Garudavoice Big Impact: ಎಸ್ ಪಿ ರಿಷ್ಯಂತ್ ಖಡಕ್ ಸೂಚನೆ: ಪೊಲೀಸರಿಂದ 2 ಲಕ್ಷ ಮೌಲ್ಯದ ಮರಳು ವಶ

ದಾವಣಗೆರೆ: ಅಕ್ರಮ ಮರಳು ಸಂಗ್ರಹಣೆ ಸ್ಥಳಗಳನ್ನು ಪತ್ತೆ ಹಚ್ಚಿರುವ ಮಲೆಬೆನ್ನೂರು ಠಾಣೆ ಪೊಲೀಸರು 2 ಲಕ್ಷ ರೂ., ಗೂ ಅಧಿಕ ಮೌಲ್ಯದ ಮರಳು ವಶಪಡಿಸಿಕೊಂಡಿದ್ದಾರೆ.

24 ಗಂಟೆಯಲ್ಲೆ ನೂತನ ಎಸ್ ಪಿ ರಿಷ್ಯಂತ್ ರಿಂದ ದಾವಣಗೆರೆಯಲ್ಲಿ ಅವ್ಯಾಹಿತವಾಗಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಇತ್ತೀಚೆಗೆ ಗರುಡಾವಾಯ್ಸ್ ವಾಹಿನಿ ಅಕ್ರಮ ಮರಳುಗಾರಿಕೆ ವಿರುದ್ದ ವರದಿ ಮಾಡಿತ್ತು. ಇದೀಗ ಹರಿಹರ ತಾಲ್ಲೂಕಿನ ತುಂಗಭದ್ರಾ ನದಿತಡದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನ ವಶಪಡಿಸಿಕೊಳ್ಳಲಾಗಿದೆ.

ಹರಿಹರ ತಾಲ್ಲೂಕಿನಲ್ಲಿರುವ ತುಂಗಭದ್ರ ನದಿ ತಡದಲ್ಲಿರುವ ಕೆಲ ಗ್ರಾಮಗಳ ವ್ಯಾಪ್ತಿಯಲ್ಲಿ ಇನ್ನು ಅಕ್ರಮವಾಗಿ ಸಂಗ್ರಹಿಸಿರುವ ಮರಳು ಇರಬಹುದಾ..?

ಗರುಡವಾಯ್ಸ್ ವರದಿ:

https://garudavoice.com/2021/06/06/illigal-activities-have-bhai-and-is-code-wordnobody-ready-to-stop-illigal-mafiya-persons/

ನಿನ್ನೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದ ಎಸ್ ಪಿ ಅಕ್ರಮ ಮರಳು ಸಂಗ್ರಹಣೆ ಮಾಡಿರುವವರ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸ್ ಅಧೀಕ್ಷಕರ ಸೂಚನೆ ಹಿನ್ನೆಲೆಯಲ್ಲಿ ಡಿವೈಎಸ್‌ಪಿ ದಾವಣಗೆರೆ ಗ್ರಾಮಾಂತರ ಅವರ ಮಾರ್ಗದರ್ಶನದಲ್ಲಿ ಹರಿಹರ ವೃತ್ತ ಸಿಪಿಐ ಸತೀಶ್ ಕುಮಾರ್.ಯು., ಮಲೇಬೆನ್ನೂರು ಪಿಎಸ್‌ಐ ವೀರಬಸಪ್ಪ ಕುಸಲಾಪುರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಬಸವರಾಜ್ ಟಿ. ಮೂರ್ತಿ.ಜೆ.ಎಸ್. ಸಂತೋಷ್ ಕುಮಾರ್.ಹೆಚ್.ಜಿ. ಅವರನ್ನೊಳಗೊಂಡ ತಂಡ ಶನಿವಾರ ಮಲೇಬೆನ್ನೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ತುಂಗಾಭದ್ರಾ ನದಿ ತೀರದಲ್ಲಿನ ಸ್ಥಳಗಳಲ್ಲಿ ಗಸ್ತು ಮಾಡಿದಾಗ ಅಕ್ರಮ‌ ಮರಳು ಸಂಗ್ರಹಗಳು ಕಂಡು ಬಂದಿದ್ದು ಈ ತಂಡ ದಾಳಿ ನಡೆಸಿದೆ.

ಇಂಗಳಗೊಂದಿ ಗ್ರಾಮದ ತುಂಗಾಭದ್ರಾ ನದಿ ತೀರದಲ್ಲಿ ಸಂಗ್ರಹಿಸಿದ್ದ ಸುಮಾರು 08 ಟಿಪ್ಪರ್ ಲೋಡ್ ಮರಳು ಕಂಡು ಬಂದಿದೆ. ಇದರ ಅಂದಾಜು ಎರಡು ಲಕ್ಷ ರೂ. ಗಳಾಗಿದೆ. ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ನಂದಿಗಾವಿ ಗ್ರಾಮದ ಬಳಿ ತುಂಗಾಭದ್ರಾ ನದಿ ತೀರದಲ್ಲಿ ಸಂಗ್ರಹಿಸಿದ್ದ ಸುಮಾರು 04 ಟ್ರಾಕ್ಟರ್ ಲೋಡ್ ವಶಪಡಿಸಿ ಕೊಳ್ಳಲಾಗಿದೆ.‌ ಇದರ ಅಂದಾಜು ಬೆಲೆ 24 ಸಾವಿರಗಳಾಗಿದೆ. ಪ್ರಕರಣ ಸಂಬಂಧ ಆರೋಪಿತರ ವಿರುದ್ದ ಎರಡು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *

error: Content is protected !!