ಸ್ವೀಟ್ಸ್ ತಯಾರಿಸೋದನ್ನ ನೋಡಿದ್ರೆ ಮೈ ಜುಮ್ಮ್ ಎನ್ನುತ್ತೆ. ಮಿಠಾಯಿ ಫ್ಯಾಕ್ಟರಿಯ ಕರ್ಮಕಾಂಡ.
ದಾವಣಗೆರೆ: ಶೇಂಗಾ ಚಿಕ್ಕಿ, ಕೆಂಪು ರಸಗುಲ್ಲಾ ಮೈಸೂರ್ ಪಾಕ್, ಡ್ರೈ ಜಾಮೂನ್ ,,,,,, ಅಬ್ಬಬ್ಬಾ ಈ ಸ್ವೀಟ್ ಗಳ ಹೆಸರು ಕೇಳುತ್ತಿದ್ದಂತೆ ಸಾಮಾನ್ಯವಾಗಿ ಎಲ್ಲರ ಬಾಯಲ್ಲೂ ನೀರು ಸುರಿಯುತ್ತೆ. ಆದ್ರೆ ದಾವಣಗೆರೆಯ ಸಣ್ಣ ಕಾರ್ಖಾನೆಯೊಂದರಲ್ಲಿ ತಯಾರಾಗೋ ಈ ಸ್ವೀಟ್ಸ್ ಗಳನ್ನ ನೋಡಿದರೆ ನಿಜಕ್ಕೂ ಮೈ ಜುಮ್ಮ್ ಎನ್ನುತ್ತೆ. ಹಾಗಾದ್ರೆ ಆ ಮಿಠಾಯಿ ಫ್ಯಾಕ್ಟರಿಯಲ್ಲಿ ಎಷ್ಟರ ಮಟ್ಟಿಗೆ ಸ್ವೀಟ್ಸ್ ತಯಾರಿಸುತ್ತಾರೆ ಅಂತೀರಾ ? ಹಾಗಿದ್ರೆ ಈ ಸ್ಟೋರಿ ನೋಡಿ,,,,
ಇದು ಸ್ಮಾರ್ಟ್ ಸಿಟಿ ದಾವಣಗೆರ ನಗರದಲ್ಲಿರೋ ಸ್ವೀಟ್ಸ್ ತಯಾರಿಕಾ ಘಟಕ. ವಿನಾಯಕ ನಗರದ ಮೂಲೆಯೊಂದ್ರಲ್ಲಿ ಕಳೆದ ಐದಾರು ವರ್ಷಗಳಿಂದ ಸಿಹಿ ತಿನಿಸುಗಳನ್ನ ತಯಾರಿಸುತ್ತಿದೆ. ಆದ್ರೆ ಇದಕ್ಕೆ ತಂದೆ ಇಲ,್ಲ ತಾಯಿ ಇಲ್ಲ, ಅಂದ್ರೆ ಫುಡ್ ಲೈಸೆನ್ಸ್ ಇಲ್ಲ, ಪಾಲಿಕೆ ಪರ್ಮಿಷನ್ ಇಲ್ಲ. ಮನಸೋ ಇಚ್ಚೇ ಸ್ವೀಟ್ಸ್ ತಯಾರು ಮಾಡಿ ಮಾರಾಟ ಮಾಡ್ತಿದ್ದಾರೆ.. ವಿಚಿತ್ರ ಅಂದರೆ ಹೀಗೆ ಸಿಹಿ ತಿನಿಸುಗಳನ್ನ ತಯಾರಿಸಬೇಕಾದ್ರೆ ಬರೋಬ್ಬರಿ 61 ನಿಯಮಗಳನ್ನ ಪಾಲಿಸಬೇಕು, ಆದ್ರೆ ಈ ಗಣೇಶ್ ಸ್ವೀಟ್ಸ್ ಮಾಲೀಕ ಶೇಖರಪ್ಪ ಇದ್ಯಾವ ರೂಲ್ಸ್ ಗಳನ್ನ ಫಾಲೋ ಮಾಡೋದಿರಲಿ ಅವುಗಳನ್ನ ಕೇಳಿದಂತೆಯೂ ಕಾಣ್ತಿಲ್ಲ. ಯಾಕಂದ್ರೆ ಅಷ್ಟೊಂದು ಗಲೀಜು ನಮ್ಮ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿದೆ. ಇನ್ನು ಈ ಸ್ವೀಟ್ಸ್ ಕರ್ಮಕಾಂಡವನ್ನ ಸತತ ಒಂದು ತಿಂಗಳ ಪ್ರಯತ್ನದ ನಂತರ ಹಾಲೇಶ್. ಏಕತಾ ವೇದಿಕೆ ಅಧ್ಯಕ್ಷ. ಸಂಘಟನೆಯ ಮುಖಂಡರು ಬಯಲಿಗೆಳದಿದ್ದಾರೆ.
ಇನ್ನು ಈ ಫ್ಯಾಕ್ಟರಿಯೊಳಗೆ ಅಧಿಕಾರಿಗಳೊಂದಿಗೆ ಕಾಲಿಡುತ್ತಿದ್ದಂತೆ ಫ್ಯಾಕ್ಟರಿ ಮಾಲೀಕ ಗರ ಬಡಿದವನಂತೆ ನಿಂತು ಬಿಟ್ಟ. ಆದ್ರೆ ಕಾರ್ಮಿರಿಗೇನು ಗೊತ್ತು ಇವರು ಇಲ್ಲಿಗೆ ಯಾಕೆ ಬಂದಿದ್ದಾರೆ ಅಂತಾ.. ಕಾರ್ಮಿಕರು ಅಧಿಕಾರಿಗಳ ಜೋತೆ ಬಾಯಿಗೆ ಬಂದಂತೆ ಮಾತಾಡೋಕೆ ಶುರು ಮಾಡಿದ್ದರು. ಪಾಪ ಅವರಿಗೂ ಮಾಲೀಕ ಶೇಖರಪ್ಪ ಟೋಪಿ ಹಾಕ್ತಿದ್ಧಾನೆ ಅನ್ನೋದು ಗೊತ್ತಾಗಿರಲಿಲ್ಲ. ಅಂದ್ರೆ ಇಎಸ್ ಐ, ಪಿಎಫ್. ಕಾರ್ಮಿಕರ ಕಾರ್ಡ ಇದ್ಯಾವುದೂ ಅವರಿಗೆ ಗೊತ್ತಿಲ್ಲ, ಇನ್ನು ಸ್ವಚ್ಚತೆಯಂತೂ ಆ ದೇವರೇ ಬಲ್ಲ. ಇಲ್ಲಿ ನೋಡಿ ಪಾನಕದ ಡ್ರಮ್ , ಕರಕಲಿಟ್ಟ ಬಾಣಲಿಗಳು ಅದರಲ್ಲೇ ಪಾನಕ ಹಾಕ್ತಿದ್ದಾನೆ ಈ ಆಸಾಮಿ ಅಷ್ಟೇ ಅಲ್ಲ ಅದರಲ್ಲಿ ಬಿದ್ದ ನೊಣ ಗೊದ್ದ ಕೈಯಲ್ಲೇ ಎತ್ತಿ ಹಾಕ್ತಾನೆ. ಮತ್ತೆ ಕೇಳೋಕೆ ಹೋದ್ರೆ ಇಲ್ಲಾ ಸ್ವಾಮಿ ನಾವ್ ಸ್ವಚ್ಛವಾಗೇ ಮಾಡ್ತೀವಿ ಅಂತಾರೆ ಆದ್ರೆ ಇವರ ಸ್ವಚ್ಚತೆಯನ್ನ ಕಣ್ಣಾರೆ ಕಂಡ ಫುಡ್ ಕಂಟ್ರೋಲ್ ಆಫೀಸರ್ ಖಡಕ್ಕಾಗಿ ಎಚ್ಚರಿಕೆ ನೀಡಿದ್ದಾರೆ ಸ್ಥಳದಲ್ಲೇ ನೋಟೀಸ್ ಜಾರಿ ಮಾಡಿದ ಕೊಟ್ರೇಶ್ ಫುಡ್ ಕಂಟ್ರೋಲ್ ಆಫೀಸರ್ ಕೇವಲ ಮೂರು ದಿನದಲ್ಲೇ ಎಲ್ಲಾ ಸರಿ ಮಾಡಿಕೊಳ್ಳಿ ಎಂದಿದ್ದಾರೆ.
ಒಟ್ಟಾರೆ ಸ್ವಚ್ಛತೆಯೇ ಇಲ್ಲದೆ ನಾನಾ ರೀತಿಯ ಸ್ವೀಟ್ಸ್ ಮತ್ತು ಖಾರದ ತಿನಿಸುಗಳನ್ನ ಈ ಗಣೇಶ್ ಸ್ವೀಟ್ ತಯಾರಿಸಿ ಮಾರುತ್ತಿದಂತೂ ಸತ್ಯ. ಈವರೆಗೂ ನಾವೂ ನೀವೆಲ್ಲಾ ಇವುಗಳನ್ನೇ ತಿಂದು ಬಾಯಿ ಚಪ್ಪರಿಸಿಕೊಂಡಿದ್ದೇವೆ ಆದ್ರೆ ಅದೇ ಬಾಯಿಗಳನ್ನ ಈಗ ಸ್ವಚ್ಛಗೊಳಿಸೋ ಪರಿಸ್ಥಿತಿ ಎದುರಾಗಿದೆ. ಅಂದ್ರೆ ಇನ್ನು ಮುಂದಾದ್ರೂ ಗಣೇಶ್ ಸ್ವೀಟ್ಸ್ ಮಾಲೀಕ ಎಚ್ಚೆತ್ತು ಕೊಳ್ತಾನಾ.. ಇಂತವರಿಗೆ ಅಧಿಕಾರಿಗಳು ಸರಿಯಾದ ಕಾನೂನು ಪಾಠ ಮಾಡ್ತಾರಾ.? ಸ್ಮಾರ್ಟ್ ಸಿಟಿಯ ಜನರಿಗೆ ಸ್ವಚ್ಛವಾದ ಸ್ವೀಟ್ಸ್ ಕೊಡ್ತಾರಾ ಅನ್ನೋದನ್ನ ಕಾದು ನೋಡಬೇಕು..