ಹೋಂ ಐಸೊಲೇಷನ್ ಕಿಟ್ ವಿತರಿಸಿದ ಚಿತ್ರದುರ್ಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ

ಚಿತ್ರದುರ್ಗ:ಕೊರೋನಾ ಸೋಂಕಿತರು ಹಾಗೂ ಸೋಂಕಿನ ಲಕ್ಷಣವುಳ್ಳವರಿಗೆ ಉಪಯೋಗವಾಗಲಿ ಎನ್ನುವ ಉದ್ದೇಶದಿಂದ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹೋಂ ಐಸೊಲೇಷನ್ ಕಿಟ್‍ಗಳ ವಿತರಣೆಗೆ ಚಾಲನೆ ನೀಡಲಾಯಿತು.

ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಾರೆಹಳ್ಳಿ ಉಲ್ಲಾಸ್ ಹೋಂ ಐಸೊಲೇಷನ್ ಕಿಟ್‍ಗಳನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್‍ರವರ ಮೂಲಕ ವಿತರಿಸಿ ಮಾತನಾಡಿದರು.
ಕೊರೋನಾ ಎರಡನೆ ಹಂತದ ಅಲೆ ಬಿರುಸಿನಿಂದ ಹರಡುತ್ತಿರುವುದರಿಂದ ಹೋಂ ಐಸೊಲೇಷನ್‍ನಲ್ಲಿರುವವರು ಹಾಗೂ ಕೊರೋನಾ ಸೋಂಕಿನ ಲಕ್ಷಣವುಳ್ಳವರು ಈ ಕಿಟ್‍ನಲ್ಲಿರುವ ಟಾನಿಕ್, ಮಾತ್ರೆ ಹಾಗೂ ಮಾಸ್ಕ್‍ನ್ನು ಬಳಸುವ ಮೂಲಕ ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೋನಾದಿಂದ ಮುಕ್ತರಾಗಬೇಕಿದೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ ಸರ್ಕಾರ ಎರಡನೆ ಹಂತದ ಹದಿನಾಲ್ಕು ದಿನಗಳ ಲಾಕ್‍ಡೌನ್ ಘೋಷಿಸಿದ್ದು, ಹೋಂ ಕ್ವಾರೆಂಟೈನ್‍ನಲ್ಲಿರುವವರು ಈ ಕಿಟ್‍ನ ಬಳಕೆ ಮಾಡಿಕೊಂಡು ಕೊರೋನಾದಿಂದ ಹೊರಬರಬೇಕಲ್ಲದೆ. ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಕೊರೋನಾವನ್ನು ಹಿಮ್ಮೆಟ್ಟಿಸಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ರಾಜ್ಯ ಕಾರ್ಯದರ್ಶಿಗಳಾದ ಎಂ.ಡಿ.ಹಸನ್‍ತಾಹೀರ್, ಮಹಮದ್ ರಫಿ, ಜಿಲ್ಲಾ ಉಪಾಧ್ಯಕ್ಷರುಗಳಾದ ಶಶಾಂಕ್, ವಸೀಂಅಕ್ರಂ, ಪ್ರಧಾನ ಕಾರ್ಯದರ್ಶಿ ಸಂದೀಪ್, ನಗರ ಉಪಾಧ್ಯಕ್ಷ ಮಹಮದ್ ಸಾಧಿಕ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮಹಮದ್‍ಸಾಬ್ ಜಿ.ಆರ್.ಹಳ್ಳಿ, ಬಾಬ್‍ಜಾನ್ ಪಟೇಲ್ ಇವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!