Illigal Sand – Matka – Activities: ರಾಣೆಬೆನ್ನೂರು ತಾಲ್ಲೂಕಿನಾದ್ಯಂತ ಅಕ್ರಮ ಚಟುವಟಿಕೆಗಳ ದರ್ಬಾರು.! ಅಧಿಕಾರಿಗಳೇ ಅಕ್ರಮ ಚಟುವಟಿಕೆಗೆ ರಕ್ಷಕರು.?
ಹಾವೇರಿ (ರಾಣೆಬೆನ್ನೂರು): ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತವರು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತನ್ನದೇ ಆದ ಇತಿಹಾಸವನ್ನು ಹೊಂದಿದಂತಹ ನಗರಗಳಲ್ಲಿ ಒಂದು. ಈ ತಾಲ್ಲೂಕಿನಲ್ಲಿ ಉತ್ತರ ಭಾರತದ ವಾರಣಾಸಿಯಲ್ಲಿ ಹರಿಯುವ ಗಂಗಾನದಿಯಂತೆ ದಕ್ಷಿಣಭಾರತದಲ್ಲಿ ತುಂಗಭದ್ರೆಯರು ಹರಿಯುತ್ತಾರೆ.
ಇಂತಹ ಇತಿಹಾಸ ಪ್ರಸಿದ್ಧಿಯನ್ನು ಹೊಂದಿದಂಥಹ ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳು ರಾಜಾರೋಷವಾಗಿ ಯಾರ ಭಯವಿಲ್ಲದೆ ನಡೆಯುತ್ತಿರುವುದು ಮಾತ್ರ ಅತ್ಯಂತ ವಿಷಾದನೀಯವಾದ ಸಂಗತಿಯಾಗಿದೆ.
ರಾಜ್ಯವನ್ನಾಳುವ ಮುಖ್ಯಮಂತ್ರಿ ಜಿಲ್ಲೆಯಲ್ಲಿಯೇ ಅನೇಕ ಅಕ್ರಮ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿದ್ದರೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿಕೊಂಡು ಗಡತ್ತಾಗಿ ನಿದ್ರಾ ದೇವತೆಗೆ ಶರಣಾಗಿದ್ದಾರೆ.
ಅಕ್ರಮ ಮರಳು ಮಾಫಿಯಾ ರಾತ್ರಿ 12 ರ ನಂತರ ಪೋಲಿಸ್ ಠಾಣಾ ಮುಂಭಾಗದಲ್ಲಿ ಮರಳು ತುಂಬಿದ ಲಾರಿಗಳು ಸಂಚರಿಸುತ್ತವೆ ಇದ್ದರೂ ಯಾರ ಭಯವಿಲ್ಲದೆ ರಾಜಾರೋಷವಾಗಿ ಅಕ್ರಮ ಸಾಗಾಟ ನಡೆಯುತ್ತಲೇ ಇದೆ. ಇದಕ್ಕೆ ಬ್ರೇಕ್ ಹಾಕಬೇಕಾದ ಅಧಿಕಾರಿಗಳು ಅಕ್ರಮ ಮರಳು ಮಾಫಿಯಾ ದಂಧೆ ಕೋರರ ಜತೆ ರಾತ್ರಿಯ ಸಮಯ ಕಾಲ ಕಳೆಯುತ್ತಾರೆ. ಇನ್ನೂ 1 ಹೆಜ್ಜೆ ಎನ್ನುವಂತೆ ಅಕ್ರಮ ದಂಧೆಕೋರರನ್ನು ತಮ್ಮ ಕಾರಿನಲ್ಲಿ ಸಿಬ್ಬಂದಿಗಳೇ ಚಾಲನೆ ಮಾಡಿಕೊಂಡು ಅಕ್ರಮ ದಂಧೆಕೋರರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿ ಬರುವ ಮಟ್ಟಿಗೆ ಬೆಳೆದಿದ್ದಾರೆ ಅಲ್ಲದೆ ಸಂಬಂಧಿಸಿದ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಈ ಅಕ್ರಮ ಮರಳು ಮಾಫಿಯಾದೊಂದಿಗೆ ತಮ್ಮ ಪಾಲನ್ನು ಹೊಂದಿದ್ದಾರೆ ಎಂಬ ಮಾಹಿತಿಯೂ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಇಲ್ಲಿ ನಡೆಯುವ ಅಕ್ರಮಗಳು ಒಂದೇ ಎರಡೇ ಅಕ್ರಮ ಮರಳುಗಾರಿಕೆ, ಒಸಿ ಮಟ್ಕಾ, ಅಕ್ರಮ ಮದ್ಯ ಮಾರಾಟ, ಅಕ್ರಮ ಪಡಿತರ ಅಕ್ಕಿ ಸಾಗಾಣಿಕೆ, ಇನ್ನೂ ಅನೇಕ ಎನ್ನುವ ಕೆಂಬೂತ ತಾಲ್ಲೂಕಿನ ಪ್ರತಿ ಗ್ರಾಮ ಗ್ರಾಮಗಳಲ್ಲಿ ರಾಜಾರೋಷವಾಗಿ ಅಧಿಕಾರಿಗಳ ಸಹಕಾರದಿಂದ ನಡೆಯುತ್ತಲೇ ಇದೆ.
ಈ ಎಲ್ಲಾ ವಿಚಾರ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವ, ಶಿಕ್ಷಿಸುವ, ಸಂಬಂದಿಸಿದ ಇಲಾಖೆಗಳ ಅಧಿಕಾರಿ ವರ್ಗದವರಿಗೆ ಗೊತ್ತಿದ್ದರೂ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪಗಳು ಕೆಳಿಬರುತ್ತಿವೆ. ತಾಲ್ಲೂಕಿನ ಪ್ರತಿ ಅಕ್ರಮಗಳು ಸಂಬಂಧಿಸಿದ ಪೊಲೀಸ್ ಇಲಾಖೆಗೆ ತಿಳಿದಿರುತ್ತದೆ ಆದರೆ ಅವರು ಮಾತ್ರ ಅವುಗಳನ್ನು ತಡೆಯುವ ಗೋಜಿಗೆ ಹೋಗುವ ಬದಲು ಯಾಕೆ ರಕ್ಷಣೆಗೆ ನಿಂತಿದ್ದಾರೆ ಎಂಬುದು ಮಾತ್ರ ಹಲವರ ಪ್ರಶ್ನೆ.?
ಇನ್ನೂ ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಭಾರಿ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ .ಈ ಅಕ್ಕಿ ಮಾರಾಟ ಮಾಡುವ ಖದೀಮರು ಆಹಾರ ಇಲಾಖೆ, ಕಂದಾಯ ಇಲಾಖೆ, ಪೋಲಿಸ್ ಇಲಾಖೆ, ಸಂಚಾರಿ ಇಲಾಖೆ ಅಧಿಕಾರಿಗಳೊಂದಿಗೆ ಕತ್ತಲಮರೆಯಲ್ಲಿ ಸ್ನೇಹ ಬೆಳೆಸಿಕೊಂಡು ಅಕ್ರಮ ನಡೆಸುತ್ತಿದ್ದಾರೆ ಎಂಬ ಮಾಹಿತಿ ಗಲ್ಲಿ ಗಲ್ಲಿಯಲ್ಲಿರುವ ಮಾರ್ಕೇಟನಲ್ಲಿ ಪ್ರತಿಯೊಂದು ಗೋಡೆಗಳಲ್ಲಿ ಭಾರಿ ಸದ್ದಿನಲ್ಲಿ ಕೇಳುತ್ತಿದೆ.
ಹೀಗೆ ಅನೇಕ ಅಕ್ರಮ ಚಟುವಟಿಕೆಗಳು ತಾಲ್ಲೂಕಿನಾದ್ಯಂತ ಯಾರ ಭಯವಿಲ್ಲದೆ ರಾಜಾರೋಷವಾಗಿ ಹಗಲು- ರಾತ್ರಿ ಎನ್ನದೆ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಇವೆಲ್ಲ ಅಕ್ರಮ ಚಟುವಟಿಕೆಗಳಿಗೆ ರಕ್ಷಕರಾಗಿ ಆರಕ್ಷಕರು ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ತಾಲ್ಲೂಕಿನ ಅಕ್ರಮ ಮಾಫಿಯ ದಂಧೆಕೋರರೊಂದಿಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಒಂದೇ ಟೇಬಲ್ಲಿನಲ್ಲಿ ಟೀ ಕಾಫಿ ಯನ್ನು ಹೀರುತ್ತಾ ಕಷ್ಟ ಸುಖವನ್ನು ಹಂಚಿಕೊಳ್ಳುತ್ತಾರೆ ಎಂದರೆ ಅಲ್ಲಿಗೆ ನೀವೇ ಅರ್ಥಮಾಡಿಕೊಳ್ಳಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಖದೀಮ ದಂಧೆಕೋರರೊಂದಿಗೆ ಯಾವ ರೀತಿಯ ಸೌಖ್ಯ ಹೊಂದಿದ್ದಾರೆ ಎಂಬುದನ್ನು.
ತಾಲ್ಲೂಕಿನ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬೀಳಬೇಕೆಂದರೆ ತಾಲ್ಲೂಕಿನ ಪ್ರಮುಖ ಇಲಾಖೆಯ ಅಧಿಕಾರಿಗಳನ್ನು ತಾಲ್ಲೂಕಿನಿಂದ ಕೂಡಲೇ ವರ್ಗಾವಣೆಗೊಳಿಸಿ, ಸಮರ್ಥ,ಸೂಕ್ತ ಅಧಿಕಾರಿಗಳನ್ನು ನೇಮಕ ಮಾಡಿಕೊಂಡಾಗ ಮಾತ್ರ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬೀಳಲು ಸಾಧ್ಯವಾಗುತ್ತದೆ.
ಇನ್ನು ಮುಂದಾದರೂ ಸಂಬಂಧಿಸಿದ ಮೇಲಾಧಿಕಾರಿಗಳು ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಲ್ಲಿ ಮುಂದಾಗುತ್ತಾರೆಯೇ ಕಾದು ನೋಡಬೇಕಾಗಿದೆ.