ಹಿರೇಕೋಗಲೂರು ಕೆರೆ ನಿರ್ಮಾಣ ಕಾಮಗಾರಿ ಕಳಪೆ – ಕೊಳೆನಹಳ್ಳಿ ಸತೀಶ್ ಆರೋಪ
ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಹಿರೇಕೋಗಲೂರು ಗ್ರಾಮದ ಸರ್ವೇ ನಂ 46 ರಲ್ಲಿ 10 ಎಕ್ಕರೆ 16 ಗುಂಟೆ ಜಮೀನಿನಲ್ಲಿ ಜನ ಜಾನುವಾರುಗಳ ಕುಡಿಯಲು ನೀರು ಹಾಗೂ ರೈತರಿಗೆ ಅನುಕೂಲವಾಗಲೆಂದು ಹಿಂದಿನ ಸರ್ಕಾರದ ಅವದಿಯಲ್ಲಿ ಶಾಸಕರಾಗಿದ್ದ ಮಾಜಿ ಶಾಸಕ ಮಾಡಳ್ ವಿರೂಪಾಕ್ಷಪ್ಪನವರು ಎರಡು ಕೆರೆಗಳನ್ನು ಮುಂಜೂರು ಮಾಡಿ 10 ಕೋಟಿ ಹಣವನ್ನು ಬಿಡುಗಡೆಗೊಳಿಸಿದ್ದರು.
ಈಗಿನ ಸರ್ಕಾರದ ಅವದಿಯಲ್ಲಿ ಕೆರೆ ಕಾಮಾಗಾರಿ ನಡೆಯುತ್ತಿದ್ದು ಕಾಡುಗಲ್ಲುಗಳಿಂದ ರಿವಿಟ್ ಮೆಂಟ್ . ಮತ್ತು ಯೋಗ್ಯವಾದ ಗ್ರಾವೆಲ್ ಬಳಸದೆ ಕೇವಲ ಹಳದಿ ಬಣ್ಣದ ಮಣ್ಣು (ಕಟುಗು) ಹಾಗೂ ನುಸಿ ಮಣ್ಣಿನಿಂದ ಕಾಮಾಗಾರಿ ನಡೆಯುತ್ತಿದ್ದು ಸಂಪೂರ್ಣವಾಗಿ ಕಳಪೆ ಕಾಮಾಗಾರಿ ನಡೆಯುತ್ತಿರುವ ಬಗ್ಗೆ ಪತ್ರಿಕೆಗಳು ವರದಿ ಬಿತ್ತರಿಸಿದ್ದರೂ ಸಹ ಜಿಲ್ಲಾಡಳಿತ . ಶಾಸಕರು ಹಾಗೂ ಸಂಬಂದಿಸಿದ ಇಂಜೀನಿಯರುಗಳು ಮಾತ್ರ ಮೌನಕ್ಕೆ ಶರಣಾಗಿ ತಮ್ಮ ಪಾಡಿಗೆ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಗಳು ನಡೆಯುತ್ತಿರುವ ಕಾಮಾಗಾರಿಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ನಡೆದಿರುವ ಕಾಮಾಗಾರಿಯನ್ನು ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸಬೇಕು. ಸಾಬೀತಾದರೆ ಗುತ್ತಿಗೆದಾರರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು.
ಕೆರೆ ಸುತ್ತಲೂ ಉತ್ತಮ ಹಾಗೂ ಯೋಗ್ಯ ಕಲ್ಲುಗಳಿಂದ ರಿವಿಟ್ ಮೆಂಟ್ ಮಾಡಿಸಿ ಶಾಶ್ವತವಾಗಿರುವಂತೆ ಭದ್ರಗೊಳಿಸಬೇಕು ಉತ್ತಮವಾದ ಗ್ರಾವೆಲ್ ಬಳಸಬೇಕು. ಕಾಮಾಗಾರಿ ಸಂಪೂರ್ಣವಾಗಿ ಮುಗಿಯುವವರೆಗೂ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೇಮಕಗೊಳಿಸಿ ಕಾಮಾಗಾರಿಯು ಕಳಪೆಯಾಗದಂತೆ ಕಾರ್ಯನಿರ್ವಹಿಸವಂತೆ ನಿರ್ದೇಶನ ನೀಡಬೇಕು.
ಹದಡಿ ಕೆರೆ ಏರಿ ರಸ್ತೆ ದಾವಣಗೆರೆ-ಚನ್ನಗಿರಿ ರಾಜ್ಯ ಹೆದ್ದಾರಿಯಾಗಿದ್ದು, ದುರ್ಬಲಗೊಂಡಾಗ ಲೋಕೋಪಯೋಗಿ ಮತ್ತು ಸಣ್ಣ ನೀರಾವರಿ ಇಲಾಖೆ ನಡುವೆ ಮುಸುಕಿನ ಗುದ್ದಾಟ ನಡೆಯಿತು. ಅದು ರಾಜ್ಯ ಹೆದ್ದಾರಿ, ಅದರ ಅಭಿವೃದ್ಧಿ ಕಾಮಗಾರಿ ಲೋಕೋಪಯೋಗಿ ಇಲಾಖೆಗೆ ಸೇರಿದ್ದು ನಮಗೆ ಸಂಬಂಧವಿಲ್ಲ ಎಂದು ಸಣ್ಣ ನೀರಾವರಿ ಇಲಾಖೆಯವರು ವಾದಿಸಿದರು. ಲೋಕೋಪಯೋಗಿ ಇಲಾಖೆಯವರು ಅದು ಕೆರೆ ಏರಿ ಮೇಲಿನ ರಸ್ತೆ. ಕೆರೆ ಏರಿ ದುರ್ಬಲಗೊಂಡಿದೆ. ಕೆರೆ ಏರಿ ನಮಗೆ ಸಂಬಂಧವಿಲ್ಲ ಎಂದು ವಾದಿಸಿದರು. ಕೊನೆಗೆ ಲೋಕಸಭಾ ಸದಸ್ಯರಾದ ಜಿ.ಎಂ.ಸಿದ್ದೇಶ್ವರರವರು 2 ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ಇಬ್ಬರು ಸಮನ್ವಯತೆಯಿಂದ ಕೆರೆ ಏರಿ ಮತ್ತು ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ ಆಗುವಂತೆ ಮಾಡಿದರು. ಆದ್ದರಿಂದ ಸಣ್ಣ ನೀರಾವರಿ ಇಲಾಖೆಯವರು ಕೆರೆ ಏರಿ ವರ್ಷಾನುಗಟ್ಟಲೆ ಭದ್ರವಾಗಿರುವ ರೀತಿಯಲ್ಲಿ ನೀರ್ಮಾಣ ಮಾಡಬೇಕು. ಕೆರೆ ಏರಿಯ ರಸ್ತೆ ಅಭಿವೃದ್ಧಿ ಚೆನ್ನಾಗಿರಬೇಕು ಎಂದು ಆಗ್ರಹಿಸುತ್ತೇನೆ.
ಬಿ ಎಂ ಸತೀಶ್ ಕೊಳೇನಹಳ್ಳಿ
ಜಿಲ್ಲಾ ಬಿಜೆಪಿ ವಕ್ತಾರ