ಹಿರಿತನ ಇರುವ ನನಗೆ ಸಚಿವ ಸ್ಥಾನ ನೀಡಿದರೆ ಸಮರ್ಥವಾಗಿ ನಿಭಾಯಿಸುತ್ತೇನೆ – ಎಸ್.ಎ. ರವೀಂದ್ರನಾಥ್
ದಾವಣಗೆರೆ: ಜಿಲ್ಲೆಗೆ ಈ ಸಲ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತಗೊಂಡಿದ್ದು, ಪಕ್ಷದಲ್ಲಿ ಹಿರಿತನ ಇರುವ ನನಗೆ ಸಚಿವ ಸ್ಥಾನ ನೀಡಿದರೆ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಹೇಳಿದ್ದಾರೆ.
ಶಿರಮಗೊಂಡನಹಳ್ಳಿಯ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಜಿಲ್ಲೆಗೆ ಸಚಿವ ಸ್ಥಾನ ಕೈತಪ್ಪಿತ್ತು. ಆದರೆ, ಈಗ ಜಿಲ್ಲೆಯ ಯಾರಿಗಾದರೂ ಸಚಿವ ಸ್ಥಾನ ನೀಡುವಂತೆ ಐದು ಶಾಸಕರು ಮನವಿ ಮಾಡಿದ್ದೇವೆ. ನಮ್ಮ ದಾವಣಗೆರೆಗೆ ಸಚಿವ ಸ್ಥಾನ ಸಿಗುವುದಂತೂ ಖಚಿತಗೊಂಡಿದೆ ಎಂದು ತಿಳಿಸಿದರು.
ಕೇಂದ್ರದ ವರಿಷ್ಠರು ಸಚಿವ ಸ್ಥಾನಕ್ಕೆ ಯಾವ ಮಾನದಂಡ ಅನುಸರಿಸುತ್ತಾರೋ ತಿಳಿದಿಲ್ಲ. ಸಚಿವ ಸ್ಥಾನ ಯಾರಿಗೆ ಸಿಗುತ್ತದೋ ಎಂಬ ಬಗ್ಗೆ ಗೊತ್ತಿಲ್ಲ. ವರಿಷ್ಠರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಿರುವುದಾಗಿ ಹೇಳಿದರು.