ಹಿಂದುಳಿದ ವರ್ಗಗಳ ಏಕೈಕ ಶಾಸಕಿ ಪೂರ್ಣಿಮಾಗೆ ಸಚಿವ ಸ್ಥಾನ ನೀಡಿ.– ಬಾಡದ ಆನಂದರಾಜ್

ದಾವಣಗೆರೆ: ಆ 3– 108 ಹಿಂದುಳಿದ ವರ್ಗಗಳ ಬಿಸಿಎಂ ಎ ದಿಂದ ಏಕೈಕ ಶಾಸಕಿ ಹಾಗೂ
ಹಿರಿಯೂರಿನ ಶಾಸಕಿಯಾದ ಪೂರ್ಣಿಮಾ ಕೃಷ್ಣಪ್ಪನವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ಕಲ್ಪಿಸಲು
ರಾಜ್ಯ ಸರ್ಕಾರವು ಕ್ರಮಗೊಳ್ಳಬೇಕೆಂದು
ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಪ್ರವರ್ಗ 1 ಕ್ಕೆ ಸೇರಿರುವ ಒಂದೂ ಕೋಟಿಗು ಅಧಿಕ ಜನಸಂಖ್ಯೆ ಜನರಿದ್ದು
ಅತ್ಯಂತ ಹಿಂದುಳಿದ ಅಲೆಮಾರಿ ಸಮುದಾಯಗಳು
ಈ ವರ್ಗದಲ್ಲಿ ಇದ್ದಾರೆ,
ಪ್ರವರ್ಗ 1 ರಿಂದ ಏಕೈಕ ಮಹಿಳಾ ಶಾಸಕರು ಪೂರ್ಣಿಮಾ ಕೃಷ್ಣಪ್ಪನವರು ಸುಮಾರು 25 ವರ್ಷಗಳಿಂದ ಪ್ರವರ್ಗ 1 ರ ಯಾವುದೇ ಮಹಿಳಾ ಶಾಸಕರಿಗೆ ಸಚಿವ ಸ್ಥಾನ ದೊರಕಿಲ್ಲ.
ಈಗ ರಾಜ್ಯ ಸರ್ಕಾರವು ಪೂರ್ಣಿಮಾ ಕೃಷ್ಣಪ್ಪ ಅವರಿಗೆ ಸಚಿವ ಸ್ಥಾನ ನೀಡಿ ರಾಜ್ಯದ ಪ್ರವರ್ಗ 1 ಕ್ಕೆ ಪ್ರಾತಿನಿಧ್ಯ ಕಲ್ಪಿಸಬೇಕಿದೆ. ಇವರಿಗೆ ಸಚಿವ ಸ್ಥಾನ ನೀಡಿ ಸಾಮಾಜಿಕ ನ್ಯಾಯ ಕಲ್ಪಿಸಬೇಕೇಂದು ಒತ್ತಾಯಿಸಿದ್ದಾರೆ.
ಮೊನ್ನೆ ನಡೆದ ಲೋಕಸಭಾ ಮತ್ತು ವಿಧಾನಸಭ ಚುನಾವಣೆಯಲ್ಲಿ ಬಿಜೆಪಿಯನ್ನ ನಮ್ಮ ಸಮೂದಾಯಗಳು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ.ಅದೇರೀತಿ ಚುನಾವಣಾ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರು ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು ಎಂದು ಬಾಡದ ಆನಂದರಾಜ್ ರವರು ನುಡಿದದಂತೆ ನಡೆಯಬೇಕೇಂದು ಒತ್ತಾಯಿಸಿದ್ದಾರೆ.