ಗ್ರಾಹಕರ ಕೈ ಸೇರಿದ ಗೃಹ ಜ್ಯೋತಿ
ದಾವಣಗೆರೆ : ಕಾಂಗ್ರೆಸ್ ಸರ್ಕಾದ 5 ಆಶ್ವಾಸನೆಗಳಲ್ಲಿ ಒಂದಾದ ಪ್ರತಿ ಕುಟುಂಬಕ್ಕೆ 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆಯು ಗ್ರಾಹಕರಿಗೆ ಶೂನ್ಯ ಮೊತ್ತದ ಬಿಲ್ ನೀಡುವ ಕಾರ್ಯ ಪ್ರಾರಂಭವಾಗಿದೆ.ಜಿಲ್ಲೆಯಲ್ಲಿ ಆ. 1 ರಿಂದ 3 ರವರೆಗೆ 71,332 ಗ್ರಾಹಕರಿಗೆ ಶೂನ್ಯ ಬಿಲ್ ಬಂದಿದ್ದು 51,455 ಫಲಾನುಭವಿಗಳು ಇದರಲ್ಲಿ ಸೇರಿದ್ದಾರೆ.
ಜುಲೈ 27 ರವರೆಗೆ ನೋಂದಾವಣಿ ಮಾಡಿಸಿರುವ ಗ್ರಾಹಕರಿಗೆ ಇದರ ಲಾಭ ದೊರತ್ತಿದ್ದು ಜುಲೈ 27 ರ ನಂತರ ನೋಂದಣಿ ಮಾಡಿಸಿರುವ ಗ್ರಾಹಕರಿಗೆ ಇದರ ಲಾಭ ದೊರೆತಿಲ್ಲ. ಆಗಸ್ಟ್ ತಿಂಗಳಿನಲ್ಲಿ ನೋಂದಣಿ ಮಾಡಿಸಿದವರಿಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಶೂನ್ಯ ಬಿಲ್ ಬರಲಿದೆ.ಗೃಹಬಳಕೆಯ ಗ್ರಾಹಕರ ಜೊತೆಗೆ ‘ಭಾಗ್ಯ ಜ್ಯೋತಿ’ ,’ಕುಟೀರ ಜ್ಯೋತಿ’ , ಹಾಗೂ ‘ಅಮೃತ ಜ್ಯೋತಿ’ ಯೋಜನೆಯ ಫಲಾನುಭವಿಗಳು ಗ್ರಹ ಜ್ಯೋತಿ ಯೋಜನೆಯ ಲಾಭ ಪಡೆಯಲಿದ್ದಾರೆ.
ಭಾಗ್ಯ ಜ್ಯೋತಿ ಹಾಗೂ ಕುಟಿರ ಜ್ಯೋತಿ ಯೋಜನೆಯಡಿಯಲ್ಲಿ 40 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ಹಾಗೂ ಅಮೃತ ಜ್ಯೋತಿ’ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ 75 ಯೂನಿಟ್ ಉಚಿತ ಸೌಲಭ್ಯವಿದೆ. 75 ಯುನಿಟ್ ಗಳ ಜೊತೆಗೆ 7 ಯುನಿಟ್ ಸೇರಿ 83 ಯುನಿಟ್ ವಿದ್ಯುತ್ ಉಚಿತವಾಗಿ ದೊರೆಯಲಿದೆ ಎಂದು ಬೇಸ್ಕಾಂ ದಾವಣಗೆರೆಯ ಉಪ ಲೆಕ್ಕನಿಯಂತ್ರಣ ಅಧಿಕಾರಿ ಮಮತಾ ಎಂ. ಹಲಗೇರಿ ತಿಳಿಸಿದರು.
ಜಿಲ್ಲೆಯಲ್ಲಿ ಇನ್ನು ಕೆಲವರಿಗೆ ಬಾಕಿ ಹಣ ಬಿಲ್ ಅಲ್ಲಿ ಬರಲಿದ್ದು, ಅದನ್ನು ಪಾವತಿಸಲು ಸೆಪ್ಟೆಂಬರ್ ವರೆಗು ಅವಕಾಶವಿದೆ. ಅದನ್ನು ಪಾವತಿಸಲೇಬೇಕು ಎಂದು ಮನವಿ ಮಾಡಿದರು.ಜಿಲ್ಲೆಯಲ್ಲಿ 4,06,503 ಗ್ರಹಬಳಕೆಯ ಗ್ರಾಹಕರು ಇದ್ದು ಅವರು ಪ್ರತಿ ತಿಂಗಳು ಸರಾಸರಿ 18.81 ಮೆಗಾ ಯುನಿಟ್ ಗಳಷ್ಟು ವಿದ್ಯುತ್ ಬಳಕೆ ಮಾಡುತ್ತಿದ್ದಾರೆ. ಭಾಗ್ಯ ಜ್ಯೋತಿ ಕುಟಿರ ಜ್ಯೋತಿ’ ಯೋಜನೆಯಡಿ 1,34,431 ಫಲಾನುಭವಿಗಳು ಇದ್ದು ಅವರು ಪ್ರತಿ ತಿಂಗಳು ಸರಾಸರಿ 4.22 ಮೆಗಾ ಯುನಿಟ್ ಬಳಸುತ್ತಿದ್ದಾರೆ.
ಜಿಲ್ಲೆಯಲ್ಲಿ ವಾಣಿಜ್ಯ ಬಳಕೆಯ 53,312 ಗ್ರಾಹಕರು ಇದ್ದು ಅವರು ಪ್ರತಿ ತಿಂಗಳು ಸರಾಸರಿ 3.07 ಮೆಗಾ ಯುನಿಟ್ ವಿದ್ಯುತ್ ಬಳಸಿದರೆ ಸಣ್ಣ ಕೈಗಾರಿಕೆಯ 13,356 ಗ್ರಾಹಕರು ಇದ್ದು ಸರಾಸರಿ 3.07 ಮೆಗಾ ಯುನಿಟ್ ವಿದ್ಯುತ್ ಬಳಸುತ್ತಿದ್ದರೆ ಎಂದು ಬೆಸ್ಕಾಂ ಅಂಕಿ ಅಂಶಗಳು ಹೇಳುತ್ತವೆ.