ಭಾರತ ದೇಶದಲ್ಲಿರುವ ರೈಲ್ವೇ ಬಗ್ಗೆ ಗರುಡವಾಯ್ಸ್ ಓದುಗರಿಗಾಗಿ ಸಂಪೂರ್ಣ ಮಾಹಿತಿ

ದಾವಣಗೆರೆ: ಭಾರತೀಯ ರೈಲ್ವೆ ಮಾಹಿತಿ ಭಾರತದಲ್ಲಿ ಒಟ್ಟು 17 ರೈಲ್ವೆ ವಲಯಗಳಿವೆ. ಅವುಗಳನ್ನು ಈ ಕೆಳಗಿನಂತೆ ನೋಡಬಹುದಾಗಿದೆ.

ದೇಶದ ರೈಲ್ವೆ ವಲಯಗಳ ಕೇಂದ್ರ ಕಚೇರಿ:
1 ಉತ್ತರ ರೈಲ್ವೆ ವಲಯ ದೆಹಲಿ
2 ದಕ್ಷಿಣ ರೈಲ್ವೆ ವಲಯ ಚೈನ್ನೈ (ತಮಿಳುನಾಡು)
3 ಕೇಂದ್ರೀಯ ವಲಯ ಮುಂಬೈ
4 ಪಶ್ಚಿಮ ವಲಯ ಮುಂಬೈ
5 ಆಗ್ನೇಯ ವಲಯ ಕೋಲ್ಕತ್ತಾ (ಪ.ಬಂಗಾಳ)
6 ಈಶಾನ್ಯ ವಲಯ ಗೋರಖ್ ಪುರ (ಉತ್ತರಪ್ರದೇಶ)
7 ಈಶಾನ್ಯ ಗಡಿ ವಲಯ ಗೌಹಾತಿ (ಅಸ್ಸಾಂ)
8 ದಕ್ಷಿಣ ಕೇಂದ್ರ ಸಿಕಂದರಾಬಾದ್ (ತೆಲಂಗಾಣಾ)
9 ಪೂರ್ವಕೇಂದ್ರೀಯ ವಲಯ ಹಾಜಿಪುರ (ಬಿಹಾರ)
10 ವಾಯುವ್ಯ ವಲಯ ಜೈಪುರ (ರಾಜಸ್ಥಾನ)
11 ಪೂರ್ವ ಕರಾವಳಿ ವಲಯ ಭುವನೇಶ್ವರ (ಒಡಿಶಾ)
12 ಉತ್ತರ ಕೇಂದ್ರ ವಲಯ ಅಲಹಾಬಾದ್ (ಉತ್ತರಪ್ರದೇಶ)
13 ಆಗ್ನೇಯ ಕೇಂದ್ರ ವಲಯ ಬಿಲಾಸ್ ಪುರ (ಛತ್ತೀಸ್ ಗಡ)
14 ನೈರುತ್ಯ ಕೇಂದ್ರ ವಲಯ ಹುಬ್ಬಳ್ಳಿ
15 ದಕ್ಷಿಣ ಕೇಂದ್ರ ವಲಯ ಚೈನ್ನೈ (ತಮಿಳುನಾಡು)
16 ಕೋಲ್ಕತ್ತಾ ಮೆಟ್ರೋ ಕೋಲ್ಕತ್ತಾ
17 ಪಶ್ಚಿಮ ಕೇಂದ್ರ ವಲಯ ಜಬ್ಬಲ್ ಪುರ (ಮಧ್ಯಪ್ರದೇಶ)

ರೈಲ್ವೆ ಗೇಜ್ ಗಳು:-

ರೈಲಿನಲ್ಲಿರುವ ಗೇಜ್ ಗಳ ವಿಧಗಳು ಈ ಕೆಳಗಿನಂತಿವೆ.

  1. ಬ್ರಾಡ್ ಗೇಜ್ (1.676 ಮೀ)
  2. ಮೀಟರ್ ಗೇಜ್ (1 ಮೀಟರ್)
  3. ನ್ಯಾರೋ ಗೇಜ್ (0.610 ಮೀಟರ್)

ಮೆಟ್ರೋ ರೈಲುಗಳು

ಭಾರತದ ದೇಶದ ಮೆಟ್ರೋ ರೈಲುಗಳ ಬಗ್ಗೆ ನಾವು ಇಲ್ಲಿ ಮಾಹಿತಿ ಪಡೆಯಬಹುದಾಗಿದೆ.

ಮೊದಲ ಮೆಟ್ರೋ ರೈಲು:- ಕೋಲ್ಕತ್ತಾ ಮೆಟ್ರೋ ರೈಲು ಭಾರತದ ಮೊದಲ ಮೆಟ್ರೋ ರೈಲಾಗಿದೆ. ಇದು ಅಕ್ಟೋಬರ್ 24, 1984 ರಂದು ಕಾರ್ಯಾರಂಭ ಮಾಡಿತು.

♣ ಚೈನ್ನೈನ ಮೆಟ್ರೋ ರೈಲು 1995 ರಲ್ಲಿ ಪ್ರಾರಂಭವಾಯಿತು.

♣ ದೆಹಲಿ ಮೆಟ್ರೋ ರೈಲು ಡಿಸೆಂಬರ್ 24, 2002 ರಲ್ಲಿ ಕಾರ್ಯಾರಂಭ ಮಾಡಿತು. ದೆಹಲಿ ಮೆಟ್ರೋ ರೈಲು ದೇಶದ ಮೂರನೇ ಹಾಗು ಮೊದಲ ಆಧುನಿಕ ಮೆಟ್ರೋ ರೈಲಾಗಿದೆ.

♣ ಇ. ಶ್ರೀಧರನ್ ಅವರನ್ನು “ಮೆಟ್ರೋಮ್ಯಾನ್” ಎಂದು ಕರೆಯುತ್ತಾರೆ. ಇವರು ಭಾರತೀಯ ಎಂಜಿನಿಯರಿಂಗ್ ಸೇವೆಯ ನಿವೃತ್ತ ಅಧಿಕಾರಿಯಾಗಿದ್ದಾರೆ. ಇವರು ದೆಹಲಿ ಮೆಟ್ರೋ ಮತ್ತು ಕೊಂಕಣ ರೈಲ್ವೆಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಬಿರುದನ್ನು ಅವರಿಗೆ ನೀಡಲಾಗಿದೆ. ಇವರಿಗೆ ಪದ್ಮಶೀ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳು ಸಂದಿವೆ.

ದೇಶದ ಇನ್ನಿತರೆ ಮೆಟ್ರೋ ರೈಲುಗಳೆಂದರೇ:-

ಗುರಗಾಂವ್ ಮೆಟ್ರೋ ರೈಲು :- ಇದು ನವೆಂಬರ್ 14, 2013 ರಂದು ತನ್ನ ಕಾರ್ಯವನ್ನು ಪ್ರಾರಂಭಿಸಿತು. ಇದು ದೇಶದ ಮೊದಲ ಸಂಪೂರ್ಣ ಖಾಸಗಿ ಹಣಕಾಸಿನಿಂದ ನಿರ್ಮಿತ ಮೆಟ್ರೋ ಎಂಬಾ ಖ್ಯಾತಿಯನ್ನು ಗಳಿಸಿದೆ. ಇದನ್ನು ರ್ಯಾಪಿಡ್ ಮೆಟ್ರೋ ರೈಲ್ವೆ ಗುರಗಾಂವ್ ಲಿಮಿಟೆಡ್ ನವರು ನಿರ್ಮಿಸಿದ್ದಾರೆ.

ನಮ್ಮ ಮೆಟ್ರೋ:- ಇದು ಬೆಂಗಳೂರು ನಗರದ ಮೆಟ್ರೋ ರೈಲು ವ್ಯವಸ್ಥೆಯಾಗಿದ್ದು 20 ಅಕ್ಟೋಬರ್ 2011 ರಂದು ಕಾರ್ಯಾರಂಭ ಮಾಡಿತು.

ಮುಂಬೈ ಮೆಟ್ರೋ:- ಇದು ಜೂನ್ 8, 2014 ರಂದು ಕಾರ್ಯಾರಂಭ ಮಾಡಿತು.

ರೈಲ್ವೆ ಉತ್ಪಾದನಾ ಘಟಕಗಳು

ರೈಲ್ವೆ ಬೋಗಿ ತಯಾರಿಕಾ ಕಾರ್ಖಾನೆ:- ಪಂಜಾಬ್ ನ ಕಪುರ್ ತಾಲನಲ್ಲಿ ರೈಲ್ವೆ ಬೋಗಿ ತಯಾರಿಕಾ ಕಾರ್ಖಾನೆ ಇದೆ. 1986 ರಲ್ಲಿ ಈ ಘಟಕವು ಸ್ಥಾಪನೆಯಾಯಿತು. ಇದು ಪ್ಯಾಸೆಂಜರ್ ಬೋಗಿಗಳನ್ನು ತಯಾರಿಸುತ್ತದೆ.

ಉತ್ತರಪ್ರದೇಶದ ರಾಯ್ ಬರೇಲಿಯಲ್ಲಿ 2012 ರಲ್ಲಿ ಸ್ಥಾಪನೆಯಾದ ರೈಲ್ವೆ ಬೋಗಿ ತಯಾರಿಕಾ ಘಟಕವು ಪ್ಯಾಸೆಂಜರ್ ಬೋಗಿಗಳನ್ನು ತಯಾರಿಸುವುದು.

ಇಂಟಿಗ್ರೇಲ್ ಕೋಚ್ ಫ್ಯಾಕ್ಟರಿ:- ತಮಿಳುನಾಡಿನ ಚೆನ್ನೈನಲ್ಲಿರುವ ಘಟಕವು ಪ್ಯಾಸೆಂಜರ್ ಬೋಗಿಗಳನ್ನು ತಯಾರಿಸುತ್ತದೆ. ಇದು 1952 ರಲ್ಲಿ ಸ್ಥಾಪನೆಯಾಯಿತು.

ಚಿತ್ತರಂಜನ್ ಲೋಕೋಮೋಟಿವ್ ವರ್ಕ್ಸ್:– 1947 ರಲ್ಲಿ ಸ್ಥಾಪನೆಯಾದ ಈ ಘಟಕವು ಎಲೆಕ್ಟ್ರಿಕಲ್ ಲೋಕೋಮೋಟಿವ್ಸ್ ಗಳನ್ನು ತಯಾರಿಸುತ್ತದೆ.

ಬೆಂಗಳೂರಿನ ಯಲಹಂಕಾದಲ್ಲಿ ರೈಲಿನ ಅಚ್ಚು ಮತ್ತು ಗಾಲಿಗಳು ತಯಾರಾಗುತ್ತವೆ.

ಡೀಸೆಲ್ ಲೋಕೋಮಾರ್ಡನೈಸೇಷನ್ ಕಾರ್ಖಾನೆ:- 1981 ರಲ್ಲಿ ಸ್ಥಾಪನೆಯಾದ ಈ ಘಟಕವು ಡೀಸೆಲ್ – ಎಲೆಕ್ಟ್ರಿಕ್ ಲೋಕೋಮೋಟಿವ್ಸ್ ತಯಾರಿಸುತ್ತದೆ. ಇದು ಪಂಜಾಬ್ ನ ಪಟಿಯಾಲಾದಲ್ಲಿದೆ

Source – Uttangi Rudrappa Kotresh

Leave a Reply

Your email address will not be published. Required fields are marked *

error: Content is protected !!