ಹಿಂದೂ ಯುವಶಕ್ತಿಯಿಂದ ಗಣಹೋಮ, ಅನ್ನಸಂತರ್ಪಣೆ:ಶಾಸಕ ಎಸ್ಸೆಸ್, ಎಸ್ಸೆಸ್ಸೆಂ ಭಾಗಿ

ದಾವಣಗೆರೆ: ನಗರದ ಎಂಸಿಸಿ ‘ಎ’ ಬ್ಲಾಕ್‌ನ ತೋಗಟವೀರ ಕಲ್ಯಾಣಮಂಟಪದಲ್ಲಿ ಹಿಂದೂ ಯುವ ಶಕ್ತಿ ವತಿಯಿಂದ ಆಚರಿಸುವ ಗಣೇಶಚತುರ್ಥಿಯ ಅಂಗವಾಗಿ ಪ್ರತಿವರ್ಷದಂತೆ ಈ ಬಾರಿಯೂ ಸಹ ಗಣಹೋಮ ಮತ್ತು ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಪವನ್ ಜೋಯಿಸರ ತಂಡ ನಡೆಸಿಕೊಟ್ಟ ಈ ಗಣಹೋಮದಲ್ಲಿ ಶಾಸಕರ ಡಾ|| ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಉದ್ಯಮಿ ಅಥಣಿ ವೀರಣ್ಣ, ಡೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಮಹಾಪೌರರಾದ ಎಸ್.ಟಿ.ವಿರೇಶ್ ಮತ್ತಿತರ ಗಣ್ಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಹಿಂದೂ ಯುವ ಶಕ್ತಿಯ ಪಿ.ಸಿ.ರಾಮನಾಥ್, ಸಂಜು ಮನಗೊಳಿ, ಕೇಶವ, ಗುರುರಾಜ್, ವಿರೇಶ್ ಆರ್., ಪ್ರಭು ಹೊಳಲು, ಹರೀಶ್ ಟಿ., ವೆಂಕಟೇಶ್, ಶಂಕರ್, ಪ್ರವೀಣ್ ದಂಪತಿಗಳು,ಚಂದ್ರು, ಮಣಿಕಂಠ, ನಿರ್ಮಿತಿ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.