲಿ ಬಂದು ಎ.ಪಿ.ಎಂ.ಸಿ ಮಾರ್ಕೆಟ್ನಲ್ಲಿ ಬಂದು ಪಾರ್ಕಿಂಗ್ ಮಾಡುವುದು.
ಜಗಳೂರು ಕಡೆಯಿಂದ ಬರುವ ಕೆ.ಎಸ್‌ಆರ್‌ಟಿಸಿ ಬಸ್ ಗಳು ಬೇತೂರು ರಸ್ತೆ ಮೂಲಕ ಆರ್.ಎಂ.ಸಿ ಫ್ಲೈ ಓವರ್ ಸೇತುವೆ ಮುಖಾಂತರ ಬಂದು ನೂತನವಾಗಿ ನಿರ್ಮಾಣಗೊಂಡಿರುವ ಕೆಎಸ್‌ಆರ್‌ಟಿಸಿಬಸ್ ನಿಲ್ಯಾಣಕ್ಕೆ ಬಂದು ನಂತರ ಅದೇ ಮಾರ್ಗವಾಗಿ ವಾಪಸ್ಸು ಹೋಗುವುದು. ನಂತರ ಜಗಳೂರು ಕಡೆಯಿಂದ ಬರುವ ಖಾಸಗಿ ಬಸ್ ಗಳು ಜಗಳೂರು ಖಾಸಗಿ ಬಸ್ ನಿಲ್ಯಾಣಕ್ಕೆ ಬಂದು ನಂತರ ಅದೇ ಮಾರ್ಗವಾಗಿ ವಾಪಸ್ ಹೋಗುವುದು.
ಹಾಗೂ ಸರಕು ಲಾರಿಗಳು ವೆಂಕಟೇಶ್ವರ ಸರ್ಕಲ್, ಗಣೇಶ ಹೋಟೆಲ್ ಸರ್ಕಲ್ ಮುಖಾಂತರ ಎ.ಪಿ.ಎಂ.ಸಿ ಮಾರ್ಕೇಟ್‌ನಲ್ಲಿ ಬಂದು ಪಾರ್ಕಿಂಗ್ ಮಾಡುವುದು.ಹರಪನಹಳ್ಳಿ ಕಡೆಯಿಂದ ಕಂಚಿಕೆರೆ ಬೆಂಡಿಗರೆ ಮಾರ್ಗವಾಗಿ ದಾವಣಗೆರೆ ನಗರಕ್ಕೆ ಬರುವ ಕೆ.ಎಸ್‌ಆರ್‌ಟಿಸಿ ಬಸ್ ಗಳು ವೆಂಕಟೇಶ್ವರ ಸರ್ಕಲ್ ಗಣೇಶ, ಹೋಟೆಲ್ ಸರ್ಕಲ್ ಮೂಲಕ ಆರ್.ಎಂ.ಸಿ ಫ್ಲೈ ಓವರ್ ಮುಖಾಂತರ ಬಂದು ನೂತನವಾಗಿ ನಿರ್ಮಾಣಗೊಂಡಿರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ನಂತರ ಅದೇ ಮಾರ್ಗವಾಗಿ ವಾಪಸ್ಸು ಹೋಗುವುದು.
ನಂತರ ಹರಪನಹಳ್ಳಿ ಕಡೆಯಿಂದ ಕಂಚಿಕೆರೆ ಬೆಂಡಿಗೆರೆ ಮಾರ್ಗವಾಗಿ ದಾವಣಗೆರೆ ನಗರಕ್ಕೆ ಬರುವ ಖಾಸಗಿ ಬಸ್‌ಗಳು ಜಗಳೂರು ಖಾಸಗಿ ಬಸ್ ನಿಲ್ದಾಣಕ್ಕೆ ಬಂದು, ನಂತರ ಅದೇ ಮಾರ್ಗವಾಗಿ ವಾಪಸ್ ಹೋಗುವುದು ಹಾಗೂ ಸರಕು ಲಾರಿಗಳು ವೆಂಕಟೇಶ್ವರ ಸರ್ಕಲ್, ಗಣೇಶ ಹೋಟೆಲ್ ಸರ್ಕಲ್ ಮುಖಾಂತರ ಎ.ಪಿ.ಎಂ.ಸಿ ಮಾರ್ಕೆಟ್‌ನಲ್ಲಿ ಬಂದು ಪಾರ್ಕಿಂಗ್ ಮಾಡುವುದು.
ಸೆ.20 ರಂದು ಬೆಳಿಗ್ಗೆ 10 ರಿಂದ ರಾತ್ರಿ 11 ಗಂಟೆಯವರೆಗೆ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಬಾತಿಕೆರೆಯವರೆಗೆ ಹಳೆ ಪಿ.ಬಿ ರಸ್ತೆಯಲ್ಲಿ ಯಾವುದೇ ಸರ್ಕಾರಿ ಮತ್ತು ಖಾಸಗಿ ಬಸ್‌ಗಳು ಹಾಗೂ ಯಾವುದೇ ರೀತಿಯ ಭಾರಿ ಮತ್ತು ಲಘು ಸರಕು ಸಾಗಣೆ ವಾಹನಗಳು ಮತ್ತು ಯಾವುದೇ ರೀತಿಯ ಭಾರಿ ಮತ್ತು ಲಘು ವಾಹನಗಳು ಸಂಚರಿಸದಂತೆ ಕ್ರಮವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳು

error: Content is protected !!