IAF Rescue Video: ನದಿ ನೀರಿನಲ್ಲಿ ಸಿಲುಕಿದ 10 ಜನ.! ಹೆಲಿಕಾಪ್ಟರ್ ಮೂಲಕ ರಕ್ಷಿಸಿದ ಭಾರತೀಯ ವಾಯುಸೇನೆಯ ವಿಡಿಯೋ ನೋಡಿ

iaf rescue people's in andhra river

ಬೆಂಗಳೂರು: ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಚಿತ್ರಾವತಿ ನದಿಯಲ್ಲಿ ಸಿಲುಕಿದ್ದ ಹತ್ತು ಜನರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಿ ಸ್ಥಳಾಂತರಿಸಲಾಗಿದೆ.

ಚಿತ್ರಾವತಿ ನದಿಯು ಸತತ ಸುರಿಯುತ್ತಿರುವ ಮಳೆಯಿಂದಾಗಿ ವೇಗವಾಗಿ ಹರಿಯುತ್ತಿದ್ದು, ಏರುತ್ತಿರುವ ನೀರಿನ ಮಟ್ಟದಿಂದ ನದಿಯ ನೀರಿನಲ್ಲಿ ಸಿಲುಕಿಕೊಂಡಿದ್ದ ಹತ್ತು ಜನರನ್ನು IAF Mi-17 ಹೆಲಿಕಾಪ್ಟರ್ ಸ್ಥಳಾಂತರಿಸಿದೆ.

ವಿಂಚಿಂಗ್ ಕಾರ್ಯಾಚರಣೆ ಮೂಲಕ ರಕ್ಷಣಾ ಕಾರ್ಯ ನಡೆಸಲಾಯಿತು. ರಾಜ್ಯ ಸರ್ಕಾರದಿಂದ ಸಂಕಷ್ಟದ ಮನವಿಯನ್ನು ಸ್ವೀಕರಿಸಿದ ನಂತರ, ಹೆಲಿಕಾಪ್ಟರ್ ಬೆಂಗಳೂರಿನ ಯಲಹಂಕದ ವಾಯುಪಡೆ ನಿಲ್ದಾಣದಿಂದ ಅಲ್ಪಾವಧಿಗೆ ಟೇಕಾಫ್ ಆಗಿದ್ದು, ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ಬಗ್ಗೆ ಪರಿಶೀಲಿಸಿ ಜನರನ್ನು ರಕ್ಷಿಸಿದೆ.

Leave a Reply

Your email address will not be published. Required fields are marked *

error: Content is protected !!