ಅಕ್ರಮ ಚಟುವಟಿಕೆಗೆ ” ಭಾಯ್, ಐ ಎಸ್ ” ಕೋಡ್ ವರ್ಡ್..? ಮರಳು ಮಾಫಿಯಾ ದುರುಳರನ್ನ ಸದೆಬಡಿಯೋ ಸದಾಚಾರ ವ್ಯಕ್ತಿ ಯಾರು
: COVID LOCKDOWN EXCLUSIVE :
ದಾವಣಗೆರೆ: ಕೊವಿಡ್ ಎರಡನೇ ಅಲೆ ಭಾರತ ದೇಶದಲ್ಲಿ ಬೆಚ್ಚಿಬಿಳಿಸಿದೆ, ಕೊರೊನಾ ಸೊಂಕು ತಡೆಗಟ್ಟಲು ಕರ್ನಾಟಕ ಸರ್ಕಾರದಿಂದ ಕಠಿಣ ಲಾಕ್ ಡೌನ್ ಜಾರಿಗೆ ತರಲಾಗಿದೆ. ಆದ್ರೆ ಅಕ್ರಮಗಳಿಗೆ ಲಾಕ್ ಡೌನ್ ಅಡ್ಡಿಯಾಗಿಲ್ಲ ಸತ್ಯ.ಎಂತದೇ ಪರಿಸ್ಥಿತಿ ಬರಲಿ ಲಾಭ ಮಾಡಿಕೊಳ್ಳಲು ದುರುಳರಿಗೆ ಇದೊಂದು ಸುಸಮಯವಾಗಿದೆ.
ಹೌದು, ಹರಿಹರ ತಾಲ್ಲೂಕಿನಲ್ಲಿ ದೊರೆಯುವ ಮರಳಿಗೆ ಭಾರಿ ಬೇಡಿಕೆ ಇರುವುದರಿಂದ ಪ್ರತಿ ದಿನ ರಾತ್ರಿ ವೇಳೆ ಅಕ್ರಮವಾಗಿ ಮರಳು ಸಾಗಾಟವಾಗುತ್ತಿದೆ. ಕೆಲ ತಿಂಗಳ ಹಿಂದೆ ತುಂಗಭದ್ರ ನದಿಯ ಮಧ್ಯ ಭಾಗದಲ್ಲಿ ಮೋಟಾರ್ ಭೋಟ್, ತೆಪ್ಪಗಳಲ್ಲಿ ಮರಳನ್ನು ತೆಗೆಯಲಾಗುತ್ತಿತ್ತು. ಕೆಲವರ ವಿರೋಧದಿಂದ ಅದನ್ನ ಸ್ವಲ್ಪ ಮಟ್ಟಿಗೆ ನಿಲ್ಲಿಸಿದಂತೆ ಮಾಡಲಾಯಿತು. ಆದರೆ ಇದೀಗ ನದಿಯಲ್ಲಿ ಬೃಹತ್ ಯಂತ್ರಗಳಿಂದ ಮರಳನ್ನ ಬಗೆದು ಟಿಪ್ಪರ್ ಹಾಗೂ ಟ್ರಾಕ್ಟರ್ ಗಳಿಗೆ ತುಂಬಿಸಲಾಗುತ್ತಿದೆ.
ಪರಿಸರ ದಿನಾಚರಣೆಗಳು ಇಲ್ಲಿ ಕೇವಲ ನೆಪ ಮಾತ್ರಕ್ಕೆ ಎಂಬಂತೆ ರಾತ್ರಿಯಾದ ತಕ್ಷಣ ಜೆಸಿಬಿ ಹಾಗೂ ಇಟಾಚಿ ಸಹಾಯದಿಂದ ತುಂಗಭದ್ರೆಯ ಗರ್ಭದಲ್ಲಿ ಅಕ್ರಮ ಮರಳುಗಾರಿಕೆ ನಡೆಸಲಾಗುತ್ತಿದ್ದರು ಸರ್ಕಾರಿ ಸೈನ್ಯದಿಂದ ಬರಖಾಸ್ತು ಮಾಡೋಕೆ ಆಗ್ತಿಲ್ಲಾ.
ತುಂಗಭದ್ರಾ ನದಿಯ ಎರಡು ದಂಡೆಯ ಜಿಲ್ಲೆಗಳು ಅಕ್ರಮದ ಹಾಟ್ ಸ್ಫಾಟ್:
ಹೌದು ತುಂಗಭದ್ರ ನದಿ, ದಾವಣಗೆರೆ ಜಿಲ್ಲೆ ಹಾಗೂ ಹಾವೇರಿ ಜಿಲ್ಲೆಯ ಮಧ್ಯೆ ಹರಿದು ಹೋಗುತ್ತದೆ. ಎರಡು ಜಿಲ್ಲೆಯ ನದಿ ತಡದಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿದ್ದರೂ ಸಂಭಂಧಿಸಿದವರು ಮಾತ್ರ ಕಿವಿ,ಮೂಗು,ಕಣ್ಣು ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರಂತೆ.
ನದಿಯಲ್ಲಿ ಅಧಿಕೃತವಾಗಿ ಮರಳು ಗಣಿಗಾರಿಕೆ ಮಾಡುತ್ತಿದ್ದ ಗುತ್ತಿಗೆದಾರರು ಕೊರೊನಾ ಹಿನ್ನೆಲೆ ಮರಳುಗಾರಿಕೆಯನ್ನ ನಿಲ್ಲಿಸಿದ್ದರು.ಆದ್ರೆ ಅನಧಿಕೃತವಾಗಿ ಮರಳುಗಾರಿಕೆ ಮಾಡುವವರಿಗೆ ಇದು ಹಾಟ್ ಸ್ಫಾಟ್ ಆಗಿರುವುದಂತು ಸತ್ಯ. ನದಿಯ ಓಡಲನ್ನ ಬಗಿಯುತ್ತಿರುವುದರಿಂದ ಜಲಚರ ಪ್ರಾಣಿಗಳ ಜೀವಕ್ಕೆ ಸಂಚಕಾರ ಬರುತ್ತಿದೆ, ಅಲ್ಲದೆ ಪರಿಸರದ ಮೇಲೂ ಹೆಚ್ಚಿನ ಪರಿಣಾಮ ಭೀರುತ್ತಿದ್ದರೂ ಯಾರೂ ಕ್ಯಾರೆ ಅನ್ನುತ್ತಿಲ್ಲ.
ಅಕ್ರಮ ಮರಳುಗಾರಿಕೆ ವಿರುದ್ದ ಕೈ-ಬಿಜೆಪಿ, ಹಾಲಿ ಮಾಜಿ ಶಾಸಕರಿಂದ ಅಸಮಾಧಾನ:
ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನಲ್ಲ ಹಲವು ದಿನದಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಇದನ್ನ ನಿಲ್ಲಿಸುವ ಪ್ರಯತ್ನ ನಡೆಯುತ್ತಿಲ್ಲ, ಹಾಲಿ ಶಾಸಕರು ಕೆಲ ದಿನಗಳ ಹಿಂದೆ ರಾಜನಹಳ್ಳಿ ಬಳಿ ಅಕ್ರಮ ಮರಳು ಸಾಗಿಸುತ್ತಿದ್ದ 7 ಟಿಪ್ಪರ್ 3 ಮಜ್ಡಾ ವಾಹನಗಳನ್ನ ತಡೆದು ನಿಲ್ಲಿಸಿದ್ದರು. ಅದರೆ ಕೆಲ ಸಮಯದ ನಂತರ ಎಲ್ಲಾ ವಾಹನಗಳು ಸ್ಥಳದಿಂದ ತೆರಳಿ ಪುನಃ ತಮ್ಮ ಅಕ್ರಮ ಚಟುವಟಿಕೆ ಪ್ರಾರಂಭ ಮಾಡಿದ್ದರು.
ಹರಿಹರದ ಒಂದು ಸಭೆಯಲ್ಲಿ ಅಕ್ರಮ ಮರಳುಗಾರಿಕೆ ಬಗ್ಗೆ ಮಾಜಿ ಶಾಸಕರು ಓರ್ವ ವ್ಯಕ್ತಿಯ ಹಸರು ಹೇಳಿ ತುಂಬಾ ಸುದ್ದಿಯಾಗಿ ಮರಳುಗಾರಿಕೆ ನಿಂತಿತ್ತು. ಆದ್ರೆ ಅದೂ ಕೂಡ ತುಂಬಾ ದಿನ
ನಿಲ್ಲಲಿಲ್ಲ, ಇಬ್ಬರೂ ಇದೀಗ ಸುಮ್ಮನಾಗಿರುವುದು ಯಾಕೇ ಎಂಬ ಯಕ್ಷ ಪ್ರಶ್ನೆ ಯಾಗಿದೆ. ಇದೀಗ ಪುನಃ ಅಕ್ರಮ ಮರಳುಗಾರಿಕೆ ಹರಿಹರ ತಾಲ್ಲೂಕು, ಹೊನ್ನಾಳಿ ತಾಲ್ಲೂಕಿನಲ್ಲಿ ಪ್ರಾರಂಭವಾಗಿದ್ದರೂ ಯಾರಿಂದಲೂ ನಿಲ್ಲಿಸೋಕೆ ಸಾಧ್ಯವಾಗುತ್ತಿಲ್ಲವಂತೆ.
ನಾಲ್ಕೂ ಜಿಲ್ಲೆಯಲ್ಲಿ ” ಭಾಯಿ” ಹಾಗೂ ” ಐ ಎಸ್ ” ಎಂಬ ಹೆಸರಿನ ಕೋಡ್ ವರ್ಡ್:
ದಾವಣಗೆರೆ, ಹಾವೇರಿ, ಶಿವಮೊಗ್ಗ,bಚಿತ್ರದುರ್ಗ ಜಿಲ್ಲೆಯಲ್ಲಿ ರಾಜ್ಯದ ನಾಗರಿಕ ಶಕ್ತಿ, ಅಪರಾಧದ ತಡೆಗಟ್ಟುವಿಕೆ ಮತ್ತು ಪತ್ತೆಹಚ್ಚುವಿಕೆ ಮತ್ತು ಸಾರ್ವಜನಿಕ ಆದೇಶದ ನಿರ್ವಹಣೆಯ ಜವಾಬ್ದಾರಿಹೊಂದಿರುವವರು ‘ಭಾಯಿ’ ‘ಐ ಎಸ್’ ಎಂಬ ಕೋಡ್ ವರ್ಡ್ ಹೆಸರಿಗೆ ಹೆದರಿದ್ದಾರಂತೆ.ಈ ಸೈನ್ಯದಿಂದ ಅಧಿಕಾರಶಾಹಿಗಳು ಮಂಡಿಯೂರಿದ ಬಗ್ಗೆ ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.
ಅಕ್ರಮ ಮರಳುಗಾರಿಕೆ ನಡೆಸಲು ಉತ್ತರ ಪ್ರದೇಶದ ಕಾರ್ಮಿಕರನ್ನ ಬಳಸಿಕೊಂಡಿದ್ದರೂ,ಅಕ್ರಮ ತಡೆಯುವ ಸೈನ್ಯ ಕೊರೊನಾ ನೆನಪಲ್ಲಿ ಮುಳುಗಿದೆ ಅಂತಾ ಸಾರ್ವಜನಿಕವಾಗಿ ಕೇಳಿಬರುತ್ತಿದೆ.