ಹೊನ್ನಾಳಿ ಹುಲಿ ರೇಣುಕಾಚಾರ್ಯ ಗೆ “ಸಿಡಿ” ಭೀತಿನಾ.!? ವಾಹಿನಿಯಲ್ಲಿ ಸಿಡಿ ಪ್ರಸಾರ ಮಾಡದಂತೆ ತಡೆಯಾಜ್ಞೆ .?
ಬೆಂಗಳೂರು: ಬಿಜೆಪಿಯ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯಗೆ ಸಿಡಿ ಭೀತಿ ಉಂಟಾಗಿರಬಹುದೆ ಎಂಬ ಅನುಮಾನ ಕಾಡುತ್ತಿದೆ. ಇದರಿಂದ ಮುಂಜಾಗ್ರತಾ ವಾಗಿ ರೇಣುಕಾಚಾರ್ಯ ವಾಹಿನಿಗಳಲ್ಲಿ ಸಿಡಿ ಪ್ರಸಾರ ಮಾಡದಂತೆ ಮಧ್ಯಂತರ ತಡೆ ತರಲಾಗಿದೆ. ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ನಿಂದ ತಡೆಯಾಜ್ಞೆ ನೀಡಲಾಗಿದೆ. ಇಂದು ಬೆಂಗಳೂರಿನಲ್ಲಿ ವರದಿಗಾರರ ಜೊತೆ ಮಾತನಾಡಿದ ಅವರು ನನ್ನನ್ನು ಯಾರೂ ಸಹ ಬ್ಲ್ಯಾಕ್‌ಮೇಲ್ ಮಾಡಲು ಸಾಧ್ಯವಿಲ್ಲ. ಬ್ಲ್ಯಾಕ್‌ಮೇಲ್ ಖೆಡ್ಡಾಗೆ ನಾನು ಬೀಳುವವನಲ್ಲ ಎಂದು ಹೇಳಿದ್ದಾರೆ. ನನ್ನ ವಿರುದ್ಧ ಆರೋಪ ಮಾಡುವವರು ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳಲಿ ನಂತರ ಇನ್ನೊಬ್ಬರ ಬಗ್ಗೆ ಯೋಚಿಸುವ ಕೆಲಸ ಮಾಡಲಿ. ಜೀವನದಲ್ಲಿ ಅವರು ಏನು ಮಾಡಿದ್ದಾರೆಂದು ಒಮ್ಮೆ ಯೋಚಿಸಲಿ ಎಂದು ಹೊನ್ನಾಳಿಯ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ತಿಳಿಸಿದ್ದಾರೆ.
ಸಿಡಿಯಲ್ಲಿ ಯಾವುದೂ ಬೇಕಾದರೂ ಯಾವ ರಿತೀಯಾಗಿ ಬೇಕಾದರೂ ಎಡಿಟ್ ಮಾಡಬಹುದು. ಯಾರ ಮುಖ ಯಾವುದಕ್ಕಾದರೂ ಜೋಡಿಸಬಹುದು. ಯಾರದ್ದೋ ಕಾಲು, ಕೈ, ಯಾರದ್ದೋ ದೇಹವನ್ನ ಗ್ರಾಫಿಕ್ಸ್ ಮಾಡಿಸಬಹುದು. ರೇಣುಕಾಚಾರ್ಯ ವಿಡಿಯೋ ಇದೆ ಎಂದು ಯಾರೋ ಪುಣ್ಯಾತ್ಮ ಬ್ಲಾಕ್ ಮೇಲೆ ಮಾಡುತ್ತಿದ್ದಾರೆ. ಹೀಗಾಗಿ ನಾನು ತಡೆಯಾಜ್ಞೆ ತರುವುದಕ್ಕೆ ನೋಡುತ್ತಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ನನ್ನನ್ನು ಯಾರೂ ಬ್ಲ್ಯಾಕ್ ಮೇಲ್ ಮಾಡಲು ಸಾಧ್ಯವಿಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಒಟ್ಟಿನಲ್ಲಿ ಸಿಡಿ ಬೀತಿಯ ಗುಮ್ಮ ಇನ್ನೂ ಯಾರುನ್ನ ಕಾಡುತ್ತೆ ಅಂತಾ ಕಾದು ನೋಡಬೇಕು.