ಅಕ್ರಮ ಮರಳು ಸಂಗ್ರಹಿಸಿದ್ದ ಅಡ್ಡೆ ಮೇಲೆ ದಾಳಿ, 6 ಲೋಡ್ ಮರಳು ಜಪ್ತಿ
ಗರುಡವಾಯ್ಸ್ ಇಂಪ್ಯಾಕ್ಟ್.
ದಾವಣಗೆರೆ: ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡುತ್ತಿರುವ ಬಗ್ಗೆ ಗರುಡವಾಯ್ಸ್ ವಾಹಿನಿ ಇತ್ತೀಚೆಗೆ ವರದಿ ಮಾಡಿತ್ತು. ಇದರ ಜಾಡು ಬೆನ್ನತ್ತಿದ ಗಣಿ ಇಲಾಖೆ ಅಧಿಕಾರಿಗಳಿಂದ ಅಕ್ರಮವಾಗಿ ಸಂಗ್ರಹ ಮಾಡಿದ್ದ ಸುಮಾರು 6 ಟಿಪ್ಪರ್ ಲಾರಿ ಲೋಡ್ ಮರಳನ್ನು ಜಪ್ತಿ ಮಾಡಿರುವ ಘಟನೆ ಸೋಮವಾರ ಜರುಗಿದೆ.
ದಾವಣಗೆರೆ ನಗರದ ಹೊಸ ಕುಂದುವಾಡ ಗ್ರಾಮದ ಬಳಿಯ ನೂತನ ಬಡಾವಣೆಯ ಪಾರ್ಕ್ ಜಾಗದಲ್ಲಿ 6 ಕ್ಕೂ ಹೆಚ್ಚು ಟ್ರಿಪ್ ಮರಳನ್ನು ಅಕ್ರಮವಾಗಿ ಸಂಗ್ರಹಿಸಲಾಗಿತ್ತು. ಗರುಡವಾಯ್ಸ್ ಸಂಪಾದಕರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಅಧಿಕಾರಿಗಳು ಈ ಮರಳನ್ನು ಅಳತೆ ಮಾಡಿದಾಗ 18 ಮೆಟ್ರಿಕ್ ಟನ್ ಮರಳು ಪತ್ತೆಯಾಗಿದೆ ಎಂದು ಗೊತ್ತಾಗಿದೆ.
ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಕೊದಂಡರಾಮಯ್ಯ ಹಾಗೂ ಭೂ ವಿಜ್ಞಾನಿ ಸ್ಥಳಕ್ಕೆ ಭೇಟಿ ನೀಡಿ ಜಪ್ತಿ ಮಾಡಿದ ಮರಳನ್ನು ದಾವಣಗೆರೆಯ ನಿರ್ಮಿತಿ ಕೇಂದ್ರಕ್ಕೆ ಸರ್ಕಾರದ ರಾಯಲ್ಟಿ ಕಟ್ಟಿಸಿಕೊಂಡು ಹಸ್ತಾಂತರ ಮಾಡಲಾಯಿತು. ಅಧಿಕಾರಿಗಳು ಬರುವ ಮುನ್ನ ಸ್ಥಳದಲ್ಲಿ ಜೆಸಿಬಿ ಹಾಗೂ ಟಿಪ್ಪರ್ ಪರಾರಿಯಾಯಿತು. ಮರಳು ಮುಬಾರಕ್ ಎಂಬುವವರಿಗೆ ಸೇರಿದ್ದು ಎಂದು ಗೊತ್ತಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಕೊವಿಡ್ ಲಾಕ್ ಡೌನ್ ಮುನ್ನಾ ಹಾಗೂ ನಿಯಮ ಜಾರಿ ಇದ್ದರೂ ರಾತ್ರಿ ವೇಳೆಯಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಇನ್ನಾದರೂ ಸಂಭಂದಿಸಿದ ಅಧಿಕಾರಿಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಇಂತಹ ಅಕ್ರಮಕ್ಕೆ ಬ್ರೇಕ್ ಹಾಕಬೇಕಾಗಿದೆ. ಯಾರೋ ಮಾಡುವ ಅಕ್ರಮಕ್ಕೆ ಇನ್ಯಾರೋ ಬಲಿ ಎಂಬಂತಾಗಿದೆ.
ಹರಿಹರ ಹಾಗೂ ಹೊನ್ನಾಳಿ ತಾಲ್ಲೂಕಿನಲ್ಲಿ ಕೊವಿಡ್ ಲಾಕ್ ಡೌನ್ ಉಲ್ಲಂಘನೆ ಮಾಡಿ ಅಕ್ರಮ ಮರಳುಗಾರಿಕೆ ನಡೆಸುವವರನ್ನ ಬಗ್ಗು ಬಡೆಯಬೇಕಾಗಿದೆ.
ಅಕ್ರಮ ಮಾಡಲು ಕುಮ್ಮಕ್ಕು ನೀಡಿದವರ ಬಗ್ಗೆ ನಾಗರಿಕ ಶಿಸ್ತು ರಕ್ಷಣೆ ಮಾಡುವವರು, ಕಾನೂನಿನ ಬಿಸಿ ಮುಟ್ಟಿಸದೇ ಹೋದರೆ ಮುಂದೆ ದೊಡ್ಡ ಅನಾಹುತ ನಡೆಯದೇ ಹೋದರು ಅಚ್ಚರಿ ಇಲ್ಲ ಅಂತಾರೆ ನದಿ ಪಾತ್ರದ ಜನರು.