ದೂಡಾ ಅಧ್ಯಕ್ಷ ಎ ವೈ ಪ್ರಕಾಶ್ ರಿಂದ ವಿವಿಧ ಕಾಮಗಾರಿಗಳ ಉದ್ಘಾಟನೆ

IMG-20230328-WA0004

ದಾವಣಗೆರೆ: ದಿನಾಂಕ 28.03.2023 ರಂದು ಮಹಾನಗರ ಪಾಲಿಕೆಯ ಸಾಮಾನ್ಯ ನಿಧಿಯಲ್ಲಿ ಸುಮಾರು 19 ಲಕ್ಷ ರೂಪಾಯಿಗಳ ವೆಚ್ಚದಲ್ಲಿ 32ನೇ ವಾರ್ಡಿನ ಅಂಬಿಕಾ ಬಡಾವಣೆಯ ರಸ್ತೆಗೆ ವಿದ್ಯುತ್ ದೀಪ ಅಳವಡಿಸುವ ಕಾಮಗಾರಿಯನ್ನು ಗುದ್ದಲಿ ಪೂಜೆ ಮಾಡುವುದರ ಮೂಲಕ ಎಸ್‌ಸಿ ರವೀಂದ್ರನಾಥ್ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರು ನೆರವೇರಿಸಿದರು.

ದೂಡಾ ಅಧ್ಯಕ್ಷ ಎ ವೈ ಪ್ರಕಾಶ್ ರಿಂದ ವಿವಿಧ ಕಾಮಗಾರಿಗಳ ಉದ್ಘಾಟನೆ

ಕಾಮಗಾರಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಶಾಸಕರು ಆದಷ್ಟು ಬೇಗ ವಿದ್ಯುತ್ ದೀಪ ಅಳವಡಿಸುವ ಕಾಮಗಾರಿಯನ್ನು ಮುಗಿಸುವಂತೆ ಗುಣಮಟ್ಟದ ದೀಪಗಳನ್ನು ಹಾಕಿಸಲು ಸಂಬಂಧಪಟ್ಟ ಗುತ್ತಿಗೆದಾರರಿಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಅಂಬಿಕಾ ಬಡಾವಣಿಗೆ ಹೋಗುವ ದಾರಿಗೆ ಪದ್ಮಭೂಷಣ ಡಾಕ್ಟರ್ ರಾಜಕುಮಾರ್ ರಸ್ತೆ ಎಂದು ನಾಮ ಫಲಕವನ್ನು ಶಾಸಕರು ಅನಾವರಣ ಮಾಡಿದರು.

ದೂಡಾ ಅಧ್ಯಕ್ಷ ಎ ವೈ ಪ್ರಕಾಶ್ ರಿಂದ ವಿವಿಧ ಕಾಮಗಾರಿಗಳ ಉದ್ಘಾಟನೆ

ಶಕ್ತಿನಗರದ ವೃತ್ತಕ್ಕೆ ಭೀಷ್ಮ ವೃತ್ತ ಎಂದು ನಾಮಕರಣ ಮಾಡಲಾಯಿತು. ಭಗೀರಥ ವೃತ್ತದಲ್ಲಿ ಮಹಾನಗರ ಪಾಲಿಕೆಯ ವತಿಯಿಂದ ನಿರ್ಮಿಸಲಾದ ನಾಮಪಲಕವನ್ನು ಅನಾವರಣ ಮಾಡಿದರು. ಈ ಸಮಯದಲ್ಲಿ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎ ವೈ ಪ್ರಕಾಶ್ ರವರು ಹಾಗೂ ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀಮತಿ ಉಮಾ ಪ್ರಕಾಶ್ ರವರು ಭಾರತೀಯ ಜನತಾ ಪಕ್ಷದ ಮುಖಂಡರಾದ ಮಲ್ಲಿಕಾರ್ಜುನ್ ಹನುಮಂತಪ್ಪ, ಯು ರಾಜೇಂದ್ರ, ಮಂಜುನಾಥ್, ಅಣ್ಣಪ್ಪ, ವಾಸುದೇವ್ ಸಾಕ್ರೆ, ಯೋಗರಾಜ್, ಮಾಯಕೊಂಡ ಮಂಜುನಾಥ್, ಗುತ್ತೂರು ಮಂಜುನಾಥ್, ಶಶಿಕುಮಾರ್, ಇನ್ನು ಮುಂತಾದವರು ಹಾಜರಿದ್ದರು.ದೂಡಾ ಅಧ್ಯಕ್ಷ ಎ ವೈ ಪ್ರಕಾಶ್ ರಿಂದ ವಿವಿಧ ಕಾಮಗಾರಿಗಳ ಉದ್ಘಾಟನೆ

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!