ಎಲ್ಪಿಜಿ ಸಿಲಿಂಡರ್ ಸಬ್ಸಿಡಿ ದರದಲ್ಲಿ 200ರೂ ನಿಂದ 300ರೂ ಹೆಚ್ಚಳ ಮಹತ್ವದ ಕ್ರಮ – ಸಿ. ಮಂಜುಳ
ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ದೇಶದ ಎಲ್ಲಾ ಮಹಿಳೆಯರಿಗೆ ಭರ್ಜರಿ ಉಡುಗೊರೆ ನೀಡಿದ್ದು, ಉಜ್ವಲ ಯೋಜನೆಯಡಿ ಎಲ್ಪಿಜಿ ಸಿಲಿಂಡರ್ನ ದರದ ಮೇಲಿನ ರೂ. 100 ಕಡಿಮೆ ಮಾಡಿದ್ದಾರೆ. ಇದನ್ನು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಕು. ಸಿ. ಮಂಜುಳ ಅವರು ಸ್ವಾಗತಿಸಿದ್ದಾರೆ.
ಮೋದಿಜಿ ಅವರ ನೇತೃತ್ವದ ಬಿಜೆಪಿ ಸರ್ಕಾರವು ಉಜ್ವಲ ಯೋಜನೆಯಡಿಯ ಎಲ್ಪಿಜಿ ಸಿಲಿಂಡರ್ನ ಸಬ್ಸಿಡಿ ದರವನ್ನು 200ರೂ ರಿಂದ 300ರೂ ಹೆಚ್ಚಿಸಿದೆ. ಇದು ದೇಶದಾದ್ಯಂತ 10 ಕೋಟಿಗೂ ಹೆಚ್ಚು ಕುಟುಂಬಗಳ ಆರ್ಥಿಕ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲಿದೆ. ವಿಶೇಷವಾಗಿ ನಮ್ಮ ನಾರಿ ಶಕ್ತಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದಾರೆ ಹಾಗೂ ಮೋದಿಜಿ ಕ್ರಮಕ್ಕಾಗಿ ರಾಜ್ಯದ ಜನತೆಯ ಪರವಾಗಿ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.
ಅಡುಗೆ ಅನಿಲ ಸಿಲಿಂಡರ್ ಹೆಚ್ಚು ಕೈಗೆಟಕುವಂತೆ ಮಾಡುವ ಮೂಲಕ, ನಾವು ಕುಟುಂಬಗಳ ಯೋಗಕ್ಷೇಮವನ್ನು ಮತ್ತು ಆರೋಗ್ಯಕರ ವಾತಾವರಣವನ್ನು ಖಚಿತಪಡಿಸಿಕೊಳ್ಳುವ ಗುರಿ ಹೊಂದಿದ್ದೇವೆ. ಇದು ಮಹಿಳೆಯರ ಸಬಲೀಕರಣ ಮತ್ತು ಅವರಿಗೆ ಸುಲಭವಾಗಿ ಬದುಕುವ ಅವಕಾಶವನ್ನು ಖಾತ್ರಿಪಡಿಸುತ್ತದೆ. ಇದು ಬಿಜೆಪಿಯ ಬದ್ಧತೆಯನ್ನು ಪ್ರತಿಫಲಿಸುವಂತಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಸೃಷ್ಟಿ ಪಾಟೀಲ್
ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷರು
ಬಿಜೆಪಿ ಹಾವೇರಿ