ತೆಲಂಗಾಣದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗಮನ ಸೆಳೆದಿದ್ದ ಎಮ್ಮೆ ಕಾಯುತ್ತಿದ್ದ ಹುಡುಗಿ

how-many-votes-did-the-girl-who-waited-for-the-buffalo-in-telangana-get

ನವದೆಹಲಿ: ಪಂಚ ರಾಜ್ಯಗಳ ಚುನಾವಣೆಯ ಮತದಾನಕ್ಕೂ ಮುನ್ನವೇ ಸೃಷ್ಟಿಸಿದ ಎಮ್ಮೆ ಕಾಯುತ್ತಿದ್ದ ಹುಡುಗಿ ಕಾರ್ಣೆ ಶಿರೀಷಾ(Barrelakka or buffalo girl aka Karne Sirisha) ತೆಲಂಗಾಣದಲ್ಲಿ ಸಂಚಲನ ಸೃಷ್ಟಿಸಿದ್ದಳು. ಪಕ್ಷೇತರ ಅಭ್ಯರ್ಥಿಯಾಗಿ ಕೊಲ್ಲಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಈ ಯುವತಿ ಘಟಾನುಘಟಿಗಳ ಎದುರು ಮುನ್ನಡೆ ಗಳಿಸಿದ್ದಳು.

ಭಾನುವಾರ ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾದ ಮತ ಎಣಿಕೆಯ ಆರಂಭದಲ್ಲಿ ಕಾಂಗ್ರೆಸ್‍ ಅಭ್ಯರ್ಥಿ ಜುಪಲ್ಲಿ ಕೃಷ್ಣರಾವ್ ಮತ್ತು ಶಿರೀಷಾ ನಡುವೆ ನಿಕಟ ಪೈಪೋಟಿ ನಡೆದಿತ್ತು. ತೆಲಂಗಾಣದ ಘಟಾನುಘಟಿಗಳೆದರು ಎಮ್ಮೆ ಕಾಯುವ ಹುಡುಗಿ ಲೀಡಿಂಗ್‍ನಲ್ಲಿದ್ದಳು. ನಿರುದ್ಯೋಗಿಗಳ ಪರ ಹೋರಾಟ ನಡೆಸುವುದಾಗಿ ಹೇಳಿಕೊಂಡಿದ್ದ ಶಿರೀಷಾ ಕೊಲ್ಲಾಪುರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ದೇಶದ ಗಮನ ಸೆಳೆದಿದ್ದರು. ಎಮ್ಮೆ ಕಾಯುತ್ತಿದ್ದ ಈ ಯುವತಿಗೆ ಅನೇಕರು ಖ್ಯಾತ ವ್ಯಕ್ತಿಗಳ ಬೆಂಬಲ ದೊರೆತಿತ್ತು.

ನಾಮಪತ್ರ ವಾಪಸ್ ಪಡೆಯುವಂತೆ ಶಿರೀಷಾ ಸಾಕಷ್ಟು ಒತ್ತಡ ಸಹ ಬಂದಿತ್ತು. ಆದರೆ ಯಾವುದೇ ರೀತಿಯ ಒತ್ತಡಕ್ಕೆ ಮಣಿಯದ ಶಿರೀಷಾ ಧೈರ್ಯವಾಗಿ ಸ್ಪರ್ಧಿಸುವುದಾಗಿ ಹೇಳಿದ್ದಳು. ಇದೀಗ ಕೊಲ್ಲಾಪುರ ಕ್ಷೇತ್ರದ ಫಲಿತಾಂಶ ಹೊರಬಿದ್ದಿದೆ. ದೇಶದ ಗಮನ ಸೆಳೆದ ಈ ಯುವತಿ ಎಷ್ಟು ಮತಗಳನ್ನು ಪಡೆದಿದ್ದಾಳೆ ಅನ್ನೋ ಕುತೂಹಲ ಪ್ರತಿಯೊಬ್ಬರಲ್ಲಿ ಮೂಡಿರುತ್ತದೆ.

how-many-votes-did-the-girl-who-waited-for-the-buffalo-in-telangana-get

ಕಾರ್ಣೆ ಶಿರೀಷಾ ಅಂಚೆ ಮತಗಳಲ್ಲಿ ಲೀಡ್‍ನಲ್ಲಿದ್ದರು. ಆದರೆ EVM ಮತ ಎಣಿಕೆಯಲ್ಲಿ ಅವರು ಹಿಂದೆ ಬಿದ್ದರು. 20 ಸುತ್ತುಗಳ ಮತ ಎಣಿಕೆ ಬಳಿಕ ಕೊಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜುಪಲ್ಲಿ ಕೃಷ್ಣರಾವ್ 93,609 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇವರ ಪ್ರತಿಸ್ಪರ್ಧಿ ಭಾರತ್ ರಾಷ್ಟ್ರ ಸಮಿತಿ(BRS)ಯ ಬೀರಂ ಹರ್ಷವರ್ಧನ್ ರೆಡ್ಡಿ 63,678 ಮತಗಳನ್ನು ಗಳಿಸಿದರು. ಜುಪಲ್ಲಿ ಕೃಷ್ಣರಾವ್ ಮತ್ತು ಹರ್ಷವರ್ಧನ್ ರೆಡ್ಡಿ ನಡುವೆ 29,931 ಮತಗಳ ಗೆಲುವಿನ ಅಂತರವಿದೆ. ಇನ್ನೂ ಬಿಜೆಪಿ ಅಭ್ಯರ್ಥಿ 3ನೇ ಸ್ಥಾನಕ್ಕೆ ಏಳ್ಳೆನಿ ಸುಧಾಕರ ರಾವ್ ತೃಪ್ತಿಪಟ್ಟುಕೊಂಡಿದ್ದು, 20,389 ಮತಗಳನ್ನು ಗಳಿಸಿದ್ದಾರೆ. ಕಾರ್ಣೆ ಶಿರೀಷಾ 5,754 ಮತಗಳನ್ನು ಪಡೆದು 4ನೇ ಸ್ಥಾನ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾಳೆ.

Leave a Reply

Your email address will not be published. Required fields are marked *

error: Content is protected !!