ಅಸ್ಪತ್ರೆಯಲ್ಲಿ ಬೆಡ್ ವಿಚಾರದಲ್ಲಿ ತಪ್ಪು ಮಾಹಿತಿ, ಆಸ್ಪತ್ರೆ ವಿರುದ್ದ ಕೇಸ್ ದಾಖಲು, ಎಲ್ಲಿ ಹಾಗೂ ಯಾರು ಗೊತ್ತಾ 👇 ಇದನ್ನ ಓದಿ.

ಹೆಚ್ ಎಂ ಪಿ ಕುಮಾರ್

ಬೆಂಗಳೂರು: ಬೆಂಗಳೂರಿನ ಖಾಸಗಿ ಅಸ್ಪತ್ರೆ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ ಸರ್ಕಾರದ ನಿಯಮಗಳನ್ನ ಪಾಲಿಸದ ಹಿನ್ನೆಲೆಯಲ್ಲಿ ಆಸ್ಪತ್ರೆ ವಿರುದ್ದ ಕೇಸ್ ದಾಖಲಿಸಲಾಗಿದೆ.

ಬೆಂಗಳೂರಿನ ಕಸ್ತೂರಿ ನಗರದಲ್ಲಿರುವ ಖಾಸಗಿ ಅಸ್ಪತ್ರೆಯಲ್ಲಿ ಬೆಡ್ ವಿಚಾರದಲ್ಲಿ ತಪ್ಪು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಯಿತು.

ನಿನ್ನೆ ಅಸ್ಪತ್ರೆಗೆ ದಿಢೀರ್ ಬೇಟಿ ನೀಡಿದ ನೋಡಲ್ ಅಧಿಕಾರಿಗಳಾದ ಎಡಿಜಿಪಿ ಅಲೋಕ್ ಕುಮಾರ್ ಹಾಗೂ ಐಎಎಸ್‌ ಆಧಿಕಾರಿ ಕ್ಯಾಪ್ಟನ್ ಮಣಿವಣ್ಣನ್. ಪಿಪಿಇ ಕಿಟ್ ಧರಿಸಿ ಖುದ್ದು ಆಸ್ಪತ್ರೆಯಲ್ಲಿ ಪರಿಶೀಲನೆಯನ್ನ ಈ ಇಬ್ಬರು ಅಧಿಕಾರಿಗಳು ಮಾಡಿದ್ದರು. ಈ ವೇಳೆ ಅಸ್ಪತ್ರೆಯಲ್ಲಿ ಬೆಡ್ ವಿಚಾರದಲ್ಲಿ ತಪ್ಪು ಮಾಹಿತಿ ನೀಡಿರುವುದು ಬೆಳಕಿಗೆ ಬಂದಿತ್ತು.

ಇದೇ ವೇಳೆ ಸರ್ಕಾರಿ ರೋಗಿಗಳಿಗೆ ಅವಕಾಶ ನೀಡದ ಹೊರತು ಖಾಸಗಿ ರೋಗಿಗಳ ಆಡ್ಮಿಟ್ ಗೆ ಅವಕಾಶ ನಿರಾಕರಣೆ ಮಾಡಲಾಗಿತ್ತು.ಅಸ್ಪತ್ರೆಯಲ್ಲಿ ಶೇಕಡಾ 50 ರಷ್ಟು ಹಾಸಿಗೆಗಳು ಸರ್ಕಾರಿ ರೋಗಿಗಳಿಗೆ ಮೀಸಲಿಡಬೇಕು. ಅದರೆ ಅಸ್ಪತ್ರೆಯಲ್ಲಿ ಸರ್ಕಾರದ ಆದೇಶ ಉಲ್ಲಂಘನೆ ಮಾಡಿರುವುದು ಪತ್ತೆಯಾಯಿತು. ಅದ್ದರಿಂದ ಖಾಸಗಿ ರೋಗಿಗಳನ್ನ ದಾಖಲಿಸಲು ಅನುಮತಿಯನ್ನ ನೋಡಲ್ ಅಧಿಕಾರಿಗಳು ನಿರಾಕರಿಸಿದರು.

ಸರ್ಕಾರದ ನೋಡೆಲ್ ಅಧಿಕಾರಿ ಎಡಿಜಿಪಿ ಅಲೋಕ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿದಾಗ ಕಂಡ ನ್ಯುನ್ಯತೆಗಳೆನೆಂದರೆ, 51 ಬೆಡ್ ಇತ್ತು, 25 ಸರ್ಕಾರಕ್ಕೆ ಕೊಡಬೇಕಿತ್ತು. ಅದ್ರೆ ನಾಲ್ಕು ಬೆಡ್ ಮಾತ್ರ ಕೊಟ್ಟಿದ್ದಾರೆ.
ಹಾಗೂ 42 ಹೆಚ್ಚು ರೋಗಿಗಳು ಅಸ್ಪತ್ರೆಯಲ್ಲಿ ಇದ್ದಾರೆ,
ಅದ್ರೆ ಅಸ್ಪತ್ರೆಯವರು 36 ಅಂತ ನಮಗೆ ಮಾಹಿತಿ ಕೊಟ್ಟಿದ್ದಾರೆ. ಖುದ್ದು, ಐಸಿಯು, ವಾರ್ಡ್ ನಲ್ಲಿ ನಾವು ಪರಿಶೀಲನೆ ಮಾಡಿದಾಗ ಹೆಚ್ಚು ರೋಗಿಗಳು ಕಂಡು ಬಂದಿದ್ದಾರೆ. ಕ್ಯಾಂಟಿನ್ ನಲ್ಲಿ ಸಹ ಬೆಡ್ ಗಳು ಹಾಕಿದ್ದಾರೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ರು.

ಹೆಚ್ಚುವರಿ ಬೆಡ್ ಇದ್ದರೂ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ ಆರೋಪ.ಅಸ್ಪತ್ರೆ ವಿರುದ್ಧ ಸೆಕ್ಷನ್ 188,34 ಅಡಿಯಲ್ಲಿ ಕೇಸ್ ದಾಖಲಿಸಿ, ನೋಟಿಸ್ ನೀಡಲಾಗಿದೆ ಹಾಗೂ ರಾಮಮೂರ್ತಿನಗರ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ. ಎಡಿಜಿಪಿ ಅಲೋಕ್ ಕುಮಾರ್ ಮತ್ತು ಐಎಎಸ್ ಆಧಿಕಾರಿ ಕ್ಯಾಪ್ಟನ್ ಮಣಿವಣ್ಣನ್ ಬೆಂಗಳೂರು ಪೂರ್ವ ವಿಭಾಗದ ನೋಡಲ್ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.

 

Leave a Reply

Your email address will not be published. Required fields are marked *

error: Content is protected !!