ಹೋಮ್ ಗಾರ್ಡ್ಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭ

ದಾವಣಗೆರೆ: ಇಂದು ದಾವಣಗೆರೆ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಹೋಮ್ ಗಾರ್ಡ್ಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀ ಶ್ರೀಧರ್ ಕೆ.ಮಲ್ಲಾಡ್, ಡಿ ವೈ ಎಸ್ ಪಿ ಶ್ರೀ ಬಿ.ಎಸ್.ಬಸವರಾಜ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಶ್ರೀ ರಾಜೀವ್ ಎಂ. ರವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ಎಸ್.ಬಸವರಾಜ್ ರವರು ಕ್ರೀಡೆಯು ಮಾನಸಿಕ ಹಾಗೂ ದೈಹಿಕ ಕ್ಷಮತೆಯನ್ನು ಹೆಚ್ಚುಸುತ್ತದೆ. ಎಲ್ಲರೂ ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ತಿಳಿಸಿದರು.
ಹೋಮ್ ಗಾರ್ಡ್ಸ್ ಸಮಾದೇಷ್ಟಕರಾದ ಶ್ರೀ ರಾಜೀವ್ ಎಂ ಕೆ.ಎಸ್.ಪಿ.ಎಸ್., ರವರು ಮಾತನಾಡಿ – ಜಿಲ್ಲಾ ಮಟ್ಟದಿಂದ ವಲಯ ಮಟ್ಟಕ್ಕೆ ಆಯ್ಕೆಯಾದ ಎಲ್ಲಾ ಕ್ರೀಡಾ ವಿಜೇತರಿಗೆ ಶುಭ ಕೋರಿದರು. ವಲಯ ಮಟ್ಟದಲ್ಲೂ ಕ್ರೀಡೆಯಲ್ಲಿ ಸ್ಪರ್ಧಿಸಿ ಉತ್ತಮವಾಗಿ ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸುವಂತೆ ತಿಳಿಸಿದರು.
ಪಿಎಸೈ ಶ್ರೀ ಸಂಜೀವ್ ಕುಮಾರ್ ಸೇರಿದಂತೆ ಹೋಮ್ ಗಾರ್ಡ್ಸ್ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕ್ರೀಡಾಕೂಟದಲ್ಲಿ ವಿಜೇತರಾದ ಸಿಬ್ಬಂದಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಿದರು.