ತರಳಬಾಳು ಹುಣ್ಣಿಮೆಯಿಂದ ಕೊಟ್ಟೂರಿನಲ್ಲಿ ಇತಿಹಾಸ ಸೃಷ್ಟಿ :ಬಸವರಾಜು ವಿ ಶಿವಗಂಗಾ

ದಾವಣಗೆರೆ: ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ 4 ಸಾವಿರಕ್ಕೂ ಅಧಿಕ ಮಂದಿ ಬೈಕ್ ಹಾಗೂ ಕಾರುಗಳಲ್ಲಿ ತೆರಳುತ್ತಿದ್ದೇವೆ ಎಂದು ವೀರಶೈವ ಲಿಂಗಾಯತ ಸಮಾಜದ ಮುಖಂಡರು ಹಾಗೂ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು ವಿ ಶಿವಗಂಗಾ ತಿಳಿಸಿದರು. 2 ಸಾವಿರಕ್ಕೂ ಅಧಿಕ ಬೈಕ್ 500 ಕ್ಕೂ ಅಧಿಕ ಕಾರುಗಳಲ್ಲಿ ಸಿರಿಗೆರೆ ತಲುಪಿ ನಂತರ ಶ್ರೀಗಳನ್ನ ಬರಮಾಡಿಕೊಂಡು ಬೈಕ್ ಮೆರವಣಿಗೆ ಮೂಲಕ ಜಗಳೂರು ಮಾರ್ಗವಾಗಿ ಕೊಟ್ಟೂರು ತಲುಪುತ್ತೇವೆ. ಅಲ್ಲಿ ಭವ್ಯ ಮೆರವಣಿಗೆ ಮಾಡಿ ನಂತರ ತರಳಬಾಳು ಹುಣ್ಣಿಮೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದರು.ಇದೊಂದು ಮಾನವೀಯತೆಯ, ಸರ್ವಸಮಾಜದ ಅಭಿವೃದ್ಧಿ ಸಂಕೇತದ ದೊಡ್ಡ ಧಾರ್ಮಿಕ ಕಾರ್ಯಕ್ರಮ ಎಂದರು. ಈ ಕಾರ್ಯಕ್ರಮ ಕೊಟ್ಟೂರಿನಲ್ಲಿ ಇತಿಹಾಸ ನಿರ್ಮಿಸಲಿದೆ ಎಂದು ಬಸವರಾಜು ವಿ ಶಿವಗಂಗಾ ತಿಳಿಸಿದರು.

 
                         
                       
                       
                       
                       
                       
                       
                      