ಹೂಮಳೆ ಸುರಿಸಿ ಮಕ್ಕಳಿಗೆ ಸ್ವಾಗತ ಕೋರಿದ ಬಸಾಪುರ ಸರ್ಕಾರಿ ಶಾಲಾ ಶಿಕ್ಷಕರು, ಎಸ್ ಡಿ ಎಂ ಸಿ ಸದಸ್ಯರು
ದಾವಣಗೆರೆ: ಎರಡು ವರ್ಷಗಳಿಂದ ಶಾಲೆಗೆ ತೆರಳದೆ ಮನೆಯಲ್ಲೇ ಇದ್ದ ಒಂದರಿಂದ ಐದನೇ ತರಗತಿಯ ಮಕ್ಕಳು ಇಂದು ಹುಮ್ಮಸ್ಸಿನಿಂದ ಶಾಲೆಗೆ ಆಗಮಿಸಿದರು, ಶಾಲೆಯ ಶಿಕ್ಷಕರು ಸಿಬ್ಬಂದಿ ವರ್ಗ ಮತ್ತು ಎಸ್ಡಿಎಂಸಿ ಅಧ್ಯಕ್ಷ ಸಿದ್ದಾರ್ಥ್, ಉಪಾಧ್ಯಕ್ಷೆ ನಾಗವೇಣಿ ಹಾಗೂ ಸದಸ್ಯರು ಮಕ್ಕಳಿಗೆ ಹೂಮಳೆ ಸುರಿಸಿ, ಗುಲಾಬಿ ಹೂ ಚಾಕಲೇಟ್ ನೀಡುವ ಮೂಲಕ ಸಂತೋಷದಿಂದ ಶಾಲೆಗೆ ಸ್ವಾಗತಿಸಿದರು ಇಂತಹ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದು ದಾವಣಗೆರೆ ಮಹಾನಗರ ಪಾಲಿಕೆಯ 21 ನೇ ವಾರ್ಡಿನ ಬಸಾಪುರದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ.
ಸುಮಾರು 280 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವ ಶಾಲೆಯಲ್ಲಿ ಇಂದು ಹಬ್ಬದ ವಾತಾವರಣವಿತ್ತು, ಈ ಸಂದರ್ಭದಲ್ಲಿ ನೂತನವಾಗಿ ಆಂಗ್ಲಭಾಷಾ ಶಿಕ್ಷಕರಾಗಿ ಶಾಲೆಗೆ ಆಗಮಿಸಿದಂತಹ ಶಿಕ್ಷಕ ರವಿ ಬಿ.ಸಿ ಅವರಿಗೆ ಆತ್ಮೀಯವಾಗಿ ಸ್ವಾಗತಿಸಲಾಗಿತ್ತು, ಎರಡನೇ ತರಗತಿ ಶಿಕ್ಷಕಿ ನಿಂಗಮ್ಮ ಕೆ.ಎಂ. ತಮ್ಮ ತರಗತಿಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಪೆನ್ಸಿಲ್ ನೀಡುವ ಮೂಲಕ ವಿಶೇಷವಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಪ್ರಬಾರಿ ಮುಖ್ಯೋಪಾಧ್ಯಾಯರಾದ ಸಂತೋಷ್ ಕುಮಾರ್, ಸದಸ್ಯರುಗಳಾದ ತಿಪ್ಪೇಶ್, ಮಹಾಂತೇಶ್, ರಮೇಶ್, ಗುರುಸಿದ್ದಯ್ಯ, ಸಂತೋಷ್, ಸುನೀತ, ಸುಮಿತ್ರ,ಪುಷ್ಪ, ಗ್ರಾಮಸ್ಥರಾದ ಕೆ.ಎಲ್.ಹರೀಶ್, ಬಾತಿ ಜಯರಾಜ್, ಕರಿಬಸಪ್ಪ, ಗಣೇಶ್, ಹಾಲೇಶ್, ಶಾಲೆಯ ಶಿಕ್ಷಕರು ಹಾಗೂ ಶಾಲಾ ಅಕ್ಷರ ದಾಸೋಹ ಕಾರ್ಯಕರ್ತರು,
ಪೋಷಕರು ಹಾಗೂ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.