ರಂಗ್ವನಹಳ್ಳಿಗೆ ಹೊಸದುರ್ಗ ಶಾಸಕ ಭೇಟಿ, ಕೈ ಪರ ಭರ್ಜರಿ ಪ್ರಚಾರ, ಜಿಲ್ಲಾ ಪಂಚಾಯಿತಿ ಟಿಕೆಟ್ ಆಕಾಂಕ್ಷಿ ಎಂಎಂ ನಾಯಕ್ ನೇತೃತ್ವ

s

ಹೊಸದುರ್ಗ: ತಾಲೂಕಿನ ರಂಗ್ವನಹಳ್ಳಿಗೆ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಭೇಟಿ ನೀಡಿ ಕೈ ಅಭ್ಯರ್ಥಿ ಚಂದ್ರಪ್ಪ ಪರ ಅದ್ದೂರಿ ಮತ ಪ್ರಚಾರ ನಡೆಸಿದರು‌

ಈ ಸಂದರ್ಭದಲ್ಲಿ ಕೈ ನಾಯಕ, ಜಿಲ್ಲಾ ಪಂಚಾಯಿತಿ ಟಿಕೆಟ್ ಆಕಾಂಕ್ಷಿ ಎಂ.ಎಂ.ನಾಯಕ್ ಪ್ರಚಾರದ ನೇತೃತ್ವ ವಹಿಸಿದ್ದರು. ಶಾಸಕರು ಬಂದ ತಕ್ಷಣ ಅವರನ್ನು ಎಂಎಂ ನಾಯಕ್ ಹೂ ಗುಚ್ಚ ನೀಡಿ ಸ್ವಾಗತಿಸಿದರು‌. ಇದೇ ಸಂದರ್ಭದಲ್ಲಿ ಪಟಾಕಿ ಸದ್ದು ಶಾಸಕರನ್ನು ಅದ್ದೂರಿಯಾಗಿ ಸ್ವಾಗತಿಸಿತು. ಅಲ್ಲದೇ ಇದೇ ಸಂದರ್ಭದಲ್ಲಿ ಎಂಎಂ ನಾಯಕ್ ನಮ್ಮೂರಿನಲ್ಲಿ ಕೈ ಅಭ್ಯರ್ಥಿ ಗೆ ಹೆಚ್ಚು ಮತ ಬೀಳುವಂತೆ ಜನರ ಮನವೊಲಿಸುತ್ತೇವೆ ಎಂದರು.

ಹೊಸದುರ್ಗ ಶಾಸಕ ಗೋವಿಂದಪ್ಪ ಮಾತನಾಡಿ,
550 ಕಿ.ಮೀ ದೂರದ ಮುಧೋಳದಿಂದ ಗೋವಿಂದ ಕಾರಜೋಳ ಅವರನ್ನು ಬಿಜೆಪಿ ಕರೆತಂದಿದೆ. ಮುಧೋಳದ ಜನ ತಿರಸ್ಕರಿಸಿರುವ ಗೋವಿಂದ ಕಾರಜೋಳ ಅವರನ್ನು ಚಿತ್ರದುರ್ಗದ ಜನ ಪುರಸ್ಕರಿಸುತ್ತಾರಾ ಎಂದು ಪ್ರಶ್ನಿಸಿದರು.

ಬಿಜೆಪಿಯಿಂದ ಯಾವುದಾದರೂ ಕುಟುಂಬಕ್ಕೆ ಅನುಕೂಲ ಆಗಿದೆಯಾ.ಜನರ ತೆರಿಗೆ ಹಣವನ್ನು ಬಿಜೆಪಿ ಸರ್ಕಾರ ಅಂಬಾನಿ, ಅದಾನಿಗೆ ಕೊಡುವ ಕೆಲಸ ಮಾಡುತ್ತಿದೆ. ಆದರೆ, ಕಾಂಗ್ರೆಸ್ ಗ್ಯಾರಂಟಿ ಮೂಲಕ ಜನರಿಗೆ ಹಣ‌ಕೊಡುತ್ತಿದೆ.
ರಾಮ ಬಿಜೆಪಿಯ ಆಸ್ತಿ ಅಲ್ಲ. ನಮ್ಮ ರಾಮ. ನಮ್ಮೆಲ್ಲರ ಮನೆಗಳಲ್ಲಿ ರಾಮ ಇದ್ದಾನೆ. ನಮ್ಮೆಲ್ಲರ ಮನೆಯಲ್ಲಿ ರಾಮ,‌ಲಕ್ಷ್ಮಣ, ಸೀತೆಯರಿದ್ದಾರೆ. ಇನ್ನೂ ಎಷ್ಟು ದಿನ ರಾಮ, ಜಾತಿ, ಧರ್ಮ ಇಟ್ಟುಕೊಂಡು ರಾಜಕಾರಣ ಮಾಡುತ್ತೀರಿ ಎಂದು ಪ್ರಶ್ನಿಸಿದರು.

ಶಾಂತಿಯ ಬೀಜ ಬಿತ್ತಿ, ಸೌಹಾರ್ಧ ವಾತಾವರಣ ನಿರ್ಮಾಣ ಮಾಡುವ ಪಕ್ಷ ಕಾಂಗ್ರೆಸ್ ಆಗಿದೆ. ಭದ್ರಾ ಮೇಲ್ದಂಡೆ ಯೋಜನೆಗಾಗಿ ಬಿ.ಎನ್.ಚಂದ್ರಪ್ಪ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಅಗತ್ಯ ಹೊಸದುರ್ಗಕ್ಕೆ ಇದೆ. ಈ ಚುನಾವಣೆಯಲ್ಲಿ ಚಂದ್ರಪ್ಪ ಅವರನ್ನು ಗೆಲ್ಲಿಸೋಣ ಎಂದರು.

ಹೊಸದುರ್ಗ ತಾಲೂಕಿಗೆ ಭದ್ರಾದಿಂದ ಕುಡಿಯುವ ನೀರು ತರುವ 600 ಕೋಟಿ ರೂ. ಯೋಜನೆ ಪ್ರಾರಂಭವಾಗಿದ್ದು, ಮುಂದಿನ ಆರು ತಿಂಗಳಲ್ಲಿ‌ ಮನೆ ಮನೆಗೆ ಕುಡಿಯುವ ನೀರು ತಲುಪಲಿದೆ ಎಂದರು.

ಜಿಲ್ಲಾ ಪಂಚಾಯಿತಿ ಟಿಕೆಟ್ ಆಕಾಂಕ್ಷಿ ಎಂಎಂ ನಾಯಕ್ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮೂರಿಗೆ ಹೊಸದುರ್ಗ ಶಾಸಕರು ಬಂದು ಕೈ ಅಭ್ಯರ್ಥಿ ಪರ ಮತ ಪ್ರಚಾರ ಮಾಡಿದ್ದಾರೆ. ನಮ್ಮ ಭಾಗದಲ್ಲಿ ಶಾಸಕರು ಸಾಕಷ್ಟು ಕೆಲಸ ಮಾಡಿದ್ದು, ಕೈ ಅಭ್ಯರ್ಥಿ ಗೆದ್ದರೆ ನಮಗೆ ಇನ್ನಷ್ಟು ಅನುಕೂಲ ಮಾಡುತ್ತಾರೆ ಎಂಬ ನಂಬಿಕೆ ಇದೆ. ಅಲ್ಲದೇ ಕಾಂಗ್ರೆಸ್ ನಿಂದ ಬಡವರಿಗೆ ಸಾಕಷ್ಟು ಉಪಯೋಗವಾಗಿದೆ. ನಮ್ಮ ಶಾಸಕರ ಮುಖ ನೋಡಿ ಕೈ ಅಭ್ಯರ್ಥಿಗೆ ಮತ ಹಾಕುತ್ತೇವೆ ಎಂದು ಎಂಎಂ ನಾಯಕ್ ಹೇಳಿದರು.

ಆಕಾಶದಲ್ಲಿ ಚಿತ್ತಾರ, ಶಾಸಕರಿಗೆ ಜೆಸಿಬಿಯಲ್ಲಿ ಹೂವಿನ ಸುರಿಮಳೆ

ಶಾಸಕ ಚಂದ್ರಪ್ಪ ಹಳ್ಳಿಗೆ ಬರುತ್ತಾರೆ ಅಂತ ಗೊತ್ತಾದ ತಕ್ಷಣ ಊರಿನ ಕಾಂಗ್ರೆಸ್ ನಾಯಕ ಎಂಎಂ ನಾಯಕ್ ಊರಿನಲ್ಲಿ ಎಲ್ಲ ವ್ಯವಸ್ಥೆ ಮಾಡಿದ್ದರು. ಶಾಸಕರು ಬಂದ ಕೂಡಲೇ ವಿಷ್ಣುವರ್ಧನ ಅಭಿನಯದ ಸಿಂಹ, ಸಿಂಹ ಹಾಡನ್ನು ಹಾಕಲಾಯಿತು. ಅಲ್ಲದೇ ಆಕಾಶದತ್ತ ಸಿಡಿಮದ್ದುಗಳು ತಮ್ಮ ಚಿತ್ತಾರ ಮೂಡಿಸಿದವು. ಅಲ್ಲದೇ ಶಾಸಕರಿಗೆ ಜೆಸಿಬಿಯಿಂದ ಹೂವಿನ ಮಳೆ ಸುರಿಸಲಾಯಿತು. ಇದನ್ನು ಬೋಡಿದ ಶಾಸಕರು ತಮ್ಮ ಶಿಷ್ಯನಿಗೆ ಶಹಬ್ಬಾಸ್ ಗಿರಿ ನೀಡಿದರು. ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ಸೀನಾ ನಾಯ್ಕ್, ರುದ್ರಾ ನಾಯ್ಕ್, ಅಂಬರೀಷ್ ನಾಯ್ಕ್, ಕೃಷ್ಣನಾಯ್ಕ್, ವಿಜಯ್ ನಾಯ್ಕ್ ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!