ಕನ್ನಡ ಸಾಹಿತ್ಯ ಪರಿಷತ್ತಿನ 2021-2026ರ ಅವಧಿಯ ಕಾರ್ಯ ಚಟುವಟಿಕೆಗಳ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಸೇವಾ ಸ್ವೀಕಾರ ಸಮಾರಂಭ
ದಾವಣಗೆರೆ : ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 2021-2026ರ ಅವಧಿಯ ಕಾರ್ಯ ಚಟುವಟಿಕೆಗಳ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಸೇವಾ ಸ್ವೀಕಾರ ಸಮಾರಂಭವನ್ನು ನಗರದ ಕುವೆಂಪು ಕನ್ನಡ ಭವನದಲ್ಲಿ ಮಾ. 12ರ ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ದಿವ್ಯಸಾನ್ನಿಧ್ಯವನ್ನು ಪರಮಪೂಜ್ಯ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದಾರೆ. ಶರಣಪ್ಪ ವಿ. ಹಲಸೆ ಕಾರ್ಯ ಚಟುವಟಿಕೆಗಳ ಉದ್ಘಾಟನೆ ಮಾಡಲಿದ್ದಾರೆ. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ ರವೀಂದ್ರನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಸೇವಾ ಸ್ವೀಕಾರ ಮಾಡಲಿದ್ದಾರೆ. ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ.ಹೆಚ್.ಎಸ್ ಮಂಜುನಾಥ ಕುರ್ಕಿ ಸೇವಾ ಹಸ್ತಾಂತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಮಾಯಕೊಂಡ ಶಾಸಕ ಎನ್. ಲಿಂಗಣ್ಣ, ಮಹಾಪೌರರಾದ ಜಯಮ್ಮ ಗೋಪಿನಾಯ್ಕ್ ಭಾಗವಹಿಸಲಿದ್ದಾರೆ. ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರುಗಳು ಗೌರವ ಉಪಸ್ಥಿತಿ ಇರುವರು.
2021-2026ರ ಅವಧಿಯ ಪದಾಧಿಕಾರಿಗಳು :
ಅಧ್ಯಕ್ಷ ಬಿ. ವಾಮದೇವಪ್ಪ, ಗೌರವ ಕಾರ್ಯದರ್ಶಿಗಳಾಗಿ ಬಿ. ದಿಳ್ಳೆಪ್ಪ, ರೇವಣಸಿದ್ದಪ್ಪ ಅಂಗಡಿ, ಗೌರವ ಕೋಶಾಧ್ಯಕ್ಷರಾಗಿ ಕೆ. ರಾಘವೇಂದ್ರ ನಾಯರಿ, ತಾಲೂಕು ಅಧ್ಯಕ್ಷರುಗಳಾಗಿ ಸುಮತಿ ಎ.ಜಿ, (ದಾವಣಗೆರೆ), ಡಿ.ಎಂ. ಮಂಜುನಾಥಯ್ಯ, (ಹರಿಹರ), ಎಲ್.ಜಿ. ಮಧುಕುಮಾರ್ (ಚನ್ನಗಿರಿ), ಜಿ. ಮುರುಗೆಪ್ಪಗೌಡ (ಹೊನ್ನಾಳಿ), ಡಿ.ಎಂ. ಹಾಲಾರಾಧ್ಯ (ನ್ಯಾಮತಿ), ಕೆ. ಸುಜಾತಮ್ಮ (ಜಗಳೂರು). ಹಾಗೆಯೇ ಮಹಿಳಾ ಸಾಹಿತಿಯಾಗಿ ಎಸ್.ಎಂ. ಮಲ್ಲಮ್ಮ, ಜ್ಯೋತಿ ಎಸ್. ಉಪಾಧ್ಯಾಯ, ಪರಿಶಿಷ್ಟ ಜಾತಿ ಪ್ರತಿನಿಧಿಗಳಾಗಿ ಸಿ.ಕೆ. ರುದ್ರಾಕ್ಷಿಬಾಯಿ, ಭೈರೇಶ್ವರ ಬಿ.ಎಂ. ಪರಿಶಿಷ್ಟ ಪಂಗಡ ಪ್ರತಿನಿಧಿಯಾಗಿ ಹೆಚ್.ಕೆ. ಸತ್ಯಭಾಮ, ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಎನ್. ಎಸ್. ರಾಜು, ವಾರ್ತಾಧಿಕಾರಿ ಅಶೋಕ ಕುಮಾರ್ ಡಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ನಿಕಟ ಪೂರ್ವ ಅಧ್ಯಕ್ಷರಾಗಿ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ 2021-2026ರ ಅವಧಿಯ ಪದಾಧಿಕಾರಿಗಳಾಗಿ ಮುಂದುವರೆಯಲಿದ್ದಾರೆ.