ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರ ಆದೇಶ ಮೇರೆಗೆ ಇಂದು ಶುಕ್ರವಾರ ಮುಂಜಾನೆ ಆರು ಗಂಟೆಯಿಂದ ಪಾಲಿಕೆಯ ಮೂರು ವಲಯದಲ್ಲಿ ಮೂರು ತಂಡಗಳಿಂದ ನಗರದ ವಿವಿಧೆಡೆ ಅಕ್ರಮವಾಗಿ ನಿರ್ಮಾಣ ಮಾಡಲಾಗಿದ್ದ ಹೋರ್ಡಿಂಗ್ಸ್, ಫ್ಲೆಕ್ಸ್ ಗಳನ್ನು ತೆರವುಗೊಳಿಸಿ ಹೋರ್ಡಿಂಗ್ಸ್ ಬಳಸಲಾಗಿದ್ದ ಕಬ್ಬಿಣದ ಪರಿಕರಗಳನ್ನು ಪಾಲಿಕೆಗೆ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ. ಹೋರ್ಡಿಂಗ್ಸ್ ತೆರವುಗೊಳಿಸಲು ಬೃಹತ್ ಗಾತ್ರದ ಕ್ರೇನ್ ಗಳನ್ನು ಬಳಸಲಾಗುತ್ತಿದೆ. ಪಾಲಿಕೆಯ ಟ್ರಾಕ್ಟರ್ ಬಳಸಿ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಇದ್ದು ಪೋಲಿಸ್ ಇಲಾಖೆಯ ನೆರವಿನಿಂದ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.ಅಕ್ರಮ ಹೋರ್ಡಿಂಗ್ಸ್ ನಿರ್ಮಾಣ ಹಾಗೂ ಜಿಲ್ಲಾಧಿಕಾರಿಗಳು ಬರೆದಿದ್ದ ಪತ್ರದ ಬಗ್ಗೆ ಗರುಡವಾಯ್ಸ್ ಸಾರ್ವಜನಿಕ ಹಿತಾಸಕ್ತಿ ಮೇರೆಗೆ ವರದಿಗಳ ಮೂಲಕ ಬೆಳಕು ಚೆಲ್ಲಿತ್ತು. ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಜಿಲ್ಲಾಧಿಕಾರಿಗಳ ಆದೇಶಕ್ಕೆ ಹಾಗೂ ಗರುಡವಾಯ್ಸ್ ವರದಿಗಳಿಗೆ ಶ್ಲಾಘನೆಗೆ ಪಾತ್ರವಾಗಿದೆ. ಇದು ಗರುಡವಾಯ್ಸ್ ಬಿಗ್ ಇಂಪ್ಯಾಕ್ಟ್.
ಇದನ್ನು ಓದಿ, ಡಿಸಿ ಬರೆದ ಪತ್ರದ ವರದಿ
ದಾವಣಗೆರೆ ಮಹಾನಗರ ಪಾಲಿಕೆ ಮತ್ತು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಗಮನಕ್ಕೆ ಬಾರದೆ ಅನಧಿಕೃತ ವ್ಯಕ್ತಿಗಳು ಅನುಮತಿ ಪಡೆಯದೆ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಹೋಲ್ಡಿಂಗ್ಸ್ ಮತ್ತು ಫ್ಲೆಕ್ಸ್ ಗಳನ್ನು ಅಳವಡಿಸುವುದರ ಮೂಲಕ ಅದರಲ್ಲೂ ಪಾದ ಚಾರಿಮಾರ್ಗ ಮತ್ತು ಪಾರ್ಕ್ ನ ಸೌಂದರ್ಯಕ್ಕೆ ಧಕ್ಕೆ ತಂದಿರುತ್ತಾರೆ, ಈ ಬಗ್ಗೆ ದಾವಣಗೆರೆ ಜಿಲ್ಲಾಧಿಕಾರಿಗಳು ಪಾಲಿಕೆ ಆಯುಕ್ತರನ್ನು ಸಂಪರ್ಕಿಸಿ ಇವುಗಳೆಲ್ಲವನ್ನು 15 ದಿನಗಳ ಒಳಗಾಗಿ ತೆರವುಗೊಳಿಸುವುದು ಹಾಗೂ ಅನಧಿಕೃತವಾಗಿ ನಿರ್ಮಿಸಿರುವವರ ಮೇಲೆ ದೂರು ದಾಖಲಿಸಲು ಸೂಚನೆಯನ್ನು ನೀಡಿರುತ್ತಾರೆ.ದಾವಣಗೆರೆ ನಗರದಲ್ಲಿನ ಕರ್ನಲ್ ಎಂ ಬಿ ರವೀಂದ್ರನಾಥ್ ವೃತ ಶಾರದಾಂಬ ವೃತ್ತ ಲಕ್ಷ್ಮಿ ಫ್ಲೋರ್ ಮಿಲ್ ಶಾಬನೂರು ರಸ್ತೆ ಗುಂಡಿ ಸರ್ಕಲ್ ವಿದ್ಯಾರ್ಥಿ ಭವನ ವೃತ್ತ ಡಾ. ಬಿಆರ್ ಅಂಬೇಡ್ಕರ್ ಸರ್ಕಲ್ ಜಯದೇವ ಸರ್ಕಲ್ ಅರಸು ಸರ್ಕಲ್ ಅಶೋಕ ಥಿಯೇಟರ್ ನರಸರಾಜ ರಸ್ತೆ ಮಹಾನಗರ ಪಾಲಿಕೆ ಹತ್ತಿರ ಅರುಣ ಸರ್ಕಲ್ ಹಾಗೂ ಇತರೆಡೆಗಳಲ್ಲಿ ಯಾವುದೇ ಪರವಾನಿಗೆ ಮತ್ತು ಅನುಮತಿ ಪಡೆಯದೆ ಅನಧಿಕೃತವಾಗಿ ನಿರ್ಮಾಣ ಮಾಡಲಾಗಿತ್ತು, ಮಹಾನರ ಪಾಲಿಕೆಗೆ ಮತ್ತು ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವುದು ಬಹಳ ಗಂಭೀರ ವಿಷಯವಾಗಿರುತ್ತದೆ, ನಗರ ಸೌಂದರ್ಯ ಹಾಳಾಗಿರುತ್ತದೆ ಮತ್ತು ಹಸಿರು ನ್ಯಾಯಾಧೀಕರಣದ ಆದೇಶಗಳನ್ನು ಉಲ್ಲಂಘಿಸಲಾಗಿರುತ್ತದೆ, ಕೆಲವು ಕಡೆ ಜಾಹಿರಾತು ಫಲಕ ಅಳವಡಿಸಲು ಮರಗಳನ್ನು ಕಡಿಯುತ್ತಿರುವುದು ಸಹ ವರದಿಯಾಗಿರುತ್ತದೆ, ಇಂಥವರುಗಳ ಮೇಲೆ ಅರಣ್ಯ ಕಾಯ್ದೆಯಡಿ ಹಾಗೂ ಇನ್ನಿತರೆ ಕಾನೂನು ಕ್ರಮಗಳನ್ನು ಜರುಗಿಸಬೇಕು ಎಂದು ದಾವಣಗೆರೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದರು.
ಇದಲ್ಲದೇ ದಾವಣಗೆರೆ ಜಿಲ್ಲೆಯಾದ್ಯಂತ ಪಿಬಿ ರಸ್ತೆಗಳ ಎರಡೂ ಬದಿಗಳಲ್ಲಿ ಮತ್ತು ಸರ್ಕಾರಿ ಹಾಗೂ ಖಾಸಗಿ ಕಟ್ಟಡ, ರಸ್ತೆಯಲ್ಲಿ ಕೂಡ ಅಕ್ರಮವಾಗಿ ಜಾಹಿರಾತು ಫಲಕಗಳು ನಿರ್ಮಾಣವಾಗಿದ್ದು ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತೆರವುಗೊಳಿಸಬೇಕು ಅಥವಾ ಸಾರ್ವಜನಿಕ ಹಿತಾಸಕ್ತಿಗಳಿಗೆ ಧಕ್ಕೆ ಬರದಂತೆ ಆಯಾ ಇಲಾಖೆಯ ಕಾನೂನು ಚೌಕಟ್ಟು ಹಾಗೂ ನಿಯಮಾವಳಿಗಳನ್ನು ಪಾಲಿಸಬೇಕು ಹಾಗೂ ಆದಾಯ ಕ್ರೋಡೀಕರಿಸಬೇಕು ಎಂದು ಹಲವು ಸಂಘಟನೆಯ ಮುಖಂಡರು ಹಾಗೂ ಸಾರ್ವಜನಿಕ ಅಭಿಪ್ರಾಯವಾಗಿದೆ.