ಅಕ್ರಮ ಗಾಂಜಾ ಸಾಗಾಟ : ಆರೋಪಿ ಬಂಧನ

ದಾವಣಗೆರೆ : ಅಕ್ರಮವಾಗಿ ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದಾವಣಗೆರೆ ತಾಲೂಕು ವ್ಯಾಪ್ತಿಯ ಚಿನ್ನಸಮುದ್ರ ಗ್ರಾಮದ ಸೇವ್ಯಾನಾಯ್ಕ್ ಬಿನ್ ಮೀಠ್ಯಾನಾಯ್ಕ್ ಎಂಬಾತ ಚಿನ್ನಸಮುದ್ರ ಗ್ರಾಮದಿಂದ ಹೆಬ್ಬಾಳು ಗ್ರಾಮಕ್ಕೆ ಹೋಗುವ ಎನ್‌ಹೆಚ್-48 ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಸರ್ವಿಸ್ ರಸ್ತೆಯ ಬಳಿ ದ್ವಿಚಕ್ರ ವಾಹನದಲ್ಲಿ ಗಾಂಜಾವನ್ನು ಹೊಂದಿ ಸಾಗಾಣಿಕೆ ಮಾಡುವಾಗ ಅಬಕಾರಿ ದಾಳಿ ನಡೆಸಿ ಸೇವ್ಯಾನಾಯ್ಕ್ ಬಳಿಯಿದ್ದ ಗಾಂಜಾ ಮತ್ತು ಕಪ್ಪು ನೀಲಿ ಮಿಶ್ರಿತ ಹೀರೋ ಹೊಂಡ ಸ್ಪ್ಲೆಂಡರ್ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ.


ಕೆಎ,17,ಕೆ747 ಸಂಖ್ಯೆಯ ದ್ವಿಚಕ್ರವಾಹನದಲ್ಲಿ ಅಕ್ರಮವಾಗಿ ಕಡ್ಡಿ, ಹೂ, ಬೀಜ ಮಿಶ್ರಿತ 794 ಗ್ರಾಂ ಒಣ ಗಾಂಜಾವನ್ನು ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಹೊಸಪೇಟೆ ವಿಭಾಗದ ಅಬಕಾರಿ ಜಂಟಿ ಆಯುಕ್ತರು ಹಾಗೂ ದಾವಣಗೆರೆ ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಬಿ. ಶಿವಪ್ರಸಾದ್ ಇವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕ ಎಸ್.ಆರ್ ಮುರುಡೇಶ್, ಅಬಕಾರಿ ನಿರೀಕ್ಷಕರಾದ ಸವಿತಾ ಹೆಚ್., ಅಬಕಾರಿ ಉಪ ನಿರೀಕ್ಷಕ ಶ್ರೀಕಾಂತ್ ಧರಣಿ ಹಾಗೂ ಸಿಬ್ಬಂದಿಗಳಾದ ಮೂರ್ತಿ, ದಿಳ್ಳೆಪ್ಪ ರ‍್ಯಾವಳ್ಳರ, ಸುರೇಶ್ ಉತ್ತನಾಳ, ಮರುಳಸಿದ್ದಪ್ಪ, ಮಹೇಶ್ ಕುಮಾರ್ ಇವರ ತಂಡ ಖಚಿತ ಮಾಹಿತಿ ಮೇರೆಗೆ ಸೇವ್ಯಾನಾಯ್ಕ್ ಅವರು ಮಾಡುತ್ತಿದ್ದ ಅಕ್ರಮ ಗಾಂಜಾ ಸಾಗಾಟವನ್ನು ತಡೆಹಿಡಿದಿದ್ದಾರೆ. ಸದರಿ ಆರೋಪಿಯನ್ನು ದಸ್ತಗಿರಿ ಮಾಡಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿತ ಸೇವ್ಯಾನಾಯ್ಕ್ ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸದರಿ ಪ್ರಕರಣದಲ್ಲಿ ವಶಪಡಿಸಿಕೊಂಡ ಕಡ್ಡಿ, ಹೂ, ಬೀಜ ಮಿಶ್ರಿತ 794 ಗ್ರಾಂ ಗಾಂಜಾದ ಅಂದಾಜು ಮೌಲ್ಯ ರೂ. 3 ಸಾವಿರ ಹಾಗೂ ವಶಪಡಿಸಿಕೊಂಡ ವಾಹನದ ಅಂದಾಜು ಮೌಲ್ಯ ರೂ. 20 ಸಾವಿರ ಒಟ್ಟು 23 ಸಾವಿರಗಳಾಗಿರುತ್ತದೆ.

 

Leave a Reply

Your email address will not be published. Required fields are marked *

error: Content is protected !!