ತುಂಗಭದ್ರ ನದಿ ದಡದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳು ವಶಪಡಿಸಿಕೊಂಡ ಹರಿಹರ ಪೋಲೀಸ್
ದಾವಣಗೆರೆ: ಪರವಾನಿಗೆ ಪಡೆಯದೇ ಅಕ್ರಮವಾಗಿ ಮರಳನ್ನು ಕಳ್ಳತನ ಮಾಡಿ, ನದಿಯ ದಡದಲ್ಲಿ ಸಂಗ್ರಹಿಸಿದ್ದ ಅಡ್ಡೆಯ ಮೇಲೆ ಹರಿಹರ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಮರಳನ್ನು ವಶಕ್ಕೆ ಪಡೆದಿದ್ದಾರೆ.ಹರಿಹರ ತಾಲೂಕಿನ ಗುತ್ತೂರು ಗ್ರಾಮದ ಹಿಂಭಾಗ ಹಾದು ಹೋಗಿರುವ ತುಂಗಾಭದ್ರ ನದಿಯ ದಡದಲ್ಲಿ ಮರಳು ದಾಸ್ತಾನು ಮಾಡಿರುವ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಡಿ.ರವಿಕುಮಾರ್ ಅವರ ನೇತೃತ್ವದಲ್ಲಿ ದಾಳಿ ನಡೆಸಿರುವ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲೆಬೆನ್ನೂರು ಪೋಲೀಸ್ ಠಾಣಾ ವ್ಯಾಪ್ತಿಯ ವಿಶೇಷ ಕರ್ತವ್ಯದ ಮೇಲೆ ಗಸ್ತಿನಲ್ಲಿದ್ದಾಗ, ಗೋವಿನಹಾಳ್ ಗ್ರಾಮದ ಶ್ರೀ ಹಾಲಸ್ವಾಮಿ ರವರ ಜಮೀನಿಗೆ ಹೊಂದಿಕೊಂಡಿರುವ ತುಂಗಾಭದ್ರಾ ನದಿಯ ದಡದಲ್ಲಿ ಯಾರೋ ಕಳ್ಳರು ತುಂಗಾಭದ್ರಾ ನದಿ ಮರಳನ್ನು ಅಕ್ರಮವಾಗಿ ಕಳ್ಳತನ ಮಾಡಿ, ಸಾಗಾಣಿಕೆ ಮೂಲಕ ಅಕ್ರಮವಾಗಿ ಮಾರಾಟ ಮಾಡಿ ಹಣಗಳಿಸುವ ಉದ್ದೇಶದಿಂದ ಸುಮಾರು 03 ಟ್ರಾಕ್ಟರ್ ಲೋಡ್ಗಳಷ್ಟು ಮರಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವುದಾಗಿ ಭಾತ್ಮೀದಾರರಿಂದ ಖಚಿತ ಮಾಹಿತಿ ಬಂದಿರುತ್ತದೆ. ಆದ್ದರಿಂದ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು” ನೀಡಿದ ದೂರನ್ನು ಸ್ವೀಕರಿಸಿ ಠಾಣಾ ಗುನ್ನೆ ನಂ: 91/2021, ಕಲಂ 379 ಐ.ಪಿ.ಸಿ ರಿತ್ಯಾ ಪ್ರಕರಣ ದಾಖಲಿಸಲಾಗಿದೆ.